ಸುಪ್ರಸಿದ್ಧ ಮಂಗಳೂರು ಕಂಬಳದ 9ನೇ ಆವೃತ್ತಿ- ಡಿ.27ರಂದು

Upayuktha
0
ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ನೇತೃತ್ವದ ಉತ್ಸವ



ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ನೇತೃತ್ವದ ಪ್ರತಿಷ್ಠಿತ ಮಂಗಳೂರು ಕಂಬಳದ 9ನೇ ಆವೃತ್ತಿ ಇದೇ ಡಿಸೆಂಬರ್‍‌ 27ರಂದು ನಗರದ ಬಂಗ್ರಕೂಳೂರಿನಲ್ಲಿರುವ ಗೋಲ್ಡ್‌ಫಿಂಚ್ ಸಿಟಿಯಲ್ಲಿ ನಡೆಯಲಿದೆ.


ಈ ವಾರ್ಷಿಕ ಹಬ್ಬದ ವೀಕ್ಷಣೆಗಾಗಿ ಲಕ್ಷಾಂತರ ಜನ ಸೇರುತ್ತಿದ್ದು, ಕಂಬಳದ ಕೋಣಗಳ ಓಟವನ್ನು ನೋಡಿ ಆನಂದಿಸುತ್ತಿದ್ದಾರೆ. ಈ ವರ್ಷದ ಮಂಗಳೂರು ಕಂಬಳಕ್ಕಾಗಿ ಗೋಲ್ಡ್‌ ಫಿಂಚ್ ಸಿಟಿಯಲ್ಲಿ  'ರಾಮ-ಲಕ್ಷ್ಮಣ ಜೋಡುಕರೆ' ಟ್ರ್ಯಾಕ್ ಸಿದ್ಧವಾಗಿದೆ. ತಾಯ್ನಾಡಿನಲ್ಲಿ ನಡೆಯುವ ಈ ಉತ್ಸವಕ್ಕೆ ಸಾಕ್ಷಿಯಾಗಲು ದೇಶ-ವಿದೇಶಗಳಿಂದ ತುಳುನಾಡು ಮೂಲದ ಜನರು ಬೃಹತ್ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.


ಈ ಬಾರಿ ಇನ್ನಷ್ಟು ದೊಡ್ಡ ಸಂಖ್ಯೆಯಲ್ಲಿ ಜನತೆ ಆಗಮಿಸಿ ಮಂಗಳೂರು ಕಂಬಳವನ್ನು ಯಶಸ್ವಿಗೊಳಿಸಬೇಕೆಂದು ಜನಪ್ರಿಯ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಅವರು ಪ್ರೀತಿಪೂರ್ವಕವಾಗಿ ಜನತೆಯನ್ನು ಆಹ್ವಾನಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top