ವಿಶ್ವ ಅರೈಕೆದಾರರ ದಿನಾಚರಣೆ 2025

Upayuktha
0


ಬಾಗಲಕೋಟ: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಬಾಗಲಕೋಟ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಗಲಕೋಟ ವಿಕಲಚೇತನರ  ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಬಾಗಲಕೋಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟ ಶ್ರೀ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮ ವಿದ್ಯಾಗಿರಿ ಬಾಗಲಕೋಟ ಬಿಜಾಪುರ ಇಂಟಿಗ್ರೇಟೆಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿ ಬರ್ಡ್ಸ್, ಹುನಗುಂದ್ ಕೇರರ್ಸ್ ವರ್ಲ್ಡ್‌ ವೈಡ್, ಸೆಲ್ಕೋ ಫೌಂಡೇಶನ್ ಬೆಂಗಳೂರು ಹಾಗೂ ಜಿಲ್ಲೆಯಲ್ಲಿ ಆರೈಕೆದಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಆರೈಕೆದಾರ ದಿನಾಚರಣೆ 2025 ಹಾಗೂ ಬಾಗಲಕೋಟ ಕೇರರ್ಸ್ ಲೈವೆಲಿಹುಡ್  ಪ್ರೊಡ್ಯೂಸರ್ ಕಂಪನಿ ಎರಡನೇ ವಾರ್ಷಿಕೋತ್ಸವ ಶ್ರೀ ಸಾಯಿ ಮಂದಿರ ಭಕ್ತಿ ಭವನ ವಿದ್ಯಾಗಿರಿ ಬಾಗಲಕೋಟೆಯಲ್ಲಿ ಆಚರಿಸಲಾಯಿತು.


ಚಂದ್ರಶೇಖರ ದಿಡ್ಡಿ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟ ಕಾರ್ಯಕ್ರಮ ಉದ್ಘಾಟಿಸಿ ಕಾನೂನು ಕುರಿತು ಹಾಗೂ  ಕಾನೂನು ಸೇವೆಗಳ ಬಗ್ಗೆ ತಿಳುವಳಿಕೆ ನೀಡಿ ಆರೈಕೆದಾರ ಬೆಂಬಲದಲ್ಲಿ ಇರುತ್ತೇವೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ  ಕೆ ಪ್ರಭಾಕರ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಗಲಕೋಟ ವಹಿಸಿ ಮಾತನಾಡಿ, ವಿಕಲತೆಯನ್ನು ತಡೆಗಟ್ಟುವಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕು ಹಾಗೂ ಆರೈಕೆದಾರರು ಸದೃಢರಾಗಬೇಕು ಎಂದು ತಿಳಿಸಿದರು.


ಇನ್ನೋರ್ವ ಮುಖ್ಯ ಅತಿಥಿಗಳಾದ ನಟೇಶ್ ಎನ್ ಕೆ ಪ್ರೋಗ್ರಾಂ ಹೆಡ್ ಕೆರರ್ಸ್ ವರ್ಲ್ಡ್ ವೈಡ್‌ ಮಾತನಾಡಿ, ಆರೈಕೆದಾರರು ತಮ್ಮ ಹಕ್ಕುಗಳನ್ನು ಹಾಗೂ ಸೇವೆಗಳನ್ನು ಪಡೆಯಬೇಕಾದರೆ ಗುಂಪು ಮತ್ತು ಸಂಘಗಳ ರಚನೆ ಅತ್ಯವಶ್ಯಕ ಎಂದು ತಿಳಿಸಿದರು. ಇನ್ನೋರ್ವ ಅತಿಥಿಗಳಾದ ಜಿ ಎನ್ ಪಾಟೀಲ್ ಅಧ್ಯಕ್ಷರು ಶ್ರೀ ಕುಮಾರೇಶ್ವರ ವಿಶ್ವಧರ್ಮ ಶಾಂತಶ್ರಮ ಬಾಗಲಕೋಟ ಇವರು ಮಾತನಾಡಿ ಬರ್ಡ್ಸ್ ಸಂಸ್ಥೆಯ ಆರೈಕೆದಾರ ಕ್ಷೇತ್ರದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಆರೈಕೆದಾರ ಪುನಶ್ಚೇತನ ಜೊತೆಗೆ ಜೀವನೋಪಾಯ ಚಟುವಟಿಕೆಗಳಲ್ಲಿ ಮುಂದೆ ಬಂದಂತ 15 ಆರೈಕೆದಾರರನ್ನು ಗುರುತಿಸಿ ಸನ್ಮಾನಿಸಲಾಯಿತು. ಹಾಗೂ  ಆರೈಕೆದಾರರು ಪಡೆಯುತ್ತಿರುವಂತಹ ಸೇವೆಗಳ ಹಕ್ಕುಗಳ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ  ಗಿರಿಜಾ ಪಾಟಿಲ್ DDWO ಬಾಗಲಕೋಟ ಮಲ್ಲನಗೌಡ ಸೆಲ್ಕೋ ಫೌಂಡೇಶನ್ ಬೆಂಗಳೂರು, ಎಸ್ ಜಿ ದೊಡ್ಡಮನಿ, ಲಕ್ಷ್ಮಣ್ ಗೌಡರ ಅಧ್ಯಕ್ಷರು ಜಿಲ್ಲಾ ಆರೈಕೆದಾರ ಫೋರಮ್ ಬಾಗಲಕೋಟ, ವೇದಾವತಿ ಹವೇಲಿ ಅಧ್ಯಕ್ಷರು ಬಾಗಲಕೋಟ ಕೇರರ್ಸ್ ಲೈವೆಲಿಹುಡ್  ಪ್ರೊಡ್ಯೂಸರ್  ಕಂಪನಿ  ಲಿಮಿಟೆಡ್ ಬಾಗಲಕೋಟ, ರಂಗನಗೌಡ ದಂಡಣ್ಣವರ ಅಧ್ಯಕ್ಷರು ಬರ್ಡ್ಸ್ ಡಾ।। ಡಿ ಎಸ್ ಹವಾಲ್ದಾರ್ ಖಜಾಂಚಿ ಬಡ್ಸ್ ಮಹಾಂತೇಶ ಅಗಸಿಮುಂದಿನ ಸಂಸ್ಥಾಪಕ ಕಾರ್ಯದರ್ಶಿ ಬರ್ಡ್ಸ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.


 ಪ್ರವೀಣ್ ಕುಮಾರ್ ಎಂ ಎ ಸಿಇಓ ಬರ್ಡ್ಸ್ ಹುನಗುಂದ ಹಾಗೂ ಜಿಲ್ಲೆಯ ಆರೈಕೆದಾರರು ಮತ್ತು ಗ್ರಾಮೀಣ /ನಗರ ಪುನರ್ವಸತಿ ಕಾರ್ಯಕರ್ತರು ಬರ್ಡ್ಸ್ ಸಿಬ್ಬಂದಿ ಸೇರಿ 250 ಜನ ಭಾಗವಹಿಸಿದ್ದರು ಪ್ರಾಥನೆಯನ್ನು ರುಕ್ಮಿಣಿ ಸವದತ್ತಿ ನಾಡಗೀತೆಯನ್ನು ಶೀಲಾ ಹಾಗೂ ಸಂಗಡಿಗರು ಹಾಡಿದರು. ಸ್ವಾಗತವನ್ನು ಸಂಗಪ್ಪ ಬೀರಗೊಂಡರ ವಂದನಾರ್ಪಣೆಯನ್ನು ಕಾವ್ಯ ಛಬ್ಬಿ ಮಾಡಿದರು. ಎಂಟು ಆರೈಕೆದಾರರು ತಮ್ಮ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮ ನಿರ್ವಹಣೆಯನ್ನು ಮಹಾಂತೇಶ ಅಗಸಿಮುಂದಿನ ಮಾಡಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top