ಎಕ್ಸ್‌ ಕಾನ್‌ 2025: ‘ಮೇಡ್ ಇನ್ ಭಾರತ್’ ಇಸಿ215 ಬಿಡುಗಡೆ

Upayuktha
0

ಮೂಲಸೌಕರ್ಯ ಕ್ಷೇತ್ರಕ್ಕೆ ನೆರವಾಗುವ ವಿನೂತನ ಉತ್ಪನ್ನಗಳನ್ನು ಪ್ರದರ್ಶಿಸಿದ ವೋಲ್ವೋ ಸಿಇ ಇಂಡಿಯಾ




ಬೆಂಗಳೂರು: ವೋಲ್ವೋ ಕನ್‌ಸ್ಟ್ರಕ್ಷನ್ ಈಕ್ವಿಪ್‌ಮೆಂಟ್ ಇಂಡಿಯಾ (ವೋಲ್ವೋ ಸಿಇ ಇಂಡಿಯಾ) ಸಂಸ್ಥೆಯು ದಕ್ಷಿಣ ಏಷ್ಯಾದ ಅತಿದೊಡ್ಡ ನಿರ್ಮಾಣ ಸಲಕರಣೆಗಳ ಪ್ರದರ್ಶನವಾದ ಎಕ್ಸ್‌ ಕಾನ್‌ 2025ರಲ್ಲಿ ಹೊಚ್ಚ ಹೊಸ ‘ಮೇಡ್ ಇನ್ ಭಾರತ್’ ಇಸಿ215 ಎಕ್ಸ್‌ ಕವೇಟರ್ ಬಿಡುಗಡೆ ಮಾಡಿದೆ ಮತ್ತು ಮೂಲಸೌಕರ್ಯ ಕ್ಷೇತ್ರಕ್ಕೆ ನೆರವಾಗುವ ತನ್ನ ವಿನೂತನ ಉತ್ಪನ್ನ ಶ್ರೇಣಿ ಮತ್ತು ವಿಶಿಷ್ಟ ಸೇವಾ ಸೌಲಭ್ಯಗಳನ್ನು ಪ್ರದರ್ಶಿಸಿದೆ.


“ಭರೋಸಾ ಹರ್ ಮೋಡ್ ಪರ್ - ಪ್ರತೀ ತಿರುವಿನಲ್ಲೂ ನಂಬಿಕೆ” ಎಂಬ ಥೀಮ್‌ ಆಧಾರವಾಗಿಟ್ಟುಕೊಂಡು ವೋಲ್ವೋ ಸಿಇ ಸಂಸ್ಥೆಯು ಭವಿಷ್ಯಕ್ಕೆ ಸಿದ್ಧವಾದ, ಭಾರತಕ್ಕಾಗಿಯೇ ವಿಶೇಷವಾಗಿ ತಯಾರಿಸಿದ, ಉತ್ಕೃಷ್ಟ ಎಂಜಿನಿಯರಿಂಗ್ ಮತ್ತು ಸುಸ್ಥಿರ ಅಭಿವೃದ್ಧಿಯ ಆಧಾರದ ಮೇಲೆ ನಿರ್ಮಿಸಲಾದ ಉತ್ಪನ್ನಗಳನ್ನು ಪ್ರದರ್ಶಿಸಿತು. ಜೊತೆಗೆ ದೇಶದ ನಿರ್ಮಾಣ, ಗಣಿಗಾರಿಕೆ ಮತ್ತು ವಸ್ತು ಸಾಗಾಣಿಕಾ ಕ್ಷೇತ್ರದ ಬೆಳವಣಿಗೆಗೆ ಶಕ್ತಿ ಒದಗಿಸುವ ಅನೇಕ ಉತ್ಪನ್ನಗಳು ಮತ್ತು ಸೇವೆಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.


ತನ್ನ ಭಾರತಕೇಂದ್ರಿತ ಉತ್ಪನ್ನ ಶ್ರೇಣಿಯನ್ನು ಬಲಪಡಿಸಿಕೊಂಡಿರುವ ವೋಲ್ವೋ ಸಿಇ ಹೊಸ ಎಸ್.ಡಿ.110 ಕಾಂಪ್ಯಾಕ್ಟರ್ ಅನ್ನು ಪರಿಚಯಿಸಿದೆ. ರಸ್ತೆ ನಿರ್ಮಾಣ ಮತ್ತು ಕಾಂಪ್ಯಾಕ್ಷನ್‌ ಕೆಲಸಗಳಿಗೆ ವಿಶ್ವಾಸಾರ್ಹವಾದ ಮತ್ತು ಹೆಚ್ಚಿನ ಲಾಭವನ್ನು ನೀಡುವ ಯಂತ್ರ ಇದಾಗಿದೆ. ಭಾರತದ ಅತ್ಯಾಧುನಿಕ ಮತ್ತು ಈಗ ವಾಣಿಜ್ಯಿಕವಾಗಿ ಲಭ್ಯವಿರುವ ಎಲ್120 ಎಲೆಕ್ಟ್ರಿಕ್ ವ್ಹೀಲ್ ಲೋಡರ್ ಅನ್ನು ಕೂಡ ಈ ಸಂದರ್ಭದಲ್ಲಿ ಪರಿಚಯಿಸಲಾಗಿದ್ದು, ಇದು ಶೂನ್ಯ ಹೊರಸೂಸುವಿಕೆ ಮತ್ತು ಕಡಿಮೆ ವೆಚ್ಚದ ನಿರ್ಮಾಣ ಉತ್ಪನ್ನಗಳ ಕಡೆಗೆ ಬ್ರಾಂಡ್‌ನ ಬದ್ಧತೆಯನ್ನು ಸಾರುತ್ತದೆ. ಪ್ರದರ್ಶನದ ಅಂತ್ಯದಲ್ಲಿ ಭಾರತದಲ್ಲಿ ಮೊದಲ ಬಾರಿಗೆ ದೊಡ್ಡ ಗಾತ್ರದ ನಿರ್ಮಾಣ ಮತ್ತು ಗಣಿಗಾರಿಕೆ ಕಾರ್ಯಗಳಿಗೆ ಹೊಸ ಮಾನದಂಡಗಳನ್ನು ಸ್ಥಾಪಿಸಲಿರುವ ಭಾರೀ ಎಕ್ಸ್‌ ಕವೇಟರ್ ಆಗಿರುವ ಇಸಿ650 ಯಂತ್ರದ ಬಿಡುಗಡೆ ಪೂರ್ವ ಪ್ರದರ್ಶನ ನಡೆಯಿತು.


ಈ ಸಂದರ್ಭದಲ್ಲಿ ವೋಲ್ವೋ ಸಿಇ ಸಂಸ್ಥೆ ವಿಶೇಷವಾಗಿ ಬೆಂಗಳೂರಿನಲ್ಲಿ ತಾನು ಶೀಘ್ರವೇ ತೆರೆಯಲಿರುವ ತನ್ನ ಹೊಸ ಟೆಕ್ನಾಲಜಿ ಸೆಂಟರ್ ನ ಪ್ರಗತಿಯನ್ನು ಘೋಷಿಸಿತು. ಈ ಕೇಂದ್ರವು ಸಂಶೋಧನೆ-ಅಭಿವೃದ್ಧಿ (ಆರ್&ಡಿ), ಸ್ಥಳೀಕರಣ ಮತ್ತು ಭಾರತ ಹಾಗೂ ಜಾಗತಿಕ ಮಾರುಕಟ್ಟೆಗಳಿಗಾಗಿ ಉತ್ಪನ್ನ ಅಭಿವೃದ್ಧಿ ಕಡೆಗೆ ಗಮನ ಹರಿಸಿರುವ ಪ್ರಮುಖ ಕೇಂದ್ರವಾಗಿದೆ. ಈ ಕಾರ್ಯತಂತ್ರದ ಹೂಡಿಕೆಯಿಂದ ಭಾರತವು ವೋಲ್ವೋ ಸಿಇಯ ಜಾಗತಿಕ ಜಾಲಕ್ಕೆ ಮುಖ್ಯ ಕೊಡುಗೆದಾರನಾಗಿ ಮೂಡಿಬರಲಿದೆ.


ಈ ಕಾರ್ಯಕ್ರಮದಲ್ಲಿ ಮಾತನಾಡಿದ ವೋಲ್ವೋ ಸಿಇ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ದಿಮಿತ್ರೋವ್ ಕೃಷ್ಣನ್ ಅವರು, ಇಸಿ215 ಭಾರತದಾದ್ಯಂತ ಕೆಲಸ ಮಾಡುತ್ತಿರುವ ಗ್ರಾಹಕರಿಂದ ಸಂಗ್ರಹಿಸಿದ ಅನುಭವ-ಒಳನೋಟಗಳ ಆಧಾರದ ಮೇಲೆ ನಿರ್ಮಿತವಾಗಿರುವ ಎಕ್ಸ್ ಕವೇಟರ್ ಆಗಿದ್ದು, ಇದು ಉನ್ನತ ಉತ್ಪಾದಕತೆ ಮತ್ತು ಉತ್ತಮ ಇಂಧನ ದಕ್ಷತೆಯನ್ನು ನೀಡುತ್ತದೆ. ನಮ್ಮ ಕಾಂಪ್ಯಾಕ್ಟರ್‌ಗಳು ಮತ್ತು ಎಲೆಕ್ಟ್ರಿಕ್ ವ್ಹೀಲ್ ಲೋಡರ್‌ಗಳನ್ನು ಪ್ರದರ್ಶಿಸುವ ಮೂಲಕ ಗ್ರಾಹಕರು ಶೂನ್ಯ ಇಂಗಾಲ ಹೊರಸೂಸುವಿಕೆ ಮತ್ತು ಕಾರ್ಯಾಚರಣೆ ವೆಚ್ಚವನ್ನು ಕಡಿಮೆ ಮಾಡುವ ತಂತ್ರಜ್ಞಾನಗಳ ಕಡೆಗೆ ಬದಲಾವಣೆ ಹೊಂದಲು ಸಹಾಯ ಮಾಡುತ್ತಿದ್ದೇವೆ. ಭಾರತದ ಮೂಲಸೌಕರ್ಯ ಕ್ಷೇತ್ರಕ್ಕೆ ಅನುಗುಣವಾಗಿ ಅವರಿಗೆ ನೆರವಾಗುವ ವಿಶ್ವಾಸಾರ್ಹವಾದ ಮತ್ತು ಭವಿಷ್ಯ ಸಿದ್ಧವಾದ ತಂತ್ರಜ್ಞಾನ ಒದಗಿಸುವುದು ನಮ್ಮ ಬದ್ಧತೆಯಾಗಿದೆ” ಎಂದು ಹೇಳಿದರು.


ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ: www.volvoce.com


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top