ಬೆಂಗಳೂರು: ಅಸ್ಸಾಂ ಸರ್ಕಾರದ ಕ್ರೀಡೆ ಮತ್ತು ಯುವ ಕಲ್ಯಾಣ ನಿರ್ದೇಶನಾಲಯ (DSYW)ವು ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ (IIS) ಸಹಯೋಗದಲ್ಲಿ, 2026 ಜನವರಿ 17ರಿಂದ 23ರವರೆಗೆ ಗುಹಾಟಿಯ ಸರೂಸಜಾಯಿ ಕ್ರೀಡಾಂಗಣದಲ್ಲಿ ಟೇಕ್ವಾಂಡೋ ಟ್ಯಾಲೆಂಟ್ ಐಡೆಂಟಿಫಿಕೇಶನ್ ಹಾಗೂ ಮಾಸ್ಟರ್‌ಕ್ಲಾಸ್ ಕಾರ್ಯಕ್ರಮವನ್ನು ಆಯೋಜಿಸಲಿದೆ.
ಏಳು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮವು ಅಸ್ಸಾಂ ಹಾಗೂ ಉತ್ತರ-ಪೂರ್ವ ಪ್ರದೇಶದ ಟೇಕ್ವಾಂಡೋ ಪ್ರತಿಭೆಗಳನ್ನು ಗುರುತಿಸಿ ಅವರನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳತ್ತ ಕೊಂಡೊಯ್ಯುವ ವ್ಯವಸ್ಥಿತ ಮಾರ್ಗವನ್ನು ನಿರ್ಮಿಸುವ ಉದ್ದೇಶ ಹೊಂದಿದೆ.
ಅಸ್ಸಾಂ ಸರ್ಕಾರದ ಕ್ರೀಡೆ ಮತ್ತು ಯುವ ಕಲ್ಯಾಣ ಇಲಾಖೆಯ ಗೌರವಾನ್ವಿತ ಸಚಿವೆ ಶ್ರೀಮತಿ ನಂದಿತಾ ಗೋರ್ಲೊಸ ಅವರು ಮಾತನಾಡಿ 'ಈ ತರಬೇತಿಯು ಕ್ರೀಡಾಪಟುಗಳಿಗೆ ಅಗತ್ಯವಾದ ಜ್ಞಾನ, ತರಬೇತಿ ಮತ್ತು ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅಸ್ಸಾಂ ಮಾತ್ರವಲ್ಲದೆ ದೇಶದ ಕ್ರೀಡಾ ಭವಿಷ್ಯವನ್ನು ಮತ್ತಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ ಎಂದರು.
ಮೊದಲ ಬಾರಿಗೆ ನಡೆಯುವ ಈ ತರಬೇತಿಯನ್ನು ಎರಡು ಬಾರಿ ಒಲಿಂಪಿಕ್ ಚಾಂಪಿಯನ್ ಹಾಗೂ ವಿಶ್ವ ಚಾಂಪಿಯನ್ ಜೇಡ್ ಜೋನ್ಸ್ ಮತ್ತು ವಿಶ್ವ ಹಾಗೂ ಯುರೋಪಿಯನ್ ಚಾಂಪಿಯನ್ ಅಚಾಬ್ ಜೌವಾಡ್ ಇಬ್ಬರು ಮುನ್ನಡೆಸಲಿದ್ದಾರೆ.
ಅಸ್ಸಾಂನಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಎರಡು ಹಂತಗಳಲ್ಲಿ ರೂಪಿಸಲಾಗಿದೆ. ಮೊದಲ ಹಂತವಾದ ಟ್ಯಾಲೆಂಟ್ ಐಡೆಂಟಿಫಿಕೇಶನ್ ಹಂತವು 2026ರ ಜನವರಿ 17 ಮತ್ತು 18ರಂದು ನಡೆಯಲಿದೆ.
2026ರ ಜನವರಿ 19ರಿಂದ 23ರವರೆಗೆ ನಡೆಯುವ ಐದು ದಿನಗಳ ಟೇಕ್ವಾಂಡೋ ಮಾಸ್ಟರ್‌ಕ್ಲಾಸ್ ಕಾರ್ಯಕ್ರಮದಲ್ಲಿ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ತಾಂತ್ರಿಕ ಅಭಿವೃದ್ಧಿ, ತಂತ್ರಾತ್ಮಕ ಅರಿವು, ದೈಹಿಕ ಸಿದ್ಧತೆ ಹಾಗೂ ಸ್ಪರ್ಧಾತ್ಮಕ ಸಿದ್ಧತೆ ಸೇರಿದಂತೆ ಕ್ರೀಡೆಯ ಎಲ್ಲಾ ಪ್ರಮುಖ ಅಂಶಗಳಲ್ಲಿ ಗಂಭೀರ ತರಬೇತಿ ನೀಡಲಾಗುತ್ತದೆ.
ಈ ಕಾರ್ಯಕ್ರಮವು ಐಐಎಸ್ ಟೇಕ್ವಾಂಡೋದ ‘ಫೈಟಿಂಗ್ ಚಾನ್ಸ್’ ಪ್ರತಿಭಾ ಶೋಧನಾ ಯೋಜನೆಯ ಭಾಗವಾಗಿದ್ದು, ಹೈ-ಪರ್ಫಾರ್ಮೆನ್ಸ್ ನಿರ್ದೇಶಕ ಗ್ಯಾರಿ ಹಾಲ್ ಅವರ ನಾಯಕತ್ವದಲ್ಲಿ ಆರಂಭಿಸಲಾಗಿದೆ. ಈ ಯೋಜನೆಯ ಉದ್ದೇಶ ಮಹಿಳಾ ಮರ್ಶಲ್ ಆರ್ಟ್ಸ್ ಕ್ರೀಡಾಪಟುಗಳನ್ನು ಗುರುತಿಸಿ, ಅವರನ್ನು ಎಲ್‌ಎ 2028 ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮಟ್ಟಕ್ಕೆ ತಯಾರಿಸುವುದಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


