ಕಲಬುರಗಿ: ರಾಜ್ಯದ ಈಡಿಗ ಬಿಲ್ಲವ ನಾಮಧಾರಿ ಸೇರಿದಂತೆ 26 ಪಂಗಡಗಳ 18 ಬೇಡಿಕೆಗಳ ಈಡೇರಿಕೆಗಾಗಿ ಜ.6 ರಿಂದ ಚಿತ್ತಾಪುರದ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಆರಂಭವಾಗುವ ಡಾ. ಪ್ರಣವಾನಂದ ಶ್ರೀಗಳ ಪಾದಯಾತ್ರೆಯ ಪೂರ್ವ ಸಿದ್ಧತಾ ಸಭೆಯು ಡಿ. 26ರಂದು ಸೇಡಂ ಮತ್ತು ಚಿತಾಪುರದಲ್ಲಿ ನಡೆಯಲಿದೆ.
ಚಿತ್ತಾಪುರದ ಅಂಬಿಗರ ಚೌಡಯ್ಯ ಸಭಾಭವನದಲ್ಲಿ 26ರಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು ಚಿತ್ತಾ ಪುರದ ಆರ್ಯ ಈಡಿಗ ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಸಭೆಯ ಸಂಚಾಲಕರಾದ ಕಾಶಿನಾಥ್ ಗುತ್ತೇದಾರ್ ಸಭಾ ನಡಾವಳಿ ಹಾಗೂ ಸಿದ್ಧತೆಯ ಬಗ್ಗೆ ರೂಪರೇಷೆ ಮಂಡಿಸಲಿದ್ದಾರೆ. ಸಾಯಂಕಾಲ 4 ಗಂಟೆಗೆ ಸೇಡಂ ಪಟ್ಟಣದ ಕಲಬುರಗಿ ಕ್ರಾಸ್ ಪೆಟ್ರೋಲ್ ಪಂಪ್ ಬಳಿ ಇರುವ ಅಶೋಕ್ ಬಡದಾಳ್ ಅವರ ನಿವಾಸದಲ್ಲಿ ತಾಲೂಕು ಸಮಾಜದ ಮುಖಂಡರ ಸಭೆ ನಡೆಯಲಿದೆ. ಸಭೆಯ ಸಂಚಾಲಕರಾದ ಜಗನ್ನಾಥ ಗುತ್ತೇದಾರ್ ಮತ್ತು ವೆಂಕಟಯ್ಯ ಮುಸ್ತೇಜಾರ್ ಸಭೆಯ ರೂಪುರೇಷೆ ತಯಾರಿಸಲಿದ್ದಾರೆ ಎಂದು ಶಕ್ತಿಪೀಠದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ತಿಳಿಸಿದ್ದಾರೆ.
ಈ ಸಭೆಗೆ ಜಿಲ್ಲಾ ಆರ್ಯ ಈಡಿಗ ಸಮಾಜದ ಮುಖಂಡರಾದ ಸತೀಶ್ ವಿ ಗುತ್ತೇದಾರ್, ಮಹಾದೇವ ಗುತ್ತೇದಾರ್', ಅಶೋಕ್ ಗುತ್ತೇದಾರ್ ಬಡದಾಳ್, ವೆಂಕಟೇಶ ಎಂ ಕಡೇಚೂರ್, ಬಾಲರಾಜ್ ಗುತ್ತೇದಾರ್, ಕುಪೇಂದ್ರ ಗುತ್ತೇದಾರ್ ನಾಗೂರ್, ಮಲ್ಲಿಕಾರ್ಜುನ ಕುಕ್ಕುಂದಿ, ರಾಜೇಶ್ ಡಿ ಗುತ್ತೇದಾರ್, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್, ವಿಠಲ ಬಾವಗಿ, ಮಹೇಶ್ ಗುತ್ತೇದಾರ್ ಹೊಳಕುಂದ, ಬಸವರಾಜ್ ರಾವೂರ್ ಮತ್ತಿತರರು ಭಾಗವಹಿಸಲಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

