ಮೂಡುಬಿದಿರೆ: ಎಕ್ಸಲೆಂಟ್ ಕಾಲೇಜಿನಲ್ಲಿ ಅಬ್ಬಕ್ಕ @500 ಪ್ರೇರಣಾದಾಯಿ 99ನೇ ಉಪನ್ಯಾಸ ಕಾರ್ಯಕ್ರಮ

Upayuktha
0


ಮೂಡುಬಿದಿರೆ: ಅಬ್ಬಕ್ಕ @500 ಪ್ರೇರಣಾದಾಯಿ 99ನೇ ಉಪನ್ಯಾಸ ಕಾರ್ಯಕ್ರಮ– ಕಲ್ಲಬೆಟ್ಟು, ಜ.12 ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ವತಿಯಿಂದ ಮೂಡುಬಿದರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಶ್ರಯದಲ್ಲಿ “ಅಬ್ಬಕ್ಕ@500 ಪ್ರೇರಣಾದಾಯಿ 100 ಸರಣಿ ಉಪನ್ಯಾಸ ಕಾರ್ಯಕ್ರಮದ 99ನೇ ಕಾರ್ಯಕ್ರಮ ಸೋಮವಾರ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.


ಕಾರ್ಯಕ್ರಮವನ್ನು ಅಬ್ಬಕ್ಕ ವಂಶಸ್ಥರಾದ ಧರ್ಮಸ್ಥಳದ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ಉದ್ಘಾಟಿಸಿ ಮಾತನಾಡಿ, ರಾಣಿ ಅಬ್ಬಕ್ಕರ ಶೌರ್ಯ, ಧೈರ್ಯ ಮತ್ತು ಸ್ವಾಭಿಮಾನ  ಮುಂದಿನ ತಲೆಮಾರಿಗೆ ಪ್ರೇರಣೆಯಾಗಲಿದೆ. ಇಂದಿನ ಯುವ ಜನಾಂಗ ಅದರಿಂದ ಪ್ರೇರಣೆ ಪಡೆದು ಯಶಸ್ವಿ ಜೀವನವನ್ನು ನಡೆಸುವುದಕ್ಕೆ ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಯು ದೇಶಪ್ರೇಮವನ್ನು ಬೆಳೆಸಿ ಸಾರ್ಥಕ ಬದುಕನ್ನು ಕಾಣಬೇಕು ಎಂದರು.


ಮುಖ್ಯ ಉಪನ್ಯಾಸ ಶ್ರೀ ರವಿ ಅಲೆವೂರಾಯ ಅವರು ನೀಡಿದ್ದು, ರಾಣಿ ಅಬ್ಬಕ್ಕರು ವಿದೇಶಿ ಆಕ್ರಮಣಕಾರರ ವಿರುದ್ಧ ನಡೆಸಿದ ಹೋರಾಟ, ಅವರ ನಾಯಕತ್ವ ಮತ್ತು ದೇಶಭಕ್ತಿಯ ಮೌಲ್ಯಗಳನ್ನು ವಿವರಿಸಿದರು.


ಕಾರ್ಯಕ್ರಮದಲ್ಲಿ ರಾಣಿ ಅಬ್ಬಕ್ಕ ವಿಶೇಷ ಪುರಸ್ಕಾರವನ್ನು ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಅವರಿಗೆ ಪ್ರದಾನ ಮಾಡಲಾಯಿತು. ಜೊತೆಗೆ ಇದೇ ಸಂದರ್ಭದಲ್ಲಿ ರಾಣಿ ಅಬ್ಬಕ್ಕ ಕುರಿತಾಗಿ ಇದುವರೆಗೆ ಗಮನಾರ್ಹವಾಗಿ ಸೇವೆ ಸಲ್ಲಿಸಿದ “ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಚಯಗಿರಿ ಬಂಟ್ವಾಳ ಇದರ ಅಧ್ಯಕ್ಷ ಡಾ. ಎಂ. ತುಕರಾಂ ಪೂಜಾರಿ, “ಉಳ್ಳಾಲ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಉಳ್ಳಾಲ” ಇದರ ಅಧ್ಯಕ್ಷರಾದ ದಿನಕರ್ ಉಳ್ಳಾಲ್, ”ಯಕ್ಷಾಂಗಣ ಮಂಗಳೂರು” ಇದರ ಕಾರ್ಯಧ್ಯಕ್ಷರಾದ ಭಾಸ್ಕರ್ ರೈ ಕುಕ್ಕುವಳ್ಳಿ, ಅಮರಕೋಟೆ ಸಂಸ್ಥಾಪಕರು “ಜವನೆರ್ ಬೆದ್ರ ಫೌಂಡೇಶನ್ (ರಿ),ಡಾ.ಯು.ಕೆ. ಸಸಿಹಿತ್ಲು ವಿಶ್ರಾಂತ ಪ್ರಾಂಶುಪಾಲರು ಸಂಶೋಧಕರು ಮತ್ತು ಸಾಹಿತಿಗಳು ಉಡುಪಿ ಇವರುಗಳನ್ನು ಗೌರವಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ವಹಿಸಿದ್ದರು. ಕೆ ಆರ್ ಎಂ ಎಸ್ ಎಸ್ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ.ಕೆ. ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವನೆಗೈದರು.


ಕಾರ್ಯಕ್ರಮದಲ್ಲಿ  ಪ್ರಕಾಶ್ ಮಲ್ಪೆ ಅವರ ನಿರ್ಮಾಣದ  Al ಮಾದರಿ ಅಬ್ಬಕ್ಕ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ಅಲ್ಲದೆ, ಕೆ. ಸುಧಾಕರ್ ಗಂಗೊಳ್ಳಿ ಅವರ ಸಂಗ್ರಹದ ಅಪರೂಪದ 25000 ಅಂಚೆಚೀಟಿಗಳ ಪ್ರದರ್ಶನ ನಡೆಯಿತು.


ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಗಣ್ಯ ಅತಿಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮವು ರಾಣಿ ಅಬ್ಬಕ್ಕರ ಶೌರ್ಯ, ಮಹಿಳಾ ಶಕ್ತಿಯ ಮಹತ್ವ ಮತ್ತು ಇತಿಹಾಸಪೂರ್ಣ ಹೋರಾಟವನ್ನು ಪುನರುಚ್ಚರಿಸುವ ಮಾದರಿ ವೇದಿಕೆಯಾಗಿ ಪರಿಣಮಿಸಿತು.


ಕಾರ್ಯಕ್ರಮವನ್ನು ಕೆಆರ್ಎಂಎಸ್ಎಸ್ ನ ಮಮತಾ ಶೆಟ್ಟಿ ನಿರೂಪಿಸಿದರು.  ಉಪ ಮುಖ್ಯೋಪಾಧ್ಯಾಯರಾದ ಜಯಶೀಲಾ ಅವರು ವಂದಿಸಿದರು.


Post a Comment

0 Comments
Post a Comment (0)
To Top