ಬೆಂಗಳೂರು: ಪೂರ್ಣಪ್ರಜ್ಞ ಪ್ರತಿಷ್ಠಾನದ ವತಿಯಿಂದ ನಗರದ ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿರುವ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಉಡುಪಿ ಪೇಜಾವರ ಮಠದ ಪ್ರಾತಃಸ್ಮರಣೀಯರಾದ ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ 6ನೇ ಮಹಾಸಮಾರಾಧನೆಯ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಳಲು ವಾದಕರಾದ ಶ್ರೀಮದಾನಂದತೀರ್ಥರ ನೇತೃತ್ವದಲ್ಲಿ "ವೀಣಾ-ವೇಣು-ಗಾನ-ನೃತ್ಯ ಲಹರಿ" ಎಂಬ ಶೀರ್ಷಿಕೆಯಲ್ಲಿ ವಿಶೇಷ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಕು|| ಧೃತಿ ಆತ್ರೇಯ ಮತ್ತು ಕು|| ಅವನಿ ಭಟ್ ಹಾಡಿದ ದಾಸರ ಪದಗಳಿಗೆ ಮೂರು ವರ್ಷದ ಪುಟ್ಟ ಕಿಶೋರಿ ಧನ್ವಿ ಆತ್ರೇಯ ಮಾಡಿದ ನೃತ್ಯ ಕಿಕ್ಕಿರಿದು ನೆರೆದಿದ್ದ ಎಲ್ಲಾ ಕಲಾಭಿಮಾನಿಗಳ ಮನಸೆಳೆಯಿತು.
ಕೊಳಲು ವಾದನದಲ್ಲಿ ಶ್ರೀಮದಾನಂದತೀರ್ಥ ಹರಿದಾಸರ ಅಪರೂಪದ ಕೃತಿಗಳನ್ನು ನುಡಿಸಿದರು. ಕು|| ವೈಷ್ಣವಿ ವೀಣೆ ನುಡಿಸಿದರು. ಕಿಶೋರ್ ಆಚಾರ್ (ತಬಲಾ), ಟಿ.ಎಸ್. ರಮೇಶ್ (ಕೀ-ಬೋರ್ಡ್), ಪ್ರಮಥ ವಿಠಲ (ಫಕವಾಜ್), ಶ್ರೀನಿಧಿ (ಮೃದಂಗ), ಗುರುರಾಜ್ (ರಿದಂ ಪ್ಯಾಡ್) ಮತ್ತು ಪೂರ್ಣಪ್ರಸಾದ್ (ಬುಲ್ ಬುಲ್ ತರಂಗ್) ವಾದ್ಯಗಳಲ್ಲಿ ಸಹಕರಿಸಿದರು. ಕಾರ್ಯಕ್ರಮದ ನಂತರ ಎಲ್ಲಾ ಕಲಾವಿದರಿಗೂ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥರು ಫಲ-ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


