ಮಂಗಳೂರು: "ಐವತ್ತೈದು ವರ್ಷಗಳಿಂದ ಈ ತುಳು ಕೂಟ ತುಳು ಭಾಷೆ, ಸಾಹಿತ್ಯ, ನಾಟಕ ಕೃತಿಗಳಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಸರಿ ಸುಮಾರು ಮೂವತ್ತು ವರ್ಷಗಳ ಕಾಲ ತುಳುಕೂಟವನ್ನು ಮುನ್ನಡೆಸಿ ಮೆರುಗನ್ನು ತಂದುಕೊಟ್ಟವರು. ಗರೋಡಿಯಲ್ಲೂ ಉಪಾಧ್ಯಕ್ಷರಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಮುನ್ನಡೆದವರು. ಅವರ ನೆನಪಲ್ಲಿ ಇಲ್ಲಿ ತುಳು ತಾಳಮದ್ದಳೆ ನಡೆಸುತ್ತಿರುವುದು ಸಂತಸದ ವಿಷಯ" ಎಂದು ಕಂಕನಾಡಿಯ ಶ್ರೀ ಬ್ರಹ್ಮ ಬೈದ್ಯರ್ಕಳ ಗರೋಡಿಯ ಅಧ್ಯಕ್ಷ ಚಿತ್ತರಂಜನ್ ಕೆ. ಅವರು ಹೇಳಿದರು.
ಗರೋಡಿಯಲ್ಲಿ ತುಳುಕೂಟ ಮತ್ತು ಸರಯೂ ತಂಡ ಜಂಟಿಯಾಗಿ ಆಯೋಜಿಸಿರುವ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು. ಖಚಾಂಚಿ ನಾರಾಯಣ ಬಿ. ಡಿ ಯವರು ಅಗಲಿದ ದಿವ್ಯ ಚೇತನವಾದ ಮರೋಳಿ ಬಿ ದಾಮೋದರ ನಿಸರ್ಗರ ಸಂಸ್ಮರಣೆ ಮಾಡಿದರು.
ತುಳು ಕೂಟದ ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗರು ಸಭಾಧ್ಯಕ್ಷತೆ ವಹಿಸಿದ್ದರು. ಕಲಾವಿದ, ಸಂಘಟಕ ಭಾಸ್ಕರ, ಬಾರ್ಯ, ಸರಯೂ ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ, ಸಂದೀಪ್ ಗರೋಡಿ, ರೋಹಿಣಿ ಟೀಚರ್, ಪೆಲತ್ತಡಿ ಪದ್ಮನಾಭ ಕೋಟ್ಯಾನ್ ಕದ್ರಿ ನಾಗೇಶ್ ದೇವಾಡಿಗ, ಮಧುಸೂದನ ಎ. ಉಪಸ್ಥಿತರಿದ್ದರು. ಬಳಿಕ ಶ್ರೀ ಆಂಜನೇಯ ಯಕ್ಷಗಾನ ಮಂಡಳಿ, ಪುತ್ತೂರು ಇವರಿಂದ "ಪಗರಿದ ಸಂಕ" ಎಂಬ ತುಳು ತಾಳಮದ್ದಲೆ ಜರಗಿತು.
ಕಂಕನಾಡಿ ಗರೋಡಿಯಲ್ಲಿ ನಡೆಯುತ್ತಿರುವ ದಿ.ದಾಮೋದರ ನಿಸರ್ಗ ಸಂಸ್ಮರಣೆ ಹಾಗೂ ತುಳು ತಾಳಮದ್ದಳೆ ಸಪ್ತಾಹದಲ್ಲಿ ಪುತ್ತೂರಿನ ಆಂಜನೇಯ ಯಕ್ಷಗಾನ ಮಂಡಳಿಯ ಮುಖ್ಯಸ್ಥರಾದ ಭಾಸ್ಕರ ಭಾರ್ಯರನ್ನು ಡೈಜಿ ವರ್ಲ್ಡ್ ನ ನಿರ್ದೇಶಕರಾದ ವಾಲ್ಟರ್ ನಂದಳಿಕೆಯವರು ಗೌರವಿಸಿದರು. ತುಳುಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ, ಸರಯೂ ಮಹಿಳಾ ವೃಂದದ ವಿಜಯ ಲಕ್ಮೀ ಎ.ಎನ್, ಸರಯೂನ ನಿರ್ದೇಶಕ ವರ್ಕಾಡಿ ಮಧುಸೂದನ ಅಲೆವೂರಾಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

