ಭಜನೆಯಿಂದ ಭಗವಂತನ ಸಾಕ್ಷಾತ್ಕಾರ: ಎ.ವಿ.ಶೆಟ್ಟಿ

Upayuktha
0

ಉಡುಪಿಯಲ್ಲಿ ಲಕ್ಷಕಂಠ ಗೀತಾ ಭಜನೋತ್ಸವಕ್ಕೆ ಬೆಳ್ತಂಗಡಿ ತಾಲ್ಲೂಕಿನ ಭಜನಾಪಟುಗಳು



ಉಡುಪಿಗೆ ಭಜನೋತ್ಸವಕ್ಕೆ ಪ್ರಯಾಣಿಸುತ್ತಿದ್ದ ಭಜಕರ ತಂಡಕ್ಕೆ ಎ.ವಿ.ಶೆಟ್ಟಿ ಶುಭ ಕೋರಿದರು


ಉಜಿರೆ: ಶ್ರದ್ಧಾ-ಭಕ್ತಿಯಿಂದ ಮಾಡುವ ಭಜನೆಯಿಂದ ಸುಲಭದಲ್ಲಿ ಭಗವಂತನ ಸಾಕ್ಷಾತ್ಕಾರವಾಗುತ್ತದೆ ಎಂದು ಧರ್ಮಸ್ಥಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ಕಾರ್ಯದರ್ಶಿ ಎ.ವಿ.ಶೆಟ್ಟಿ ಹೇಳಿದರು.


ಅವರು ಭಾನುವಾರ ಗುರುವಾಯನಕೆರೆಯಲ್ಲಿ ಉಡುಪಿಗೆ ಲಕ್ಷಕಂಠ ಗೀತಾ ಭಜನೋತ್ಸವಕ್ಕೆ ಭಜನಾ ಪರಿಷತ್ ನೇತೃತ್ವದಲ್ಲಿ ಪ್ರಯಾಣಿಸುವ ಎರಡೂವರೆ ಸಾವಿರಕ್ಕೂ ಮಿಕ್ಕಿದ ಭಜನಾಪಟುಗಳಿಗೆ ಶುಭ ಹಾರೈಸಿ ಮಾತನಾಡಿದರು.


ಕಳೆದ 27 ವರ್ಷಗಳಿಂದ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಪ್ರತಿವರ್ಷ ನಡೆಸುತ್ತಿರುವ ಭಜನಾ ಕಮ್ಮಟದಿಂದಾಗಿ ಪ್ರತಿಮನೆಗಳಲ್ಲಿ ನಿತ್ಯವೂ ಭಜನೆ ಮಾಡುವ ಸಂಸ್ಕಾರ ಬೆಳೆದುಬಂದಿದೆ. ತನ್ಮೂಲಕ ಪ್ರತಿಮನೆಗಳಲ್ಲಿಯೂ, ಪ್ರತಿಯೊಬ್ಬರ ಮನದಲ್ಲೂ ಶಾಂತಿ, ನೆಮ್ಮದಿ ನೆಲೆಸಿದೆ. ಎಳೆಯ ಮಕ್ಕಳು ಕೂಡಾ ಭಜನೆಯನ್ನು ರಾಗ, ತಾಳ, ಲಯಬದ್ಧವಾಗಿ ಹಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ ಎಂದು ಹೇಳಿ ಶುಭ ಹಾರೈಸಿ ಭಜನಾ ಸೇವೆಯಿಂದ ಎಲ್ಲರಿಗೂ ಶ್ರೀ ಕೃಷ್ಣನ ಅನುಗ್ರಹ ದೊರಕಲೆಂದು ಆಶಿಸಿದರು.


ಧರ್ಮಸ್ಥಳದಲ್ಲಿ ಅನ್ನಪೂರ್ಣ ಛತ್ರದ ಮೇಲ್ವಿಚಾರಕ ಸುಬ್ರಹ್ಮಣ್ಯ ಪ್ರಸಾದ್ ಮಾತನಾಡಿ, ಭಜನಾ ಕಮ್ಮಟದಿಂದಾಗಿ ಪ್ರತಿ ಊರಿನಲ್ಲಿಯೂ ಭಜನಾ ಮಂಡಳಿ ಮೂಲಕ ಉತ್ತಮ ನಾಯಕರು ಮೂಡಿ ಬಂದಿದ್ದು ಊರಿನ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.


ನವಶಕ್ತಿಯ ಉದ್ಯಮಿ ರಾಜೇಶ್ ಶೆಟ್ಟಿ ಶುಭಾಶಂಸನೆ ಮಾಡಿದರು.


ಎಸ್.ಡಿ.ಎಂ. ಭಜನಾ ಪರಿಷತ್‌ನ ರಾಜ್ಯಾಧ್ಯಕ್ಷ ಚಂದ್ರಶೇಖರ ಸಾಲಿಯಾನ್, ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಭಾಕರ ಶೆಟ್ಟಿ ಉಪ್ಪಡ್ಕ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ, ಮನೋಹರ ಬಳಂಜ, ಭಜನಾ ಪರಿಷತ್ ವಲಯಾಧ್ಯಕ್ಷ ಜಗದೀಶ್ ಮೈರ, ಜಯರಾಜ್ ನಡಕ್ಕರ, ಸಂದೇಶ್ ಮದ್ದಡ್ಕ, ನಾಗೇಶ್ ಮೊದಲಾದವರು ಉಪಸ್ಥಿತರಿದ್ದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಅಶೋಕ್ ಆರಂಭದಲ್ಲಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top