ಮಂಗಳೂರು: ಆರೋಗ್ಯ ಮತ್ತು ಯೋಗಕ್ಷೇಮ ಅಗತ್ಯಗಳನ್ನು ಬೆಂಬಲಿಸುವ ದೇಶದ ಮುಂಚೂಣಿ ಸಂಸ್ಥೆಗಳಲ್ಲಿ ಒಂದಾಗಿರುವ ಆಮ್ವೇ ಇಂಡಿಯಾ, ತನ್ನ ಹೋಂ ಡೆಲಿವರಿ ಜಾಲವನ್ನು ಬಲಪಡಿಸಿರುವುದಾಗಿ ಪ್ರಕಟಿಸಿದೆ.
ಈ ಹೊಸ ಬದಲಾವಣೆಯಿಂದಾಗಿ ದೇಶಾದ್ಯಂತ ತನ್ನ ವಿತರಕರು ಮತ್ತು ಗ್ರಾಹಕರಿಗೆ ವೇಗದ, ಹೆಚ್ಚು ವಿಶ್ವಾಸಾರ್ಹ ಮತ್ತು ಸರಿಸಾಟಿ ಇಲ್ಲದ ಆರ್ಡರ್ ಮಾಡುವ ಅನುಭವವನ್ನು ಉತ್ತಮಗೊಳಿಸುವ ಸಂಸ್ಥೆಯ ಬದ್ಧತೆಯನ್ನು ಹೆಚ್ಚು ಒತ್ತಿ ಹೇಳುತ್ತದೆ ಎಂದು ಆಮ್ವೇ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ರಜನೀಶ್ ಚೋಪ್ರಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕಳೆದ ಐದು ವರ್ಷಗಳಲ್ಲಿ, ಆಮ್ವೇ ತನ್ನ ಹೋಂ ಡೆಲಿವರಿ ಸಾಮಥ್ರ್ಯಗಳನ್ನು ಗಮನಾರ್ಹವಾಗಿ ಬಲಪಡಿಸಿದ್ದು, ಡೆಲಿವರಿ ಸಮಯವನ್ನು ಶೇಕಡ 48 ರಷ್ಟು (3.1 ದಿನಗಳಿಂದ ಕೇವಲ 1.6 ದಿನಕ್ಕೆ ಕಡಿತಗೊಳಿಸಿದೆ ಮತ್ತು ಮಾರನೆಯ ದಿನದ ಡೆಲಿವೆರಿಗಳನ್ನು ಶೇಕಡ 29 ರಿಂದ 55ಕ್ಕೆ ಹೆಚ್ಚಿಸಿದೆ ಎಂದು ವಿವರಿಸಿದ್ದಾರೆ.
ಸೇವಾ ಜಾಲದ ಪ್ರಮುಖ ವಿಸ್ತರಣೆಯಿಂದ ಇದು ಸಾಧ್ಯವಾಗಿದ್ದು, ಹಿಂದೆ ಇದ್ದ 8000 ಪಿನ್‍ಕೋಡ್‍ಗಳಿಂದ ಇದೀಗ 17,500 ಕ್ಕೂ ಹೆಚ್ಚು ಪಿನ್‍ಕೋಡ್‍ಗಳಿಗೆ ವಿಸ್ತರಿಸಿದ್ದು, ಶೇಕಡ 90 ರಷ್ಟು ಪ್ರದೇಶಕ್ಕೆ ಜಾಲ ವಿಸ್ತರಿಸಿದೆ. ಬಲವಾದ ರಾಷ್ಟ್ರೀಯ ಪಾಲುದಾರಿಕೆಗಳು, ಹೆಚ್ಚು ಪರಿಣಾಮಕಾರಿ ಡಿಜಿಟಲ್ ವ್ಯವಸ್ಥೆ ಮತ್ತು ಸಕ್ರಿಯ ಸರಬರಾಜು ಸರಪಳಿಯಲ್ಲಿ ಕಾರ್ಯತಾಂತ್ರಿಕ ಹೂಡಿಕೆಯಿಂದ ಇದು ಸಾಧ್ಯವಾಗಿದೆ ಎಂದು ವಿವರಿಸಿದ್ದಾರೆ.
ರಾಷ್ಟ್ರೀಯ ಸಾರಿಗೆ ವ್ಯವಸ್ಥೆ ಜತೆಗೆ ಸುಧಾರಿತ ವಿಶ್ಲೇಷಣೆಗಳು, ಉತ್ತಮ ತಂಡದ ಸಂಯೋಜನೆಯೊಂದಿಗೆ ನಾವು ಅನೇಕ ಭೌಗೋಳಿಕ ಪ್ರದೇಶಗಳಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸಲು ಸಾಮಥ್ರ್ಯ ಬಲಪಡಿಸಿದ್ದೇವೆ. ವಿತರಣೆಯ ವೇಗ ಹೆಚ್ಚಿದ್ದು, ಇದರಿಂದ ವಿಶ್ವಾಸಾರ್ಹತೆಯೂ ವೃದ್ಧಿಯಾಗಿದೆ ಎಂದು ಆಮ್ವೇ ಇಂಡಿಯಾದ ಗ್ಲೋಬಲ್ ಓಮ್ನಿ ಚಾನೆಲ್ ಲಾಜಿಸ್ಟಿಕ್ಸ್, ಕಸ್ಟಮರ್ ಸರ್ವಿಸಸ್ ಮತ್ತು ಉತ್ತರ ಭಾರತದ ಹಿರಿಯ ಉಪಾಧ್ಯಕ್ಷರಾದ ಸಂಜೀವ್ ಸೂರಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


