ಬಂಟ್ವಾಳ-ಮಾಣಿ: ಇಲ್ಲಿನ ಪೆರಾಜೆ ಗ್ರಾಮದಲ್ಲಿ ಹಿರಿಯ ಕಬಡ್ಡಿ ಆಟಗಾರರಾದ ಪುರುಷೋತ್ತಮ ಸಾಗು,ಉಮೇಶ್ ಮುದಲೆಮಾರು, ರವಿಗೌಡ ಬಲ್ಲಮಜಲು ಇವರ ಮಾರ್ಗದರ್ಶನದಲ್ಲಿ ಹೊಸ ಪ್ರತಿಭೆಗಳನ್ನು ತರಬೇತುಗೊಳಿಸಿ, ನೂತನವಾಗಿ ಸೃಜಿಸಲಾದ ಶ್ರೀವಿಷ್ಣು ಪೆರಾಜೆ ಕಬಡ್ಡಿ ತಂಡದ ಸಮವಸ್ತ್ರ ಮತ್ತು ಲೋಗೋವನ್ನು ಪೆರಾಜೆ ವಿಷ್ಣುಮೂರ್ತಿ ದೇವಾಲಯದ ವಠಾರದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಕಬಡ್ಡಿ ಆಟಗಾರ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಾಲ ಎಂ. ಪೆರಾಜೆ, ಮಾಜಿ ವಾಲಿಬಾಲ್ ಆಟಗಾರ ಚೆನ್ನಪ್ಪ ಅಂಚನ್ ಸುರ್ಲಾಜೆ, ವ್ಯವಸ್ಥಾಪನಾ ಸಮಿತಿ ಸದಸ್ಯ ಸುಂದರ ಬಂಗೇರ ಕೇಪುಳಕೆರೆ, ಪ್ರಗತಿಪರ ಕೃಷಿಕ ರಾಮಣ್ಣಗೌಡ ಕೂಡೋಲು, ಯುವ ವೇದಿಕೆ ಪೆರಾಜೆಯ ಮಾಜಿ ಅಧ್ಯಕ್ಷ ಅಜಿತ್ ಬುಡೋಳಿ, ಯುವಕ ಮಂಡಲ ಪೆರಾಜೆ ಇದರ ಮಾಜಿ ಕಾರ್ಯದರ್ಶಿ ಹರೀಶ್ ಮಂಜೊಟ್ಟಿ ಉಪಸ್ಥಿತರಿದ್ದು ನೂತನ ತಂಡಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಾಲಕೃಷ್ಣ ಗೌಡ ಕುಡೋಲು, ತಿಮ್ಮಪ್ಪಗೌಡ ಮಂಜೊಟ್ಟಿ, ಮಾರಪ್ಪ ಕುಲಾಲ್ ಅಣ್ಣಾಳಿಕೆ, ಮಹೇಶ್ ಜೋಗಿಬೆಟ್ಟು ಸಹಕರಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


