ನಿದ್ರೆಯ ಬಾಗಿಲ ಬಳಿ ನಿಂತು ತಿರುಗಾಡಿಸುವ ಮನಸ್ಸಿನ ಚಿಂತನೆಗಳು

Chandrashekhara Kulamarva
0


ರಾತ್ರಿ ಮೌನವಾಗುತ್ತಿದ್ದಂತೆ ದೇಹ ವಿಶ್ರಾಂತಿಗೆ ಸಿದ್ಧವಾಗುತ್ತದೆ, ಆದರೆ ಮನಸ್ಸು ಮಾತ್ರ ಯೋಚನೆಯ ಅಲೆಗಳಲ್ಲಿ ಅಲೆದಾಡುತ್ತದೆ. ಹಾಸಿಗೆಯಲ್ಲಿ ಮಲಗಿದ ಕ್ಷಣದಿಂದಲೇ ದಿನವಿಡೀ ನಡೆದ ಘಟನೆಗಳು ಒಂದರ ಹಿಂದೆ ಮತ್ತೊಂದು ನೆನೆಪಿಗೆ ಬರುತ್ತವೆ. ಹೇಳಬೇಕಾಗಿದ್ದ ಮಾತುಗಳು, ಕೇಳಿದ್ದ ಕಠಿಣ ಪದಗಳು, ನಡೆದುಹೋದ ತಪ್ಪುಗಳ ಬಗ್ಗೆ ಉಲ್ಬಣವಾಗುವ ಚಿಂತೆ ಎಲ್ಲಾವು ಮನಸ್ಸಿನೊಳಗೆ ಜಂಜಾಟವಂತೆ ಹರಡುತ್ತವೆ.


ಹಗಲಿನ ಕೆಲಸಗಳಿಂದ ಬಿಡುವು ದೊರಕಿದಾಗ ಮನಸ್ಸಿಗೆ ಖಾಲಿ ಜಾಗ ಸಿಗುತ್ತದೆ. ಆ ಜಾಗವನ್ನು ಯೋಚನೆಗಳು ತುಂಬಿಕೊಳ್ಳುತ್ತವೆ. ಹಳೆಯ ನೆನಪುಗಳ ನೋವು, ನಾಳೆಯ ಬಗ್ಗೆ ಭಯ, ಸಂಭವಿಸದ ಘಟನೆಗಳ ಕಲ್ಪನೆಇವೆಲ್ಲವು ನಿದ್ರೆಯನ್ನು ದೂರ ಮಾಡುತ್ತವೆ. ಒಂದು ಯೋಚನೆ ಮತ್ತೊಂದು ಯೋಚನೆಗೆ ದಾರಿ ಮಾಡಿಕೊಡುತ್ತಾ ನಿದ್ರೆ ಕಣ್ಣಿಗೆ ಸಾವಿರ ಹೆಜ್ಜೆ ದೂರವಾಗುತ್ತದೆ.


ರಾತ್ರಿ ಚಿಂತೆಗಳು ಹೆಚ್ಚಾದಾಗ ದೇಹವೂ ತನ್ನ ಪ್ರತಿಕ್ರಿಯೆಯನ್ನು ತೋರಿಸುತ್ತದೆ. ಬೆಳಗ್ಗೆ ಎದ್ದಾಗ ತಲೆ ಭಾರವಾಗುವುದು, ಮನಸ್ಸು ಮಂಪರುವಾಗಿರುವಂತೆ ಕಾಣುವುದು, ದಿನದ ಕೆಲಸಗಳಿಗೆ ಒಲವು ಕಡಿಮೆಯಾಗುವುದು ಇವು ಸಾಮಾನ್ಯವಾದ ಪರಿಣಾಮಗಳು. ಇಂತಹ ಸ್ಥಿತಿ ಮುಂದುವರಿದರೆ ದೈನಂದಿನ ಜೀವನವೇ ಅಸ್ತವ್ಯಸ್ತಗೊಳ್ಳುತ್ತದೆ.


ಈ ಪರಿಸ್ಥಿತಿಯನ್ನು ಕಡಿಮೆ ಮಾಡಲು ಮನಸ್ಸಿಗೆ ನಿಧಾನವಾದ ಶಾಂತಿ ಅಗತ್ಯ. ಮಲಗುವ ಮುನ್ನ ಮನಸ್ಸನ್ನೂ ದೇಹವನ್ನೂ ಸಮಾಧಾನಗೊಳಿಸುವ ಕ್ರಮಗಳು ಉಪಯುಕ್ತ. ದಿನದ ಚಿಂತೆಗಳನ್ನು ಮನಸ್ಸಿನೊಳಗೆ ಹಿಡಿದುಕೊಳ್ಳುವುದಕ್ಕಿಂತ ಬರಹದಲ್ಲಿ ಹೊರಹಾಕುವುದರಿಂದ ತಲೆಹರಟೆ ತಗ್ಗುತ್ತದೆ. ನಿಧಾನವಾದ ಉಸಿರಾಟದಿಂದ ದೇಹದ ಒತ್ತಡ ಕಡಿಮೆಯಾಗುತ್ತದೆ. ಸಮಸ್ಯೆಗಳನ್ನು ರಾತ್ರಿ ಹೊತ್ತಿನಲ್ಲಿ ಪರಿಹರಿಸಲು ಪ್ರಯತ್ನಿಸುವುದಕ್ಕಿಂತ ಅವನ್ನು ಬೆಳಗಿನ ಹೊತ್ತಿನಲ್ಲಿ ನೋಡುವುದೇ ಸುಲಭ.


ಮನಸ್ಸು ರಾತ್ರಿ ವೇಳೆಯಲ್ಲಿ ಗದ್ದಲ ಮಾಡುವುದು ಸಹಜ, ಆದರೆ ಅದಕ್ಕೆ ದಾರಿ ತೋರಿಸುವುದು ಸಾಧ್ಯ. ಮನಸ್ಸಿಗೆ ಶಾಂತಿಯ ಅಭ್ಯಾಸ ಕಲಿಸಿದಾಗ ರಾತ್ರಿಯ ಮೌನ ಮತ್ತೆ ನಿದ್ರೆಯ ಮಧುರತೆಯಿಂದ ತುಂಬುತ್ತದೆ.



-ಶ್ರೇಯ ಜೈನ್ 

ಎಸ್ ಡಿ ಎಂ ಉಜಿರೆ 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top