ಬಳ್ಳಾರಿ: ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್‌ ವಾರ್ಷಿಕೋತ್ಸವ

Upayuktha
0


ಬಳ್ಳಾರಿ: ನಗರದ ಡಾ||ರಾಜ್‌ಕುಮಾರ್ ರಸ್ತೆಯಲ್ಲಿರುವ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್‌ನಲ್ಲಿ ಸೋಮವಾರದಂದು ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್‌ನಲ್ಲಿ 20ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಆಚರಣೆಯು ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.


ಸಾಯಂಕಾಲ 6.00 ಗಂಟೆಗೆ ಪ್ರಾರಂಭವಾದ ಈ ವಾರ್ಷಿಕೋತ್ಸವದ ಕಾರ್ಯಕ್ರಮವು ಕುಮಾರಿ ಮೇಧ ಮತ್ತು ತಂಡದಿಂದ ನಾಡಗೀತೆಯನ್ನು ಹಾಡುವುದರ ಮೂಲಕ ಪ್ರಾರಂಭವಾಗಿ ಬಿ.ಪಿ.ಎಸ್.ಸಿ ಕಿಡ್ಸ್ ಅಕಾಡೆಮಿ (ಪೂರ್ವ ಪ್ರಾಥಮಿಕ) ಮಕ್ಕಳ ಸಾಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ಮಕ್ಕಳ ನೃತ್ಯಗಾನವು ಅತ್ಯಂತ ಮನೋಹರವಾಗಿದ್ದು ನೆರೆದಿದ್ದ ಪ್ರೇಕ್ಷಕರನ್ನೆಲ್ಲ ಸಂತೋಷದ ಕಡಲಲ್ಲಿ ತೇಲಿಸಿತು. ನಂತರ ಶಾಲಾ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭವನ್ನು ಗಣೇಶನ ಪ್ರಾರ್ಥನೆಯನ್ನು ೮ನೇ ತರಗತಿಯ ಸಾನ್ವಿ ಮತ್ತು ತಂಡದವರು ನಡೆಸಿಕೊಟ್ಟರು. 


ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಿಷ್ಕಿಂದಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ.ಟಿ.ಎನ್. ನಾಗಭೂಷಣರವರು, ಗೌರವ ಅತಿಥಿಗಳಾದ ಡಾ||ಯೋಗಾನಂದ ರೆಡ್ಡಿಯವರನ್ನು ಹಾಗೂ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್‌ನ ಹಾಗೂ ಟಿ.ಇ.ಹೆಚ್.ಆರ್.ಡಿ. ಟ್ರಸ್ಟ್ ಅಧ್ಯಕ್ಷರಾದ ಡಾ|| ಎಸ್.ಜೆ.ವಿ. ಮಹಿಪಾಲ್‌ರವರು, ಟಿ.ಇ.ಹೆಚ್.ಆರ್.ಡಿ ಟ್ರಸ್ಟಿಗಳೆಲ್ಲರನ್ನು, ಶಾಲೆಯ ಶಿಕ್ಷಕಿ ಶ್ರೀಮತಿ ಯಶೋದಾರವರು ಸ್ವಾಗತಿಸಿದರು. ನೆರೆದ ಗಣ್ಯಮಾನ್ಯರು ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಶಾಲೆಯ ಪ್ರಾಂಶುಪಾಲರಾದ ಜೆ.ಅನೀಲ್ ಕುಮಾರ್‌ರವರು ಶಾಲೆಯ ವಾರ್ಷಿಕ ವರದಿಯನ್ನು ಮಂಡಿಸುತ್ತಾ ಶಾಲೆಯ ೨೦ವರ್ಷಗಳ ಸಾಧನೆಗಳನ್ನು ವಿವರಿಸುತ್ತಾ ಸತತವಾಗಿ ೧೫ ವರ್ಷಗಳಿಂದ ೧೦ನೇ ತರಗತಿಯ ಪರೀಕ್ಷೆಯಲ್ಲಿ ೧೦೦% ಫಲಿತಾಂಶ ಬರುತ್ತಿರುವುದನ್ನು ತಿಳಿಸಿದರು.


ಶಾಲೆಯ ಹಳೆಯ ವಿಧ್ಯಾರ್ಥಿಗಳು ವಿವಿಧ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಸಮಾಜ ಸೇವೆ ಮಾಡುತ್ತಾ ಉಜ್ವಲ ಭವಿಷ್ಯ ರೂಪಿಸಿಕೊಂಡಿರುದನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಪ್ರೋ. ಟಿ.ಎನ್.ನಾಗಭೂಷಣರವರು ಹಾಗೂ ಡಾ|| ಯೋಗಾನಂದ ರೆಡ್ಡಿರವರಿಗೆ ಸನ್ಮಾನಿಸಲಾಯಿತು. ನೆರೆದಿರುವ ಎಲ್ಲಾ ಪೋಷಕರನ್ನು, ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರೋ.ಟಿ.ಎನ್.ನಾಗಭೂಷಣರವರು ಕೌಶಲ್ಯಾಧಾರಿತ ಶಿಕ್ಷಣ ಮಹತ್ವ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ನಿಜವಾದ ಜ್ಞಾನವನ್ನು ಪಡೆಯಬಹುದು ಎಂದು ತಿಳಿಸಿದರು. ಹಾಗೂ ಡಾ|| ಯೋಗಾನಂದ ರೆಡ್ಡಿರವರು ಮಾತನಾಡುತ್ತಾ ಬಳ್ಳಾರಿಯಲ್ಲಿ ಬಸವರಾಜೇಶ್ವರಿ ಶಿಕ್ಷಣ ಸಂಸ್ಥೆಗಳು ಮಾಡುತ್ತಿರುವ ಕಾರ್ಯವೈಖರಿಯನ್ನು ಶ್ಲಾಘಿಸುತ್ತಾ, ವಿಧ್ಯಾರ್ಥಿಗಳು ಆರೋಗ್ಯ ಸಹಿತ ಆದರ್ಶ ಜೀವನ ನಡೆಸಬೇಕೆಂದು ತಿಳಿಸಿದರು.


 ಟಿ.ಇ.ಹೆಚ್.ಆರ್.ಡಿ.ಟ್ರಸ್ಟಿಗಳಾದ ಡಾ|| ಯಶವಂತ್ ಭೂಪಾಲ್‌ರವರು ವಿದ್ಯಯ ಮಹತ್ವವನ್ನು ಹಾಗೂ ವಿಧ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯ ಪ್ರತಿಭೆಯನ್ನು ಅರಿತು ಆದರ್ಶ ಜೀವನ ನಡೆಸಬೇಕೆಂದು ತಿಳಿಸಿದರು.ನಂತರ ಟಿ.ಇ.ಹೆಚ್.ಆರ್.ಡಿ. ಟ್ರಸ್ಟ್ ಹಾಗೂ ಬಿಪಿಎಸ್‌ಸಿ ಶಾಲೆಯ ಅಧ್ಯಕ್ಷರಾದ ಡಾ||ಎಸ್.ಜೆ.ವಿ.ಮಹಿಪಾಲ್‌ರವರು ಮಾತನಾಡುತ್ತಾ ಬಳ್ಳಾರಿಯಲ್ಲಿ ಆಂಗ್ಲ ಮಾಧ್ಯಮದ ಐಸಿಎಸ್ಇ ಪಠ್ಯಕ್ರಮ ಓದಲು ಮೊದಲು ವಿಧ್ಯಾರ್ಥಿಗಳು ಪರಸ್ಥಳಕ್ಕೆ ಹೋಗಿ ಪಡುತ್ತಿರುವ ಕಷ್ಟವನ್ನು ಅರಿತು ತಮ್ಮ ತಾಯಿಯವರು ತೆಗೆದುಕೊಂಡ ಧೃಡನಿರ್ಧಾರದಿಂದ ಬಳ್ಳಾರಿಯಲ್ಲಿ ಐಸಿಎಸ್ಇ ಪಠ್ಯಕ್ರಮದ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್ ನಿರ್ಮಾಣವಾಗಿರುವ ಕುರಿತು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸುತ್ತಾ ವಿಧ್ಯಾರ್ಥಿಗಳಿಗೆ ಶುಭವನ್ನು ಕೋರಿದರು.ನಂತರ 2024-25 ಸಾಲಿನ 10 ನೇ ತರಗತಿಯಲ್ಲಿ ಅತೀ ಹೆಚ್ಚು ಶೇಕಡವಾರು 95%, ಅಂಕಗಳನ್ನು ಗಳಿಸಿದ ವಿದ್ಯಾರ್ಥಿಯಾದ ಕುಮಾರಯಶವಂತ್.ಎಮ್‌ಗೆ ಅಕಾಡೆಮಿಕ್ ಎಕ್ಸೆಲೆನ್ಸ್ ಪಾರಿತೋಷಕವನ್ನು ಮುಖ್ಯ ಅತಿಥಿಗಳಾದ ಪ್ರೋ.ಟಿ.ಎನ್.ನಾಗಭೂಷಣರವರು ವಿತರಿಸಿದರು.ಕಳೆದ ವರ್ಷದ ಶಾಲೆಯ ವಾರ್ಷಿಕ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ತರಗತಿವಾರು ವಿದ್ಯಾರ್ಥಿಗಳಿಗೆ ಕೂಡ ಪಾರಿತೋಷಕವನ್ನು ವಿತರಿಸಲಾಯಿತು. 


ತದನಂತರ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾದವು. ಈ ವಾರ್ಷಿಕೋತ್ಸವದಲ್ಲಿ ‘ದಶವಾತಾರ’ ಎಂಬ ವಿಷಯದ ಅಧಾರದ ಮೇಲೆ ಭಗವಂತನ ಹತ್ತು ಅವತಾರಗಳಾದ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಶ್ರೀರಾಮ, ಶ್ರೀಕೃಷ್ಣ, ಗೌತಮ ಬುದ್ಧ ಹಾಗೂ ಕಲ್ಕಿ ಒಳಗೊಂಡ ಅಧ್ಭುತ ನೃತ್ಯವನ್ನು ಪ್ರದರ್ಶಿಸಿದರು. ಈ ಬಾರಿ ವಿಶೇಷವಾಗಿ ಕನ್ನಡದ ಚಲನಚಿತ್ರ ರಂಗದ ಹಳೆಯ ಚಲನಚಿತ್ರಗೀತೆಗಳಿಗೆ ಮಕ್ಕಳು ತಮ್ಮ ಹಾವ ಭಾವದ ಮೂಲಕ ನೃತ್ಯವನ್ನು ಪ್ರದರ್ಶಿಸಿ ನೆರೆದ ಪೋಷಕರ ಮನಸೆಳೆದರು. ಕೊನೆಯಲ್ಲಿ ಶಾಲೆಯ ಹಿರಿಯ ಶಿಕ್ಷಕಿಯರಾದ ಶ್ರೀಮತಿ ಶಿಲ್ಪಾರವರು ವಂದನಾರ್ಪಣೆಯನ್ನು ನೆರವೇರಿಸಿದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top