ಕಣಚೂರು ಆಯುರ್ವೇದ ಕಾಲೇಜು ಆಶ್ರಯದಲ್ಲಿ ಜೀವನೀಯಮ್ ಗ್ರಾಮ ದತ್ತು ಯೋಜನೆ ಉದ್ಘಾಟನೆ
ಮಂಗಳೂರು: ಮಂಗಳೂರು ನಾಟೇಕಲ್ಲಿನ ಕಣಚೂರು ಆಯುರ್ವೇದ ಕಾಲೇಜು ಆಶ್ರಯದಲ್ಲಿ ಜೀವನೀಯಮ್ ಗ್ರಾಮ ದತ್ತು ಯೋಜನೆಯ ಅಡಿಯಲ್ಲಿ ಸೋಮೇಶ್ವರ ಗ್ರಾಮವನ್ನು ಐದುವರೆ ವರ್ಷಾವಧಿ ತನಕ ಬಿಎಎಂಎಸ್ ವಿದ್ಯಾರ್ಥಿಗಳ ಕಲಿಕೆಯ ಅಂಗವಾಗಿ ಅರಿಸಲಾಯಿತು.
ಈ ಕಾರ್ಯಕ್ರಮದ ಇಂದು (ಡಿ.19) ಪಂಚಾಯತ್ ಮುಖ್ಯ ಅಧಿಕಾರಿ ಮತ್ಯಾಡಿ ಅವರ ಮೂಲಕ ಮಾಡಲಾಯಿತು.
ವಿದ್ಯಾರ್ಥಿಗಳ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾ ಕಣಚೂರು ಆಯುರ್ವೇದ ಕಾಲೇಜಿನ ಮುಖ್ಯ ಸಲಹೆಗಾರ ಮತ್ತು ಮಂಗಳಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಮೂಲವ್ಯಾಧಿ ತಜ್ಞ ಡಾ ಸುರೇಶ ನೆಗಳಗುಳಿ ಅವರು ವೃದ್ಧರಿಗೆ ಯುವಕರಿಗೆ ಹಾಗೂ ಮಕ್ಕಳಿಗೆ ಆಯುರ್ವೇದದ ಮಹತ್ವ ಸಾರುತ್ತಾ ಅರೋಗ್ಯ ಪಾಲನೆಯ ಸಲಹೆ ನೀಡಿ ಸರ್ವರಿಗೂ ಅರೋಗ್ಯ ನೀಡುವುದೇ ಸಂಸ್ಥೆಯ ಗುರಿಯಾಗಿದೆ. ಆರೋಗ್ಯವೇ ನಿಜವಾದ ಸಂಪತ್ತು. ಡಾ ಹಾಜಿ ಕಣಚೂರ್ ಮೋನು ಅವರ ಕನಸಿನ ಕೂಸಾದ ಕಣಚೂರು ಆಯುರ್ವೇದ ಕಾಲೇಜು ಇದೀಗ ಪಂಚಕರ್ಮ ಶಸ್ತ್ರಕರ್ಮ ಯೋಗ ಮುಂತಾದ ವಿಧಾನಗಳ ವ್ಯವಸ್ಥೆ ಹೊಂದಿ ಸುಸಜ್ಜಿತವಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆಯಲು ಕೋರಿದರು.
ಗ್ರಾಮ ಪಂಚಾಯತ್ ಮುಖ್ಯ ಅಧಿಕಾರಿ ಮತ್ತಡಿ ಅವರು, ನಮ್ಮ ಸೋಮೇಶ್ವರವು ಹಲವಾರು ರೀತಿಯಲ್ಲಿ ಪ್ರಸಿದ್ದ ಗ್ರಾಮವಾಗಿದ್ದು ಕಣಚೂರಿನ ಪ್ರಥಮ ತರಗತಿಯ ವಿದ್ಯಾರ್ಥಿಗಳ ಮೂಲಕ ಗ್ರಾಮದತ್ತು ಪಡೆದು ಅದರಲ್ಲಿಯೂ ಪ್ರಥಮ ಎನಿಸಿದೆ ಎಂದರು.
ಉಪಾಧ್ಯಕ್ಷ ರವಿಶಂಕರ ಅವರು ನಮ್ಮ ಗ್ರಾಮದ ಜನರೆಲ್ಲ ಅರೋಗ್ಯವಂತರಾಗಿ ಇರುವಂತೆ ಮಾಡುವ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ ವೈದ್ಯಕೀಯ ಶಿಬಿರಗಳನ್ನು ನಡೆಸುವಲ್ಲಿ ಪೂರ್ಣ ಸಹಕಾರ ನೀಡುವ ಬಗ್ಗೆ ಭರವಸೆ ಇತ್ತರು.
ಕಾರ್ಯಕ್ರಮದ ಆಶಯನುಡಿದ ಪ್ರಾಚಾರ್ಯೆ ಡಾ ವಿದ್ಯಾಪ್ರಭಾ ಯೋಜನೆಯ ರೂಪುರೇಷೆ ನೀಡಿದರು. ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕಮಲಾ, ವೈದ್ಯಕೀಯ ಅದೀಕ್ಷಕ ಡಾ ಕಾರ್ತಿಕ್ ಶೇಟ್, ಉಪ ಪ್ರಾoಶುಪಾಲರಾದ ಡಾ ಭವ್ಯಾ ಪ್ರವೀಣ್, ಯೋಜನಾ ಪ್ರಮುಖ ಡಾ ಶ್ರೀರಾಮ್ ಮತ್ತಿತರ ಕಾಲೇಜು ಉಪನ್ಯಾಸಕರು ವೇದಿಕೆಯಲ್ಲಿದ್ದರು.
ನೂರು ಮಂದಿ ವಿದ್ಯಾರ್ಥಿಗಳು ಮತ್ತು ಪಂಚಾಯತ್ ನ ಮ್ಯಾನೇಜರ್ ಕೃಷ್ಣ, ಕಂದಾಯ ಅಧಿಕಾರಿ ಪುರುಷೋತ್ತಮ, ಸದಸ್ಯರಾದ ಇಸ್ಮಾಯಿಲ್, ಯಶವಂತ್, ಮನೋಜ್ ಕುಮಾರ್, ಸೋನಾ ಸುಭಾಷಿಣಿ ಮತ್ತು ಇತರ ಸಿಬ್ಬಂದಿಯವರು ಭಾಗವಹಿಸಿದ್ದರು. ಡಾ ಸೌಮ್ಯಾ ಅಶೋಕ್ ಕಾರ್ಯಕ್ರಮ ನಿರ್ವಹಿಸಿದರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

