ಕೆನರಾ ಎಜುಕೇಶನ್ ಇನ್‌ಸ್ಟಿಟ್ಯೂಶನ್ ಆಯೋಜನೆ
ಮಂಗಳೂರು: ಪ್ರಥಮ ಬಾರಿಗೆ ಮಂಗಳೂರಿನಲ್ಲಿ ತಿರುಮಲ ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಇದೇ ಡಿಸೆಂಬರ್ 23, ಮಂಗಳವಾರ ಸಂಜೆ 6 ಗಂಟೆಗೆ ಯೋಗ್ ಫೌಂಡೇಶನ್ ಹಾಗೂ ಕೆನರಾ ಎಜುಕೇಶನ್ ಇನ್ಸ್ಟಿಟ್ಯೂಶನ್ ವತಿಯಿಂದ ಪುಷ್ಪಯಾಗ ಹಾಗೂ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ.
ಮಂಗಳೂರಿನ ಡೊಂಗರಕೇರಿಯಲ್ಲಿರುವ ಕೆನರಾ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯಕ್ರಮಕ್ಕೆ ಶ್ರೀ ತಿರುಮಲ ತಿರುಪತಿ ದೇವಸ್ಥಾನದಿಂದ ಶ್ರೀದೇವಿ, ಭೂದೇವಿ ಹಾಗೂ ಶ್ರೀನಿವಾಸ ದೇವರ ವಿಗ್ರಹಗಳನ್ನು ಬರಮಾಡಿಕೊಳ್ಳಲಾಗುವುದು. ತಿರುಮಲ ದೇವಸ್ಥಾನದಿಂದ ಬರುವ ವೈದಿಕರ ತಂಡ ಈ ಕಾರ್ಯಕ್ರಮವನ್ನು ದಾಸ ಸಾಹಿತ್ಯ ಪ್ರಾಜೆಕ್ಟ್ ಅಧಿಕಾರಿಯಾಗಿರುವ ಶ್ರೀ ಆನಂದ ತೀರ್ಥಾಚಾರ್ ಅವರ ನೇತೃತ್ವದಲ್ಲಿ ನಡೆಸಿಕೊಡಲಿದ್ದಾರೆ.
ಸಂಜೆ 6 ಗಂಟೆಗೆ ಪ್ರಾರ್ಥನೆ ನಂತರ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದ್ದು, ಸುಮಂಗಲಿ ಸ್ತ್ರೀಯರು ಭಾಗಿಯಾಗಿ ಕುಂಕುಮಾರ್ಚನೆ ಮಾಡಬಹುದು. ನಂತರ ಶ್ರಿದೇವಿ, ಭೂದೇವಿ ಹಾಗೂ ಶ್ರೀನಿವಾಸ ದೇವರಿಗೆ ಪುಷ್ಪಯಾಗ ನಡೆಯಲಿದೆ. ಮಹಾಪೂಜೆಯ ನಂತರ ಸರ್ವ ಭಕ್ತಾಭಿಮಾನಿಗಳಿಗೆ ಕುಂಕುಮಾರ್ಚನೆ ಹಾಗೂ ಪುಷ್ಪಯಾಗದ ಪ್ರಸಾದ ವಿತರಿಸಲಾಗುವುದು. ಈ ಸಂದರ್ಭದಲ್ಲಿ ಶ್ರೀ ಎಂ ಮುಕುಂದ ಪೈ ಹಾಗೂ ಬಳಗದವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ.
ಎಲ್ಲರಿಗೂ ಈ ಕಾರ್ಯಕ್ರಮದಲ್ಲಿ ಮುಕ್ತ ಸ್ವಾಗತವಿದೆ. ಆಸ್ತಿಕ ಬಾಂಧವರಾದ ತಾವೆಲ್ಲರೂ ಇದರಲ್ಲಿ ಭಾಗವಹಿಸಿ ಶ್ರೀದೇವರ ಕೃಪೆಗೆ ಪಾತ್ರರಾಗಲು ಸವಿನಯ ಆಮಂತ್ರಣ. ಹೆಚ್ಚಿನ ಮಾಹಿತಿಗೆ - 9844040779.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


