ಪೆರುವಾಜೆ: ಹಿಂದೂ ಧಾರ್ಮಿಕ ಶಿಕ್ಷಣ ಶಾಖೆ ಆರಂಭ

Chandrashekhara Kulamarva
0

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನ ವಠಾರದಲ್ಲಿ





ಪುತ್ತೂರು: ಡಿಸೆಂಬರ್ 15 ರಂದು ಹಿಂದೂ ಧಾರ್ಮಿಕ ಶಿಕ್ಷಣ ಶಾಖೆಯ ಉದ್ಘಾಟನೆಯನ್ನು ದೇವಾಲಯ ಸಂವರ್ಧನಾ ಸಮಿತಿಯ ವತಿಯಿಂದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಭಕ್ತಿಭಾವ ಪೂರ್ಣವಾಗಿ ಆರಂಭಿಸಲಾಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ದೀಪೋಜ್ವಲನದ ಮೂಲಕ ಶ್ರೀ ಶ್ರೀನಿವಾಸ ಹೆಬ್ಬಾರ್ ಇವರು ನೆರವೇರಿಸಿದರು.


ಕೇಶವ ಪ್ರಸಾದ್ ಮುಳಿಯ ದೇವಾಲಯ ಸಂವರ್ಧನಾ ಪ್ರಮುಖ್ ಇವರು ಹಿಂದೂ ಧಾರ್ಮಿಕ ಶಿಕ್ಷಣದ ಕುರಿತು ಪ್ರಾಸ್ತಾವಿಕ ಮಾತಾಡಿ ವಿದ್ಯಾರ್ಥಿಗಳಿಗೆ ಸುಜ್ಞಾನ ದೀಪಿಕೆ ಪುಸ್ತಕವನ್ನು ಹಸ್ತಾಂತರಿಸಿದರು.


ಅಧ್ಯಕ್ಷತೆ ವಹಿಸಿದ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಗನ್ನಾಥ ಪೂಜಾರಿ ಅವರು ಧಾರ್ಮಿಕ ಶಿಕ್ಷಣದ ಮಹತ್ವ ಕುರಿತು ಮಾತಾಡಿದರು.


ಕಾರ್ಯಕ್ರಮದಲ್ಲಿ ಕೇಂದ್ರದ ಸಂಯೋಜಕರಾದ ಶ್ವೇತಾ ಕಾನಾವು ಇವರು ಸ್ವಾಗತಿಸಿ, ಶ್ರೀಮತಿ ಪೂರ್ಣಿಮ ಉಮೇಶ್ ವಂದಿಸಿದರು.ಕಾರ್ಯಕ್ರಮದ  ನಿರೂಪಣೆಯನ್ನು ಕೇಂದ್ರದ ಸಂಯೋಜಕರಾದ ಅಶ್ವಿನಿ ಕೂಡಿಬೈಲು ನೆರವೇರಿಸಿ ಕೊಟ್ಟರು.


ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಚಾಲಕರಾದ ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ ಇವರು ಶ್ಲೋಕದ ಅರ್ಥ ವಿವರಿಸಿ, ಭಜನೆ ಹಾಗೂ ಚಟುವಟಿಕೆ ಹೇಳಿಕೊಟ್ಟರು.


ಸಂಯೋಜಕರಾದ ಡಾ. ವಿಜಯಸರಸ್ವತಿ ಇವರು ಶ್ಲೋಕ ಅರ್ಥ ಹಾಗೂ ದೈನಂದಿನ ಜೀವನದ ಆಚಾರ ವಿಚಾರಗಳನ್ನು ವಿವರಿಸಿದರು. ಸಂಯೋಜಕರಾದ ಶಂಕರಿ ಶರ್ಮ ಇವರು ಕಥೆ ಹಾಗೂ ಸದ್ವಿಚಾರವನ್ನು ಹೇಳಿಕೊಟ್ಟರು.


ಕಾರ್ಯಕ್ರಮದಲ್ಲಿ ಗಣ್ಯರು, ಸ್ಥಳೀಯ ಭಕ್ತಾದಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top