ಮಂಗಳೂರು: ಗೋದ್ರೇಜ್ ಕ್ಯಾಪಿಟಲ್‍ನ ಮಹಿಳಾ ಕೇಂದ್ರಿತ ಸಾಲ ಸೌಲಭ್ಯದ ಉಪಕ್ರಮವಾಗಿರುವ ಆರೋಹಿ, 2025ರ ಅಕ್ಟೋಬರ್ ವೇಳೆಗೆ ಒಟ್ಟು ಸಾಲ ನೀಡಿಕೆಯಲ್ಲಿ ರೂ. 1,116 ಕೋಟಿ ಮೊತ್ತ ದಾಟಿದ್ದು, ಮಂಗಳೂರು ಪ್ರಗತಿಶೀಲ ಮಾರುಕಟ್ಟೆಯಾಗಿ ಹೊರಹೊಮ್ಮಿದೆ.
ಕಳೆದ ಒಂದು ವರ್ಷದಲ್ಲಿ 'ಆರೋಹಿ' ರೂ. 552 ಕೋಟಿ ಮೊತ್ತದ ಆಸ್ತಿ ನೆಲೆ ಸೃಷ್ಟಿಸಿದ್ದು, 1,600 ಕ್ಕೂ ಹೆಚ್ಚು ಗ್ರಾಹಕರನ್ನು ಸೇರಿಸಿಕೊಂಡಿದೆ. ಪ್ರಮುಖ ಕೊಡುಗೆ ನೀಡುವ ಮಾರುಕಟ್ಟೆಯಾಗಿ ಮಂಗಳೂರು ಹೊರಹೊಮ್ಮಿದ್ದು, ಗ್ರಾಹಕರ ಸಂಖ್ಯೆಯಲ್ಲಿ ಶೇಕಡ 10ರಷ್ಟು ಹೆಚ್ಚಳದ ಮೂಲಕ ಈಗಾಗಲೇ ಪ್ರಸಕ್ತ ಹಣಕಾಸು ವರ್ಷದ ಗುರಿ ತಲುಪಿದೆ. ಗೋದ್ರೇಜ್ ಕ್ಯಾಪಿಟಲ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮನೀಶ್ ಶಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ನೀತಿ ಆಯೋಗದ ಪ್ರಕಾರ, ದೇಶದಾದ್ಯಂತ ಮಹಿಳೆಯರು ಪಡೆಯುವ ಸಾಲಗಳಲ್ಲಿ ಕೇವಲ 3ರಷ್ಟು ಮಾತ್ರ ವ್ಯಾಪಾರ- ಉದ್ದಿಮೆ ಉದ್ದೇಶಗಳಿಗೆ ಸಂಬಂಧಿಸಿವೆ. ಗೋದ್ರೇಜ್ ಕ್ಯಾಪಿಟಲ್‍ನ 'ಆರೋಹಿ' ಉಪಕ್ರಮವು ಮಹಿಳೆಯರಿಗೆ ಸೂಕ್ತವಾದ ಸಾಲದ ಕೊಡುಗೆಗಳು, ಕೌಶಲ-ವೃದ್ಧಿ ಉಪಕ್ರಮಗಳು ಮತ್ತು ಸಹಯೋಗದ ಅವಕಾಶಗಳ ಮೂಲಕ ಎಲ್ಲರನ್ನೂ ಒಳಗೊಳ್ಳುವ ಹಣಕಾಸು ವ್ಯವಸ್ಥೆಯನ್ನು ರೂಪಿಸುವುದರತ್ತ ಗಮನಹರಿಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
'ಆರೋಹಿ'ಯ ವಹಿವಾಟು ವೈವಿಧ್ಯಮಯ ಗ್ರಾಹಕರ ಅಗತ್ಯಗಳಿಗೆ ವ್ಯಾಪಿಸಿದೆ. ಪ್ರಮುಖ ಗೃಹ ಸಾಲ ಯೋಜನೆಯಡಿ ಸಂಬಳ ಪಡೆಯುವ ಗ್ರಾಹಕರು, ಒಟ್ಟಾರೆ ಗ್ರಾಹಕರ ನೆಲೆಯಲ್ಲಿ ಶೇಕಡ 36ರಷ್ಟಿದ್ದಾರೆ. ಸಾಲದ ಒಟ್ಟಾರೆ ಮೌಲ್ಯದಲ್ಲಿ ಶೇಕಡ 50 ರಷ್ಟು ಪಾಲು ಹೊಂದಿದ್ದಾರೆ. ಉದ್ದಿಮೆ- ವಹಿವಾಟಿನ ಸಾಲ ಮತ್ತು ಆಸ್ತಿ ಅಡಮಾನ ಸಾಲ (ಎಲ್‍ಎಪಿ) ಉತ್ಪನ್ನಗಳಲ್ಲಿ ಶೇಕಡ 55ರಷ್ಟು ಮಹಿಳಾ ಉದ್ಯಮಿಗಳು ಇದ್ದಾರೆ. ಮುಂದಿನ ಎರಡು ಹಣಕಾಸು ವರ್ಷಗಳಲ್ಲಿ, ಗಣನೀಯ ಪ್ರಗತಿಯ ಗುರಿ ಹಾಕಿಕೊಂಡಿದ್ದು, 10 ಸಾವಿರ ಗ್ರಾಹಕರನ್ನು ಸೇರಿಸಿಕೊಳ್ಳಲು ಉದ್ದೇಶಿಸಿದೆ ಎಂದು ಪ್ರಕಟಣೆ ಹೇಳಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




