ಸ್ತ್ರೀ ರೋಗ ತಜ್ಞ ಮತ್ತು ಅರಿವಳಿಕೆ ತಜ್ಞರ ಹುದ್ದೆಗಳ ನಿರಂತರತೆ ಖಾತ್ರಿಪಡಿಸಿ
ಬ್ರಹ್ಮಾವರ: ತಾಲೂಕು ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ ಇಲ್ಲಿನ ಸ್ತ್ರೀ ರೋಗ ತಜ್ಞ ಮತ್ತು ಅರಿವಳಿಕೆ ತಜ್ಞರ ಹುದ್ದೆಗಳನ್ನು ತೆರವುಗೊಳಿಸುವ ಮಾಹಿತಿ ಲಭ್ಯ ವಾಗಿದ್ದು ಇದರಿಂದ ಬಡಜನರಿಗೆ, ಆಸಹಾಯಕರಿಗೆ; ಹಿಂದುಳಿದ ವರ್ಗದವರಿಗೆ ತುಂಬಾ ತೊಂದರೆ ಆಗುತ್ತದೆ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಆಸ್ಪತ್ರೆಯ ದರ್ಜೆಗೆ ಏರಬೇಕಾದ ಈ ಆಸ್ಪತ್ರೆ ಶಾಶ್ವತವಾಗಿ ಹೆರಿಗೆ ಮತ್ತು ಅರಿವಳಿಕೆ ತಜ್ಞ ವೈದ್ಯರ ಸೇವೆಯನ್ನು ಕಳೆದು ಕೊಳ್ಳುವುದು ಒಂದು ದುರಂತ. ದೂರ ದೂರಗಳಿಂದ ಈ ಆಸ್ಪತ್ರೆಗಳಿಗೆ ಹಲವಾರು ಗ್ರಾಮೀಣ ಪ್ರದೇಶದಿಂದ; ಹಳ್ಳಿಗಳಿಂದ ಬಂದು ಹೆರಿಗೆ ಮತ್ತಿತ್ತರ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಇನ್ನು ಮುಂದೆ ಶೀಘ್ರು ಸೌಲಭ್ಯಗಳು ದೊರಕದೆ ರೋಗಿಗಳು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿಗೆ ದೂಡಿದಂತಾಗುತ್ತದೆ.
ಆದುದರಿಂದ ಈ ಸಮುದಾಯ ಕೇಂದ್ರದಲ್ಲಿ ಹೆರಿಗೆ ತಜ್ಞರು ಮತ್ತು ಅರಿವಳಿಕೆ ತಜ್ಞರು ಇವರ ಸೇವೆಯನ್ನು ಮುಂದುವರಿಸಬೇಕು ಹಾಗೂ ಈ ಕೇಂದ್ರವನ್ನು ಶೀಘ್ರವಾಗಿ ತಾಲೂಕು ಆಸ್ಪತ್ರೆಯಾಗಿ ಮೇಲ್ಡರ್ಜೆಗೇರಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಜಿಲ್ಲಾಧಿಕಾರಿಗಳ ಪರವಾಗಿ ಅಪರ ಜಿಲ್ಲಾಧಿಕಾರಿ ಅಭಿದ್ ಗದ್ಯಾಳ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಯಂಟ್ಸ್ ಗ್ರೂಪ್ ನ ಪದಾಧಿಕಾರಿಗಳಾದ ಮಧುಸೂದನ್ ಹೇರೂರು, ಸುಂದರ ಪೂಜಾರಿ ಮೂಡುಕುಕ್ಕುಡೆ, ಅಣ್ಣಯ್ಯ ದಾಸ್, ಮಿಲ್ಟನ್ ಒಲಿವರ್ ಮುಂತಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


