ಮಂಗಳೂರು: "ತುಳುವಿಗಾಗಿ ಈ ಹಿಂದೆಯೂ ಅನೇಕ ಹೋರಾಟಗಳು ನಡೆದಿವೆ. ಹಳ್ಳಿಯಿಂದ ದಿಲ್ಲಿಯವರೆಗೂ ಸಾಗಿದ್ದೇವೆ. ಅದರಲ್ಲಿಲ್ಲಾ ಅದರಲ್ಲೆಲ್ಲಾ ದಾಮೋದರ ನಿಸರ್ಗರೂ ಇದ್ದರು. ಇ೦ದು ಅವರ ನೆನಪಿನಲ್ಲಿ ಸಂಸ್ಮರಣಾ ಸಪ್ತಾಹ ನಡೆಸಿರುವುದು ಸಾಮಯಿಕವೇ ಆಗಿದೆ. ತುಂಬು ಅಭಿಮಾನದ ಕಾರ್ಯಕ್ರಮವಿದು" ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಡಾ. ಪುನರೂರು ಹೇಳಿದರು.
ಅವರು ಗರೋಡಿಯಲ್ಲಿ ನಡೆಯುತ್ತಿರುವ ತುಳು ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ತುಳು ಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗರು ಸಪ್ತಾಹವನ್ನು ಯಶಸ್ವಿಗೊಳಿಸಿದವರನ್ನು ಅಭಿನಂದಿಸುತ್ತಾ ನಿವೃತ್ತ ಬ್ಯಾಂಕ್ ಉದ್ಯೋಗಿ ರೊ. ಜೆ.ವಿ. ಶೆಟ್ಟರನ್ನು ತುಳುಕೂಟ ಹಾಗೂ ಸರಯೂ ಬಳಗದ ವತಿಯಿಂದ ಸನ್ಮಾನಿಸಿದರು.
ಹಿರಿಯರಾದ ಗಂಗಾಧರ ಶಾಂತಿ, ಯೋಗೀಶ್ ಶೆಟ್ಟಿ ಜೆಪ್ಪು, ತೋನ್ಸೆ ಪುಷ್ಕಳ ಕುಮಾರ್, ನಾರಾಯಣ ಬಿ.ಡಿ, ಹೇಮಂತ್ ಗರೋಡಿ, ಮಮತಾ ಪ್ರವೀಣ್, ದಯಾಮಣಿ ವಿ.ಕೋಟ್ಯಾನ್ ಉಪಸ್ಥಿತರಿದ್ದರು. ಚಂದ್ರಪ್ರಭಾ ದಿವಾಕರ್ ಸನ್ಮಾನ ಪತ್ರ ವಾಚಿಸಿದರು. ನಾಗೇಶ್ ದೇವಾಡಿಗ ಕದ್ರಿ ವಂದಿಸಿದರು.
ಬಳಿಕ ಯಕ್ಷಗುರು ರವಿ ಅಲೆವೂರಾಯ ವರ್ಕಾಡಿಯವರ ನೇತೃತ್ವದಲ್ಲಿ "ಮಾಯಾಕೊದ ಬಿನ್ನೆದಿ" ಎಂಬ ತುಳು ಬಯಲಾಟ ಜರಗಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

