ಕೆ.ಜೆ.ವಿ.ಎಸ್. ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ

Upayuktha
0


ಹಾಸನ: ಸ್ವಾತಂತ್ರ ಚಳುವಳಿಯ ಕುರಿತ ರಸಪ್ರಶ್ನೆ ಕಾರ್ಯಕ್ರಮ ಹಾಗೂ ಸರ್ ಸಿ.ವಿ. ರಾಮನ್ ರಸಪ್ರಶ್ನೆ ಕಾರ್ಯಕ್ರಮ ಚಂದ್ರಗ್ರಹಣದ ಕುರಿತಾದ ರಸಪ್ರಶ್ನೆ ಕಾರ್ಯಕ್ರಮ ಹೀಗೆ ಹಲವು ಕಾರ್ಯಕ್ರಮಗಳನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರೂಪಿಸುತ್ತಿರುವುದು ಸಂತೋಷದ ವಿಚಾರವಾಗಿದೆ. ಸ್ಪರ್ಧೆಗಳಲ್ಲಿ ಹೆಚ್ಚು ಭಾಗವಹಿಸಿದಷ್ಟು, ನಮ್ಮ ಜ್ಞಾನ ಹೆಚ್ಚಾಗುತ್ತದೆ ಎಂದು ನಿವೃತ್ತ ಶಿಕ್ಷಣಾಧಿಕಾರಿ ಜೆ.ಬಿ. ತಮ್ಮಣ್ಣ ಗೌಡರು ಹೇಳಿದರು.


ನಗರದ ಚಿರಂತನ ಪ್ರೌಢಶಾಲೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಎಲ್ಲರನ್ನು ಉದ್ದೇಶಿಸಿ ಮಾತನಾಡುತ್ತಾ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ನಡೆಸುವ ರಸಪ್ರಶ್ನೆ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಜ್ಞಾನವನ್ನು ಹೆಚ್ಚಿಸುತ್ತಿವೆ ಎಂದು ಅಭಿನಂದಿಸಿದರು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸವನ್ನು ರಸಪ್ರಶ್ನೆ ಕಾರ್ಯಕ್ರಮ ಮಾಡುತ್ತದೆ. ಯಾವಾಗಲೂ ನಾವುಗಳು ಅಲ್ಪವೆಂದು ಕುಗ್ಗಿ ಅಲ್ಪವಾಗಬಾರದು. ಅನಂತದಿಂದ ಗುಣಿಸಿ ಅನಂತರಾಗಬೇಕು. ಕುವೆಂಪುರವರು ಹೇಳಿದಂತೆ ಮೂರಕ್ಕಕಾಸಿಸಿ ಮೂರನ್ನು ಪಡೆಯುವುದರ ಬದಲು ನೂರಕಾಸಿಸಿ ಆರನ್ನು ಪಡೆಯುವುದು ಒಳಿತು ಎಂಬ ಮಾತನ್ನು ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದ್ದರು. ನನ್ನಿಂದ ಏಕೆ ಸಾಧ್ಯವಿಲ್ಲ ಎಂದು ಎಲ್ಲರೂ ಪ್ರಶ್ನಿಸಿಕೊಳ್ಳಬೇಕು. ಪ್ರಶ್ನಿಸಿಕೊಂಡಾಗ ಮನಸ್ಸು ಜಾಗೃತವಾಗುತ್ತದೆ ಮತ್ತು ಆ ಕಾರ್ಯದತ್ತ ನಮ್ಮನ್ನು ಕ್ರಿಯಾಶೀಲರಾಗುವಂತೆ ಉತ್ತೇಜಿಸುತ್ತದೆ. ಪ್ರಯತ್ನಿಸಿದರೆ ಮಾತ್ರ ಫಲ ಲಭಿಸಲು ಸಾಧ್ಯ. ಗುರಿ ದೊಡ್ಡದಿದ್ದರೆ ಸಾಧನೆಯು ದೊಡ್ಡದಾಗುತ್ತದೆ ಎಂದು ಕರೆ ನೀಡಿದರು.


ವಿಜ್ಞಾನ ಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 


ಶ್ರೀಯುತ ಗ್ಯಾರಂಟಿ ರಾಮಣ್ಣನವರು ಮಾತನಾಡಿ ರಸಪ್ರಶ್ನೆ ಕಾರ್ಯಕ್ರಮ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು ಮಕ್ಕಳು ಹೆಚ್ಚು ಭಾಗವಹಿಸಿದರೆ ಅವರ ಜ್ಞಾನವು ಹೆಚ್ಚಾಗುತ್ತದೆ ಎಂದು ತಿಳಿಸುತ್ತಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನ ನಾವೆಲ್ಲರೂ ಸ್ಮರಿಸಬೇಕು ನಾವು ಈ ದಿನ ನೆಮ್ಮದಿಯಿಂದ ಇರಲು ಹಲವು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳು ಕಾರಣವೆಂದು ತಿಳಿಸಿದರು ಹಾಗೂ ಈ ನೆಲ ಈ ಜಲ ಈ ಮಣ್ಣು ನಮ್ಮದು ಎಂಬ ಜಾಗೃತಿ ಗೀತೆಯನ್ನು ಮಕ್ಕಳಿಗೆ ಹೇಳಿಕೊಟ್ಟರು.


ವಿಶ್ವನಾಥರವರು ಮಾತನಾಡಿ, ರಸಪ್ರಶ್ನೆ ಕಾರ್ಯಕ್ರಮದ ಸ್ಪರ್ಧೆಯನ್ನು ಸಕಾರಾತ್ಮಕವಾಗಿ ಬಳಸಿಕೊಂಡಾಗ ಯಶಸ್ಸು ಸಾಧ್ಯವೆಂದು ತಿಳಿಸಿದರು. ಸ್ವಾತಂತ್ರ್ಯ ಚಳುವಳಿ ಹಾಗೂ ಚಂದ್ರಗ್ರಹಣ ಕುರಿತಾದ ರಸಪ್ರಶ್ನೆ ಕಾರ್ಯಕ್ರಮಗಳು ಉಪಯುಕ್ತ ಕಾರ್ಯಕ್ರಮಗಳೆಂದು ತಿಳಿಸಿದರು. ರಸಪ್ರಶ್ನೆ ಕಾರ್ಯಕ್ರಮಗಳಿಂದ  ಹಲವಾರು ಅನುಕೂಲಗಳನ್ನು ನಾವು ಪಡೆಯಬಹುದು ಮತ್ತು ಜ್ಞಾನವಂತರಾಗಬಹುದು ಎಂದು ತಿಳಿಸಿದರು. ಮುಂದೆ ಸರ್ ಸಿ.ವಿ ರಾಮನ್ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳಬೇಕೆಂದು ಕರೆ ನೀಡಿದರು.


ಚಿರಂತನ ಶಾಲೆಯ ಮುಖ್ಯ ಶಿಕ್ಷಕ ಶಿವರಾಜ್ ಅವರು ಮಾತನಾಡುತ್ತಾ ಸ್ವಾತಂತ್ರ್ಯದ ಬಗ್ಗೆ ಎಲ್ಲರೂ ತಿಳಿಯಬೇಕು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಅಧ್ಯಯನ ಮಾಡಬೇಕು ಇದರಿಂದ ಅವರು ಪಟ್ಟ ಪರಿಶ್ರಮ ನಮಗೆ ತಿಳಿಯುತ್ತದೆ ಹಾಗೂ ದೇಶದ ಬಗ್ಗೆ ಗೌರವ ಭಾವನೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.


ಈ ನಡುವೆ ಕಾರ್ಯಕ್ರಮದಲ್ಲಿ ಬಹುಮಾನ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಸ್ವಾತಂತ್ರ್ಯ ಚಳುವಳಿಯ ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಸಮಾಧಾನಕರ ಬಹುಮಾನವನ್ನು ಪ್ರಿಯದರ್ಶಿನಿ ಶಾಲೆ ಹೊಳೆನರಸೀಪುರ ಈ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಸುಮಂತ್ ಎಚ್ ಆರ್ ಇವರು ಪಡೆದಿದ್ದಾರೆ.


ಹಾಸನ ತಾಲೂಕಿನ ವಿಜಯ ಶಾಲೆಯ ಮೋನಿಷ ಜಿ.ಹುಲಿಕಲ್ ಇವರು ಜಿಲ್ಲಾ ಅಂತರದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದು ಜಿಲ್ಲಾಮಟ್ಟದ ದ್ವಿತೀಯ ಸ್ಥಾನವನ್ನು ಹೊಳೆನರಸೀಪುರದ ವೆಂಕಟೇಶ್ವರ ಶಾಲೆಯ ಮೊಹಮ್ಮದ್ ಪೈಜಾನ್ ಪಡೆದಿದ್ದು ಜಿಲ್ಲಾ ಮಟ್ಟದ ಮೂರನೇ ಬಹುಮಾನವನ್ನು ಹಾಸನದ ಎಸ್ .ಆರ್.ಎಸ್ ಪ್ರಜ್ಞಾ ಶಾಲೆಯ ವಿದ್ಯಾರ್ಥಿಯಾದ ತನ್ವಿಕ ರವರು ಗಳಿಸಿದ್ದು ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಮತ್ತು ಚಂದ್ರಗ್ರಹಣ ರಸಪ್ರಶ್ನೆ ಕಾರ್ಯಕ್ರಮದಲ್ಲಿ  ವಿಜೇತರಾದವರನ್ನು ಕೂಡ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಪಲ್ಲವಿ, ಆಡಳಿತಾಧಿಕಾರಿ ಸುರೇಶ್,  ಶಿಕ್ಷಕ ರಾಹುಲ್ ಹಾಗೂ ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top