ಸುರತ್ಕಲ್: ಹೆಚ್.ಐ.ವಿ. ಮಾರಣಾಂತಿಕ ಖಾಯಿಲೆ. ಯುವಜನತೆಯಲ್ಲಿಯೇ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಜಾಗೃತಿ ಕಾರ್ಯಕ್ರಮ ಇದನ್ನು ನಿಯಂತ್ರಿಸಲಿಕ್ಕಿರುವ ಬಹು ದೊಡ್ಡ ದಾರಿ ಎಂದು ಜಿಲ್ಲಾ ಸರಕಾರಿ ವೆನ್‍ಲಾಕ್ ಆಸ್ಪತ್ರೆಯ ಡಿ.ಎಸ್.ಆರ್.ಸಿ ಕೌನ್ಸಿಲರ್ ಅಕ್ಷತಾ ಕಾಮತ್ ನುಡಿದರು. ಅವರು ಹಿಂದು ವಿದ್ಯಾದಾಯಿನೀ ಸಂಘ (ರಿ.) ಸುರತ್ಕಲ್‍ನ ಆಡಳಿತಕ್ಕೊಳಪಟ್ಟ ಗೋವಿಂದದಾಸಕಾಲೇಜು, ಸುರತ್ಕಲ್‍ನ ಆಂತರಿಕ ಗುಣಮಟ್ಟ ಖಾತರಿ ಕೋಶ, ರೆಡ್‍ರಿಬ್ಬನ್‍ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ, ಗ್ರಾಹಕ ಮತ್ತು ಮಾನವ ಹಕ್ಕುಗಳ ಘಟಕ, ಮಹಿಳಾ ವೇದಿಕೆ ಹಾಗೂ ಯೂತ್‍ರೆಡ್‍ಕ್ರಾಸ್ ಘಟಕಗಳು ಜಂಟಿಯಾಗಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆಯ ಯುವ ಜಾಗೃತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಹರೀಶ ಆಚಾರ್ಯ ಪಿ. ದೇಶದ ಆರ್ಥಿಕತೆಯ ಬೆನ್ನೆಲುಬಾಗಿ ಬೆಳೆಯುತ್ತಿರುವ ಯುವಜನತೆ ಹೆಚ್.ಐ.ವಿ.ಯ ವಿರುದ್ಧಜಾಗೃತ ಶಕ್ತಿಗಳಾಗಿ ನಿಂತಾಗ ಸಮಾಜ ಸದೃಢಗೊಳ್ಳುತ್ತದೆ. ಶಿಕ್ಷಣ ಹಾಗೂ ಆರ್ಥಿಕತೆಯು ಗಟ್ಟಿಗೊಳ್ಳುತ್ತದೆ ಎಂದರು.
ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಅಕ್ಷತಾ ವಿ. ಸ್ವಾಗತಿಸಿದರು. ಮಾನವ ಹಕ್ಕುಗಳ ಘಟಕದ ಸಂಯೋಜಕಿ ಡಾ. ಆಶಾಲತಾ ಪಿ.ವಂದಿಸಿದರು. ರಾ.ಸೇ,ಯೋ. ಸ್ವಯಂ ಸೇವಕಿ ರಮ್ಯ ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಭಾಗ್ಯಲಕ್ಷ್ಮೀ ಎಂ., ಗ್ರಾಹಕರ ವೇದಿಕೆಯ ಸಂಯೋಜಕಿ ದಯಾ ಸುವರ್ಣ, ಯೂತ್‍ರೆಡ್‍ಕ್ರಾಸ್‍ಘಟಕದ ಸಂಯೋಜಕಿ ಪೂರ್ಣಿಮಾ ಜೆ.ಗೋಖಲೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹೆಚ್.ಐ.ವಿ. ಏಡ್ಸ್ ವಿರುದ್ಧ ಸುಧೀರ್ಘ ಹೋರಾಟ ಹಾಗೂ ಜಾಗೃತಿ ಮೂಡಿಸಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ದಿ. ವೀಣಾಧರಿ ಇವರಿಗೆ ಪುಷ್ಪನಮನ ಸಲ್ಲಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


