ಬಳ್ಳಾರಿ: ವಿಕಲಾಂಗ ವ್ಯಕ್ತಿಗಳ ಅಂತರಾಷ್ಟ್ರೀಯ ದಿನ ಅಥವಾ ವಿಶ್ವ ಅಂಗವಿಕಲ ದಿನವನ್ನು ಪ್ರತಿ ವರ್ಷ ಡಿಸೆಂಬರ್ 3 ರಂದು ಆಚರಿಸಲಾಗುತ್ತದೆ ಎಂದು ಬಳ್ಳಾರಿ ಜಿಲ್ಲೆಯ ಜಿಲ್ಲಾ ನಿರ್ದೇಶಕರು ವಿಲ್ ಚೇರ್ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಬಳ್ಳಾರಿ ತಾಲ್ಲೂಕಿನ ಮೋಕಾ ವಲಯದ ಸೀರವಾರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಳ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಅಂಗವೈಕಲ್ಯದಿಂದ ಬಳಲುತ್ತಿರುವ ಮಾರೆಮ್ಮ, ಬಸಮ್ಮ ,ಶಂಕ್ರಪ್ಪ ನವರು ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಅನಾರೋಗ್ಯದ ಕಾರಣ ಕಾಲುಗಳ ಸ್ವಾದಿನ ಕಳೆದುಕೊಂಡ ಇವರು ವಿಲ್ ಚೇರ್ ಇಲ್ಲದೆ ನಡೆದಾಡಲು ತುಂಬಾ ಸಮಸ್ಯೆಯನ್ನು ಎದುರಿಸುತ್ತಿರುವುದನ್ನು ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕರ್ತರು ಇವರನ್ನು ಗುರುತಿಸಿ ಇವರಿಗೆ ಧರ್ಮಸ್ಥಳ ಕ್ಷೇತ್ರ ದಿಂದ ಪರಮ ಪೂಜ್ಯ ಶ್ರೀ ಡಾ/ ಡಿ.ವೀರೇಂದ್ರ ಹೆಗ್ಗಡೆಯವರು ಮೂರು ಜನ ಫಲಾನುಭವಿಗಳಿಗೆ ವಿಲ್ ಚೇರ್ ಮಂಜೂರಾತಿ ನೀಡಿದ್ದು ಇಂದು ಬಳ್ಳಾರಿ ಜಿಲ್ಲೆಯ ಜಿಲ್ಲಾ ನಿರ್ದೇಶಕರು ಗೌರವಾನ್ವಿತ ರೋಹಿತಾಕ್ಷ ಅವರು ವಿಲ್ ಚೇರ್ ವಿತರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಬಸವರಾಜ ಕ್ಷೇತ್ರ ಯೋಜನಾಧಿಕಾರಿಗಳು.ಸುಧಾಕರ ಮತ್ತು ಶೇಖಪ್ಪ ಗ್ರಾಮ ಪಂಚಾಯತಿ ಸದಸ್ಯರು ಸೀರವಾರ. ಜಡಿಮೂರ್ತಿ, ಮೋಕಾ ವಲಯದ ಮೇಲ್ವಿಚಾರಕರು ಶ್ರೀಮತಿ ಪೂಜಾ ಸೀರವಾರ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳು.ಸ್ವ ಸಹಾಯ ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




