ಮುಗು ಕ್ಷೇತ್ರದ ಗರ್ಭ ಗುಡಿಗೆ ಕಿರುಷಷ್ಠಿ ದಿನ ದಾರಂದ ಮುಹೂರ್ತ

Upayuktha
0


ಮುಂಡಿತ್ತಡ್ಕ: ಶೇಣಿ, ಮುಗು ಉಭಯ ಗ್ರಾಮಗಳ ಕಾರಣೀಕ ಪ್ರಸಿದ್ಧ ಮುಗು ಶ್ರೀ ಸುಬ್ರಾಯ ದೇವ ದೇವಸ್ಥಾನದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಶಿಲಾಮಯ ಗರ್ಭ ಗುಡಿಯ ದಾರಂದ ಮುಹೂರ್ತ ಭಕ್ತ ಜನ ಸಹಭಾಗಿತ್ವದಲ್ಲಿ ಕಿರುಷಷ್ಠಿಯಂದು ಜರಗಿತು.


ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಭಕ್ತ ಜನ ಸಹಕಾರದೊಂದಿಗೆ ತ್ವರಿತಗತಿಯಲ್ಲಿ ಸಾಗುತ್ತಿದ್ದು ದೇವರು ಬಾಲಾಲಯದಲ್ಲಿ ಇರುವುದರಿಂದ ಈ ವರ್ಷದಲ್ಲಿ ಕಿರುಷಷ್ಠಿ ದಿನ ತಂತ್ರಿಗಳಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ಮಾರ್ಗದರ್ಶನದಂತೆ ಬೆಳಗ್ಗೆ ಶ್ರೀ ದೇವರಿಗೆ ನವಕ ಅಭಿಷೇಕ, ಪರಿವಾರ ದೈವಗಳು ಹಾಗೂ ನಾಗ ದೇವರಿಗೆ ತಂಬಿಲ ಸೇವೆ, ಬಲಿವಾಡು ಕೂಟ ಜರಗಿತು. ವಿವಿಧ ಗಣ್ಯರು ಗ್ರಾಮಸ್ಥರು ಪಾಲ್ಗೊಂಡಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top