ಕೋಟ: ಕೂಟ ಮಹಾಜಗತ್ತು ಸಾಲಿಗ್ರಾಮ (ಬೆಂಗಳೂರು ಅಂಗಸಂಸ್ಥೆ) ವತಿಯಿಂದ ಬಸವನಗುಡಿ ರಸ್ತೆಯಲ್ಲಿರುವ ಗುರುನರಸಿಂಹ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನರಸಿಂಹ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕರ್ನಲ್ ಬಿ. ಚಿನ್ಮಯ್, ಲೆಫ್ಟಿನೆಂಟ್ ಕರ್ನಲ್ ಪುಷ್ಪ ಕಫ್ರಿ, ಉದ್ಯಮಿ ಜಿ. ಪ್ರಕಾಶ್ ಮಯ್ಯ, ಡಾ. ಎ.ಎಸ್. ಕೃಷ್ಣಮೂರ್ತಿ ಕಾರಂತ, ಸಮಾಜಸೇವಕ ಕೆ. ತಾರಾನಾಥ ಹೊಳ್ಳ, ಕಲಾವಿದ ಸುದರ್ಶನ ಉರಾಳ ಅವರಿಗೆ ನರಸಿಂಹ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನ್ಯಾಯಮೂರ್ತಿ ವಿ. ಶ್ರೀಶಾನಂದ, ಕೂಟ ಮಹಾ ಜಗತ್ತು ಸಾಲಿಗ್ರಾಮ ಅಧ್ಯಕ್ಷ ಡಾ. ಪಿ.ಎಂ. ಗಿರಿಧರ ಉಪಾಧ್ಯಾಯ, ಗುರುನರಸಿಂಹ ಬಿಲಿಯನ್ ಫೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷ ಇ. ಗೋಪಾಲಕೃಷ್ಣ ಹೇರ್ಳೆ ಕಾರ್ಯದರ್ಶಿ ಹೆಚ್ ಗೋಪಾಲಕೃಷ್ಣ ಐತಾಳ ಸ್ವಾಗತಿಸಿ, ಕುಲದೀಪ ಸೋಮಯಾಜಿ ವಂದಿಸಿದರು. ಶ್ರೀ ಶಶಿಧರ ಉಪಾಧ್ಯ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


