- ಸ್ವದೇಶೀ ಜಾಗರಣ ಸೈಕ್ಲಿಂಗ್ ಜಾಥಾಗೆ ಪುತ್ತೂರಿನಲ್ಲಿಅದ್ದೂರಿ ಸ್ವಾಗತ
- ಜಾಥಾದಲ್ಲಿಉತ್ಸಾಹದಿಂದ ಪಾಲ್ಗೊಂಡ ವಿವೇಕಾನಂದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು
- ವಿವೇಕಾನಂದ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು, ಮಾಜಿಯೋಧರು, ಪುತ್ತೂರಿನ ನಾಗರಿಕರು ಸೇರಿದಂತೆ ಹಲವು ಗಣ್ಯರು ಭಾಗಿ
ಪುತ್ತೂರು: ‘ಸ್ವದೇಶಿ ಬಳಸಿ ದೇಶ ಬೆಳೆಸಿ' ಎಂಬ ಘೋಷ ವಾಕ್ಯದಡಿ, ಸಾಫ್ಟ್‍ವೇರ್ ಉತ್ಪನ್ನಗಳಿಂದ ಹಿಡಿದು ನಿತ್ಯೋಪಯೋಗಿ ವಸ್ತುಗಳ ತನಕ ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸಿ ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುವಉದ್ದೇಶದಿಂದ ಬೆಂಗಳೂರಿನ ಶ್ರೀ ಪರಿಪೂರ್ಣ ಸನಾತನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾರತೀಯ ಮಾಜಿ ಸೇನಾ ಅಧಿಕಾರಿ ಹಾಗೂ ಕರ್ನಾಟಕ ಸರಕಾರದ ಮಾಜಿ ನಿರ್ದೇಶಕ ಬ್ರಿಗೇಡಿಯರ್ ರವಿ ಮುನಿಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸ್ವದೇಶಿ ಜಾಗರಣ ಸೈಕ್ಲಿಂಗ್‍ಅಭಿಯಾನಡಿಸೆಂಬರ್17ರಂದು ಸಂಜೆ ಪುತ್ತೂರಿಗೆ ಆಗಮಿಸಿತು. ಸುಳ್ಯ ಮಾರ್ಗವಾಗಿ ಆಗಮಿಸಿದ ಈ ಜಾಥಾವನ್ನು ದರ್ಬೆಯ ವಿನಾಯಕ ನಗರದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳು ಮತ್ತು ಊರಿನ ನಾಗರಿಕರ ವತಿಯಿಂದ ಆರತಿ ಬೆಳಗುವ ಮೂಲಕ ಸ್ವಾಗತಿಸಲಾಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಪುತ್ತೂರು ನಗರದಲ್ಲಿ ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, "ನನ್ನದೇಶ ಎಂಬ ಸ್ವಾಭಿಮಾನದಿಂದ ಪ್ರತಿಯೊಬ್ಬರೂ ಸ್ವದೇಶಿ ವಸ್ತುಗಳ ಬಳಕೆ ಮಾಡಬೇಕು. ಯಾವುದೇ ಜಾಹೀರಾತುಗಳಿರಲಿ, ಯಾರು ಏನೇ ಹೇಳಲಿ, ನಾನು ನನ್ನಊರಿನ, ನನ್ನ ದೇಶದ ವಸ್ತುಗಳನ್ನೇ ಬಳಕೆ ಮಾಡುತ್ತೇನೆ ಎಂಬ ಸಂಕಲ್ಪ ಮಾಡುವ ಮೂಲಕ ಬದಲಾವಣೆತರಬೇಕು. ಸ್ವದೇಶ ಉಳಿದರೆ ಸ್ವಾಭಿಮಾನ, ಸ್ವರಾಜ್ಯ, ಸ್ವರಾಜ್ಯ ಸ್ವಾತಂತ್ರ್ಯ. ಈ ನಿಟ್ಟಿನಲ್ಲಿ ದೇಶದಗಡಿಯಲ್ಲಿ ಸೇವೆ ಮಾಡಿರುವ ಸೇನೆಯ ನಿವೃತ್ತ ಅಧಿಕಾರಿ ರವಿ ಮುನಿಸ್ವಾಮಿ ನೇತೃತ್ವದಲ್ಲಿ ಸ್ವದೇಶಿ ಬಳಕೆಯ ಬಗ್ಗೆ ಜಾಗೃತಿ ಮೂಡಿಸಿ ನಮ್ಮನ್ನು ಸ್ವದೇಶಿ ಹಳಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಸ್ವದೇಶಿ ಬಳಕೆ ಅವರಿಗಾಗಿ ಅಲ್ಲ. ಅದು ನಮಗಾಗಿ ಮುಂದಿನ ಪೀಳಿಗೆಗಾಗಿ ಪ್ರತಿಯೊಬ್ಬರೂ ಮಾಡಬೇಕಾದ ಅವಶ್ಯಕತೆಯಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ 30 ವರ್ಷಗಳ ಹಿಂದೆ ಸ್ವದೇಶಿ ಅಭಿಯಾನ ಪ್ರಾರಂಭಿಸಿದ ಸಂದರ್ಭದಲ್ಲಿ ದೇಶಕ್ಕೆ ರೂ.55,000 ಕೋಟಿ ಲಾಭ ಆಗುವ ಲೆಕ್ಕಾಚಾರವಿತ್ತು. ಇದೀಗ 30 ವರ್ಷಗಳ ನಂತರ ಜನಸಂಖ್ಯೆ ಏರಿಕೆಯಾಗಿದ್ದು ಸ್ವದೇಶಿ ವಸ್ತುಗಳ ಬಳಕೆಯಿಂದ ದೇಶಕ್ಕೆ ಲಕ್ಷಾಂತರ ಕೋಟಿ ಉಳಿಕೆಯಾಗಲಿ" ಎಂದು ಆಶಿಸಿದರು. ಕ್ಯಾಪ್ಟನ್ ಗಣೇಶ್‍ಕಾರ್ಣಿಕ್, ಬ್ರಿಗೇಡಿಯರ್ ಐ. ಎನ್. ರೈ, ಕರ್ನಲ್ ಶರತ್ ಭಂಡಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸೈಕಲ್ ಜಾಥಾದಲ್ಲಿ ಭಾಗಿಯಾದ ಗಣ್ಯರು
ದರ್ಬೆ ವಿನಾಯಕ ನಗರದಿಂದ ಹೊರಟು ಪುತ್ತೂರು ಮುಖ್ಯರಸ್ತೆಯ ಮೂಲಕ ನೆಹರು ನಗರ ವಿವೇಕಾನಂದ ಆವರಣದ ತನಕ ಸೈಕಲ್ ಜಾಥಾ ನಡೆಯಿತು. ಡಾ. ಕಲ್ಲಡ್ಕ ಪ್ರಭಾಕರ ಭಟ್, ಕಾಪ್ಟನ್ ಗಣೇಶ್‍ಕಾರ್ಣಿಕ್ ಸೇರಿದಂತೆ ಹಲವು ಮಂದಿ ಸೈಕಲ್ ಜಾಥಾದಲ್ಲಿ ಭಾಗಿಜಾಥಾಕ್ಕೆ ಚಾಲನೆ ನೀಡಿದ ಬಳಿಕ ಕಲ್ಲಡ್ಕ ಡಾ.ಪ್ರಭಾಕರ ಭಟ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಗಣೇಶ್‍ಕಾರ್ಣಿಕ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಡಾ. ಕೆ. ಎಂ ಕೃಷ್ಣಭಟ್‍ರವರು ತಾವೇ ಸೈಕಲ್ ಸವಾರಿ ಮಾಡುವ ಮೂಲಕ ಜಾಥಾದಲ್ಲಿಸಾಗಿದರು. ಸುಮಾರು 5 ಕಿ.ಮೀ ದೂರದ ಜಾಥಾದಲ್ಲಿ ಮಾಜಿಸೈನಿಕರು, ಬ್ಯಾಂಕ್ ಉದ್ಯೋಗಿಗಳು, ವಿಜ್ಞಾನಿಗಳು, ಪುತ್ತೂರಿನ ನಾಗರಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎಂಜಿನಿಯರ್‌ಗಳು, ವೈದ್ಯರು, ವಿವೇಕಾನಂದ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ನಿರ್ದೇಶಕರು, ಮುಖ್ಯಸ್ಥರುಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಮಂದಿ ಜಾಥಾದಲ್ಲಿ ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


