ಮಂಗಳೂರು: ಸಮುದಾಯ ಆರೋಗ್ಯ ಸೇವೆಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಶ್ರೀನಿವಾಸ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಆಕ್ಯುಪೇಷನಲ್ ಥೆರಪಿಯ ಆಕ್ಯುಪೇಷನಲ್ ಥೆರಪಿ ಹೊರರೋಗಿ ವಿಭಾಗ (ಒಪಿಡಿ) ವನ್ನು ಡಿಸೆಂಬರ್ 19, 2025 ರಂದು ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್, ಪಾಂಡೇಶ್ವರದಲ್ಲಿ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮವನ್ನು ಶ್ರೀನಿವಾಸ ವಿಶ್ವವಿದ್ಯಾಲಯದ ಮಾನ್ಯ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್ ಕಾರ್ಯಕ್ರಮ ಉದ್ಘಾಟಿಸಿ, ಶೈಕ್ಷಣಿಕ ಶ್ರೇಷ್ಠತೆಯ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ಸಂಯೋಜಿಸುವ ವಿಶ್ವವಿದ್ಯಾಲಯದ ಬದ್ಧತೆಯನ್ನು ಉಲ್ಲೇಖಿಸಿದರು. ಆಕ್ಯುಪೇಷನಲ್ ಥೆರಪಿ ಒಪಿಡಿಗಳು ಇನ್ನೂ ಅಪರೂಪವಾಗಿರುವುದರಿಂದ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇಲ್ಲಿ ನೀಡಲಾಗುತ್ತಿರುವ ಉಚಿತ ಸೇವೆಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಸಮಾಜಸೇವೆಯ ಜೊತೆಗೆ ವಿದ್ಯಾರ್ಥಿಗಳಿಗೆ ಮೌಲ್ಯಯುತ ಕ್ಲಿನಿಕಲ್ ಅನುಭವವನ್ನು ಒದಗಿಸುವುದೇ ಈ ಒಪಿಡಿ ಸ್ಥಾಪನೆಯ ಪ್ರಮುಖ ಉದ್ದೇಶ ಎಂದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಡಾ. ಕೆ. ಸತ್ಯನಾರಾಯಣ ರೆಡ್ಡಿ ಅವರು ಆಕ್ಯುಪೇಷನಲ್ ಥೆರಪಿಯನ್ನು ಆಧುನಿಕ ಆರೋಗ್ಯಸೇವೆಯ ಹಾಗೂ ಸಂಶೋಧನೆಯ ಪ್ರಮುಖ ಕಂಬವೆಂದು ವರ್ಣಿಸಿ, ಪುನರ್ವಸತಿ, ಕಾರ್ಯಾತ್ಮಕ ಸ್ವಾವಲಂಬನೆ ಹಾಗೂ ಜೀವನಮಟ್ಟದ ಸುಧಾರಣೆಯಲ್ಲಿ ಅದರ ಮಹತ್ವವನ್ನು ವಿವರಿಸಿದರು.
ಅಭಿವೃದ್ಧಿ ರಿಜಿಸ್ಟ್ರಾರ್ ಡಾ. ಅಜಯ್ ಕುಮಾರ್ ಅವರು ವಿದ್ಯಾರ್ಥಿಗಳು ಈ ಒಪಿಡಿಯನ್ನು ಪ್ರಾಯೋಗಿಕ ಅಧ್ಯಯನದ ವೇದಿಕೆಯಾಗಿಯಾಗಿ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಾಯೋಗಿಕ ಅನುಭವ, ನೈತಿಕ ವೃತ್ತಿಪರತೆ ಹಾಗೂ ಮಾನವೀಯ ಸೇವಾಭಾವನೆಯಿಂದ ವಿದ್ಯಾರ್ಥಿಗಳು ಸಮರ್ಥ ಆರೋಗ್ಯ ವೃತ್ತಿಪರರಾಗಿ ಬೆಳೆಯಲು ಸಾಧ್ಯವೆಂದರು.
ಉಚಿತ ಸೇವೆ: ನವೋದ್ಘಾಟಿತ ಆಕ್ಯುಪೇಷನಲ್ ಥೆರಪಿ ಒಪಿಡಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ಉಚಿತ ಸೇವೆಯನ್ನು ಶ್ರೀನಿವಾಸ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್, ಪಾಂಡೇಶ್ವರದಲ್ಲಿ ಎಲ್ಲಾ ವಯೋವರ್ಗದವರಿಗೆ ಒದಗಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಡಾ. ಸುಬ್ರಮಣ್ಯ ಭಟ್ – ಡೀನ್, ಇನ್‌ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ & ಇನ್ಫರ್ಮೇಶನ್ ಸೈನ್ಸಸ್; ಡಾ. ತ್ರಿಶಾಲಾ ನೋರೋನ್ಹಾ – ಡೀನ್, ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ; ಪ್ರೊ. ಪ್ರಶಾಂತ್ ಪ್ರಭು – ಡೀನ್, ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಅಂಡ್ ಟೂರಿಸಂ; ಡಾ. ವೆಂಕಟೇಶ್ ಅಮೀನ್ – ಡೀನ್, ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಕಾಮರ್ಸ್; ಡಾ. ಪದ್ಮನಾಭ ಸಿ.ಹೆಚ್. – ಡೀನ್, ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್; ಡಾ. ಸುಚೇತಾ ಕುಮಾರಿ – ಸಂಶೋಧನಾ ನಿರ್ದೇಶಕಿ; ಹಾಗೂ ಡಾ. ದಿವ್ಯಾ – ಅಂತರರಾಷ್ಟ್ರೀಯ ಸಹಕಾರ ನಿರ್ದೇಶಕಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಇನ್‌ಸ್ಟಿಟ್ಯೂಟ್ ಆಫ್ ಆಕ್ಯುಪೇಷನಲ್ ಥೆರಪಿಯ ಡೀನ್ ಡಾ. ಫ್ಲೋರನ್ಸ್ ಏಂಜಲಿನ್ ಅವರು ಸ್ವಾಗತಿಸಿ, ಡಾ. ಪ್ರಾಂಜಲಿ ಮ್ಹಾತ್ರೆ ವಂದಿಸಿದರು. ಪ್ರೊ. ರಚನಾ ರಿತು ಡಿ. ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


