ಆರೋಗ್ಯಕರ ಜೀವನಕ್ಕೆ ಕ್ರೀಡೆ ಅವಶ್ಯ: ಮಹಾಂತೇಶ ಕಡಿವಾಲ

Upayuktha
0

ಕಂದಗಲ್ಲ ಗ್ರಾಮದಲ್ಲಿ ವಾಲಿಬಾಲ್ ಸೀಜನ್ 1 ಬಹುಮಾನ ವಿತರಣೆ





ಬಾಗಲಕೋಟೆ. ಮಾನವನ ಅರೋಗ್ಯಕರ ಜೀವನಕ್ಕೆ ಕ್ರೀಡೆಗಳು ಸಹಕಾರಿಯಾಗಿದ್ದು ಯಾವುದೇ ಕ್ರೀಡೆ ಇರಲಿ ಅದರಿಂದ ಉತ್ತಮವಾದ ಆರೋಗ್ಯ ಉಲ್ಲಾಸ್, ಉತ್ಸಾಹ ದೊಂದಿಗೆ ಒಳ್ಳೆಯ  ಜೀವನ ನೆಡೆಸಬಹುದು ಎಂದು ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಶ್ರೀ ವೀರಭದ್ರೇಶ್ವರ ಸ್ಪೋರ್ಟ್ ಕ್ಲಬ್ಬನವರು ಏರ್ಪಡಿಸಿದ ವಾಲಿಬಾಲ್ ಲೀಗ್ ಸೀಜನ್ 1 ರ ಬಹುಮಾನ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಮಾಜಿ ತಾಲೂಕ ಪಂಚಾಯತ ಅಧ್ಯಕ್ಷರಾದ ಮಹಾಂತೇಶ್ಕ ಕಡಿವಾಲ ಮಾತನಾಡಿದರು.


ಮಹಾಂತೇಶ ಕಡಿವಾಲ ಮಾಲೀಕತ್ವದ ರೋಹಿತ್ ಬಾಯ್ಸ್, ಮಹಮ್ಮದಸಾಬ ಭಾವಿಕಟ್ಟಿ ಯವರ ಭಾವಿಕಟ್ಟಿ ನೆಟ್ ಸ್ಪೋರ್ಟ್ಸ್, ಶಿವು ವಡ್ಡರ ರವರ ಟೆಲಿಕಾಂ ರಾಕರ್ಸ್, ಅಮರಪ್ಪ ಹಡಪದ್ ರವರ ವಿ ಎಸ್ ಸ್ಪೋರ್ಟ್ಸ್, ಮಹಾಂತೇಶ್ ಗೋಧಿ ಯವರ ಭಂಡಾರಲಿಂಗೇಶ್ವರ್, ಹಾಗೂ ಆಶೀಫ್ ಶಿಂಗನಗುತ್ತಿಯವರ ಸ್ನೇಹಜೀವಿ ಗ್ರೋಪ್ಸ್, ಸೇರಿ ಒಟ್ಟು 6 ತಂಡಗಳು ಭಾಗವಹಿಸಿದ್ದವು. 1ವಾರಗಳ ಕಾಲ ನೆಡೆದ ಪoದ್ಯವಳಿಗಳು ಅತ್ಯಂತ ಆಕರ್ಷಣೀಯವಾಗಿ ನೆಡೆದು ಜನರ ಕಣ್ಮನ ಸೆಳೆದವು.


ಭಾವಿಕಟ್ಟಿ ನೆಟ್ ಸ್ಪೋರ್ಟ್ಸ್ ಪ್ರಥಮ ಹಾಗೂ ಟೆಲಿಕಾಮ್ ರಾಕರ್ಸ್ ದ್ವಿತೀಯ ಸ್ಥಾನ ಗಳಿಸಿದದರೆ ಉತ್ತಮ ಶಾಟರ್ ಆಗಿ ಬಸವರಾಜ್ ಜಾಲಿಹಾಳ್, ಉತ್ತಮ ಲಿಫ್ಟಿರ್ ಆಗಿ ಪ್ರಶಾಂತ್ ಸಜ್ಜನ ಹಾಗೂ ಉತ್ತಮ ಸೆಂಟರ್ ಪ್ಲೇಸ ನ ಆಟಗಾರಗಾಗಿ ಸಿದ್ದು ಜವಳಿ ಪ್ರಶಸ್ತಿಗಳನ್ನು ಪಡೆದುಕೊಂಡರು.


ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಪಂಪಣ್ಣ ಸಜ್ಜನ, ಕಾರ್ಯಕ್ರಮ ಸಂಚಾಲಕ ಚನ್ನಪ್ಪ ಜಾಲಿಹಾಳ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದಸಾಬ ಭಾವಿಕಟ್ಟಿ, ಕ್ರೀಡಾಳುಗಳಾದ ರುದ್ರೇಶ ವೀರಾಪುರ, ರಾಜು ಪರಾಸರ ಸೇರಿದಂತೆ ಇನ್ನಿತರರು ಮಾತನಾಡಿದರು.


ಗ್ರಾಮ ಪಂಚಾಯತ್ ಅಧ್ಯಕ್ಷ ಬಸವರಾಜ್ ಅಳ್ಳೊಳ್ಳಿ, ಯುವ ಮುಖಂಡ ವೀರೇಶ್ ಪಾಟೀಲ್, ಮಲ್ಲಪ್ಪ ಬಂಡಿ,ಬಸವರಾಜ್ ದಿವಾಣದ, ಸಂಗಯ್ಯ ಹೊರಗಿನಮಠ, ಪಂಪಯ್ಯ್ ಗುರುವಿನಮಠ ಉಪಸ್ಥಿತರಿದ್ದರು. ಖಾಜೇಸಾಬ್ ಬನ್ನಟ್ಟಿ (ಬಳಿಗಾರ) ಮಂಜುನಾಥ ತೋಟದಸ್ವಾಮಿಮಠ ಎಲ್ಲ ಪಂದ್ಯಗಳ ವಿವರಣೆ ನೀಡಿದರು. ಮುತ್ತು ಸಜ್ಜನ ಕಾರ್ಯಕ್ರಮ ನಿರೂಪಿಸಿದರು. ಹನಮಂತ ತಳವಾರ ಸ್ವಾಗತಿಸಿದರು. ಕಾಶಿಮಸಾಬ್ ಮಸ್ಕಿ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top