ಸುರತ್ಕಲ್: ಮಹಿಳಾ ಸಶಕ್ತೀಕರಣದ ಕಾರ್ಯಯೋಜನೆಗಳಿಗೆ ಆದ್ಯತೆ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಪಾರಾದೀಪ್ ಪಾಸ್ಪೇಟ್ ಲಿಮಿಟೆಡ್‌ನ ಉತ್ಪಾದನಾ ವಿಭಾಗದ ಮುಖ್ಯಸ್ಥ ಎಸ್. ಗಿರೀಶ್ ನುಡಿದರು.
ಅವರು ಪಾರಾದೀಪ್ ಪಾಸ್ಪೇಟ್ ಲಿಮಿಟೆಡ್‌ನ ಸಿ.ಎಸ್.ಆರ್. ನಿಧಿಯಿಂದ ಕುಳಾಯಿ ಮಹಿಳಾ ಮಂಡಲದ ಕಟ್ಟಡದ ನೂತನವಾಗಿ ನವೀಕರಿಸಿದ ವೇದಿಕೆ ಮತ್ತು ಒಳಾಂಗಣ ಸಭಾ ಭವನವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಮಂಡಲದಲ್ಲಿ ಸಮಾಜಮುಖಿ ಸೇವಾ ಚಟುವಟಿಕೆಗಳು ನಡೆಯುತ್ತಿದೆ ಎಂದವರು ಮೆಚ್ಚುಗೆ ಸೂಚಿಸಿದರು.
ಹಿಂದು ವಿದ್ಯಾದಾಯಿನೀ ಸಂಘದ ಮಾಜಿ ಕಾರ್ಯದರ್ಶಿ ಎಂ. ವೆಂಕಟರಾವ್ ಅವರು ಮಾತನಾಡಿ ಸ್ಥಳೀಯ ಕೈಗಾರಿಕ ಸಂಸ್ಥೆಗಳು ಯುವ ಜನತೆಗೆ ಉದ್ಯೋಗ ಹಾಗೂ ಸಾಮಾಜಿಕ ಕೊಡುಗೆಗಳನ್ನು ನೀಡಿ ಸಮಾಜದ ಉನ್ನತೀಕರಣಕ್ಕೆ ಸಹಾಯಕವಾಗಿವೆ ಎಂದರು.
ಕುಳಾಯಿ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿಠ್ಠಲ ಸಾಲ್ಯಾನ್ ಮಾತನಾಡಿ ಕುಳಾಯಿ ಮಹಿಳಾ ಮಂಡಲದ ಅಭಿವೃದ್ದಿಗೆ ಸಹಕಾರ ನೀಡಲಾಗುತ್ತಿದೆ ಎಂದರು.
ಪ್ಲಾಂಟ್ ಟೆಕ್ ಇಂಡಸ್ಟ್ರಿಯಲ್ ಸರ್ವಿಸ್ ಲಿಮಿಟೆಡ್ ನ ಅಕೌಂಟಿಂಗ್ ಮ್ಯಾನೇಜೆರ್ ಕಿಶೋರ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪಾರಾದೀಪ್ ಫಾಸ್ಪೇಟ್ ಲಿಮಿಟೆಡ್ ಸಂಸ್ಥೆಯ ಉತ್ಪಾದನಾ ಮುಖ್ಯಸ್ಥ ಎಸ್. ಗಿರೀಶ್ ಹಾಗೂ ಪ್ಲಾಂಟ್ ಟೆಕ್ ಇಂಡಸ್ಟ್ರಿಯಲ್ ಸರ್ವಿಸ್ ಲಿಮಿಟೆಡ್ ನ ಅಕೌಂಟಿಂಗ್ ಮ್ಯಾನೇಜರ್ ಕಿಶೋರ್ ಅವರನ್ನು ಗೌರವಿಸಲಾಯಿತು.
ಕುಳಾಯಿ ಮಹಿಳಾ ಮಂಡಲದ ಅಧ್ಯಕ್ಷೆ ರೇವತಿ ನವೀನ್ ಸ್ವಾಗತಿಸಿದರು. ಕೋಶಾಧಿಕಾರಿ ಪೂರ್ಣಿಮಾ ಕೆ. ವಂದಿಸಿದರು. ರಾಜೇಶ್ವರಿ ದಿನಕರ್ ಕಾರ್ಯಕ್ರಮ ನಿರೂಪಿಸಿದರು. ಪಿ.ಪಿ.ಎಲ್. ಸಂಸ್ಥೆಯ ಸಿ.ಎಸ್.ಆರ್. ವಿಭಾಗದ ಅಧಿಕಾರಿ ವಿವೇಕ್ ಕೋಟ್ಯಾನ್, ಕುಳಾಯಿ ಮಹಿಳಾ ಮಂಡಲದ ಕಾರ್ಯದರ್ಶಿ ವಾಣಿ ಮತ್ತು ಪದಾಧಿಕಾರಿಗಳು ಮತ್ತು ವಿವಿಧ ಸಮಾಜ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

