ಕೋಡಿಕಲ್, ಮಂಗಳೂರು: "ರಾಮಾಯಣ ಕಥಾ ಹಂದರದಲ್ಲಿ ನಾವು ಮೂರು ಅವಿಭಕ್ತ ಕುಟುಂಬಗಳನ್ನು ಕಾಣಬಹುದು. ರಾಮನ ಸಂಸಾರವೊಂದಾದರೆ, ವಾನರರ ಕಿಷ್ಕಿಂದೆಯ ಸಂಸಾರ ವಿನ್ನೊಂದೆಡೆ ಹಾಗೂ ರಾಕ್ಷಸರ ಲಂಕೆಯ ಸಂಸಾರ ಮಗುದೊಂದೆಡೆ ನಮಗೆ ಜೀವನ ಮೌಲ್ಯಗಳನ್ನು ಕೊಡುತ್ತವೆ. ಈ ಮೂರೂ ಸಮೃದ್ಧ ಸಂಸಾರಗಳಲ್ಲಿ ಶ್ರೀರಾಮನ ಪ್ರವೇಶವಾಗಿ ಎಲ್ಲರ ಜೀವನ ಸುಗುಮವಾಗುತ್ತದೆ. ಇದುವೇ ಈ ಸಂಸಾರಗಳಲ್ಲಿನ ಜೀವನ ತತ್ತ್ವ" ಎಂದು ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ ಕೋಡಿಕಲ್ಲ್ ನ ವಿಪ್ರ ವೇದಿಕೆಯ ಸಪ್ತಮ ಕಾರ್ಯಕ್ರಮದಲ್ಲಿ ಉಪನ್ಯಾಸವಿತ್ತರು.
ವೇದಿಕೆಯ ಸಂಸ್ಥಾಪಕರಲ್ಲೋರ್ವರಾದ ವೇ.ಮೂ. ವಿಶ್ವ ಕುಮಾರ್ ಜೋಯಿಸ್, ವಿಶ್ವೇಶ್ವರ ಭಟ್ ತೆಕ್ಕೆಕೆರೆ, ವಿದ್ಯಾಗಣೇಶ್ ರಾವ್, ದುರ್ಗಾದಾಸ್ ಕಟೀಲು, ಕಿಶೋರ್ ಕೃಷ್ಣ ಉಪಸ್ಥಿತರಿದ್ದರು. ಶ್ರೀಮತಿ ರೇಖಾ ರಾಜಗೋಪಾಲ್ ರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


