ಇಟಾನಗರ್: ಅರುಣಾಚಲ ಪ್ರದೇಶದಲ್ಲಿ ನಡೆದ ಆರೆಂಜ್ ಫೆಸ್ಟಿವಲ್ ಆಫ್ ಅಡ್ವೆಂಚರ್ ಮತ್ತು ಜೆಕೆ ಟೈರ್ ಆರೆಂಜ್ 4X4 ಫ್ಯೂರಿ ಇಂಟರ್‌ನ್ಯಾಷನಲ್ ಸ್ಪರ್ಧೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಕಾರ್ಯಕ್ರಮದಲ್ಲಿ ಭಾರತದಾದ್ಯಂತ ಆಫ್-ರೋಡ್ ಉತ್ಸಾಹಿಗಳು, ಥೈಲ್ಯಾಂಡ್ ಮತ್ತು ಮಲೇಷಿಯಾ ತಂಡಗಳು ಭಾಗವಹಿಸಿದ್ದು ಈ ಸ್ಪರ್ಧೆಯ ಅಂತಾರಾಷ್ಟ್ರೀಯ ಖ್ಯಾತಿಯನ್ನು ಮತ್ತಷ್ಟು ಬಲಪಡಿಸಿತು.
ಈ ರ್‍ಯಾಲಿಗೆ ಡಿಸೆಂಬರ್ 18, 2025 ರಂದು ನಾಮ್ಸಾಯಿಯ ಗೋಲ್ಡನ್ ಪಗೋಡಾದಿಂದ ಕ್ರೀಡಾ ಮತ್ತು ಯುವ ವ್ಯವಹಾರಗಳ ಕಾರ್ಯದರ್ಶಿ ಶ್ರೀ ಅಬು ತಾಯೆಂಗ್, ಐಎಎಸ್ ಅವರು ಚಾಲನೆ ನೀಡಿದರು. ಹಿಂದಿನ ರಾತ್ರಿ, ಡಿಸೆಂಬರ್ 17 ರಂದು ಬೆರೆಂಗ್ ನದಿಯೊಳಗೆ ಕತ್ತಲೆಯಲ್ಲೇ ನಡೆದ ಪ್ರೊಲೋಗ್ ಹಂತವು ಸ್ಪರ್ಧೆಗೆ ರೋಚಕ ಆರಂಭವಾಗಿದ್ದು ರೇನ್‌ಫಾರೆಸ್ಟ್ ಇಂಡಿಯಾ ಚಾಲೆಂಜ್‌ನ ಪ್ರಸ್ತುತ ನಾಯಕ ಉಜ್ಜಲ್ ನಾಮ್ಶುಮ್ ಈ ಹಂತದಲ್ಲಿ ಅದ್ಬುತ ಪ್ರದರ್ಶನ ನೀಡಿದರು.
ಈ ಕಾರ್ಯಕ್ರಮದಲ್ಲಿ ಒಟ್ಟು 50 ಆಫ್-ರೋಡಿಂಗ್ ವಾಹನಗಳು ಭಾಗವಹಿಸಿದ್ದವು. ಮೂರು ದಿನಗಳ ಅವಧಿಯಲ್ಲಿ ಸ್ಪರ್ಧಿಗಳಾದ ಲೋಹಿತ್ & ದಿಬಾಂಗ್ ನದಿಗಳ ಕಣಿವೆಗಳು, ಅರಣ್ಯ ಮಾರ್ಗಗಳು ಮತ್ತು ಮರಳು ಪ್ರದೇಶಗಳನ್ನು ದಾಟಿದರು. ಬಹುಮಾನ ವಿತರಣಾ ಸಮಾರಂಭದಲ್ಲಿ ಅರುಣಾಚಲ ಪ್ರದೇಶ ಸರ್ಕಾರದ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ನಿರ್ದೇಶಕ ಶ್ರೀ ರಮೇಶ್ ಲಿಂಗಿ ಅವರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಜೊತೆಗೆ ನಡೆದ ಆರೆಂಜ್ ಮ್ಯೂಸಿಕ್ ಫೆಸ್ಟಿವಲ್‌ನಲ್ಲಿ ಸುನಿಧಿ ಚೌಹಾನ್, ಅದ್ನಾನ್ ಸಾಮಿ, ಬೆನ್ನಿ ದಯಾಲ್, ರಾಫ್ತಾರ್ ಸೇರಿದಂತೆ ಹಲವಾರು ಕಲಾವಿದರು ಈ ಫೆಸ್ಟಿವಲ್ ನಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ಅರುಣಾಚಲ ಪ್ರದೇಶ ಸರ್ಕಾರದ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಇಲಾಖೆ ಹಾಗೂ ಭಾರತದ ಪ್ರಮುಖ ಮೋಟಾರ್‌ಸ್ಪೋರ್ಟ್ ಉತ್ತೇಜಕ ಸಂಸ್ಥೆಯಾದ ಜೆಕೆ ಟೈರ್ ಬೆಂಬಲ ನೀಡಿದೆ. ಡಿಸೆಂಬರ್ 18ರಿಂದ 21, 2025ರವರೆಗೆ ನಾಲ್ಕು ದಿನಗಳ ಕಾಲ ನಡೆದ ಆರೆಂಜ್ ಫೆಸ್ಟಿವಲ್ ಆಫ್ ಅಡ್ವೆಂಚರ್ ಅಂಡ್ ಮ್ಯೂಸಿಕ್‌ನಲ್ಲಿ 15,000ಕ್ಕೂ ಅಧಿಕ ಪ್ರೇಕ್ಷಕರು ಪಾಲ್ಗೊಂಡಿದ್ದರು.
ವಿಜೇತರ ಪಟ್ಟಿ:
ಪ್ರೊ-ಮೋಡಿಫೈಡ್ ವಿಭಾಗ:
ಉಜ್ಜಲ್ ನಾಮ್ಶುಮ್ / ಸುಜೀವನ್
ಚೇತನ ಚೆಂಗಪ್ಪ / ಸಚಿನ್ ಸೈಕಿಯಾ
ಪೆನಾಲ್ಟಿ: 04:50:35
ಪ್ರಥಮ ರನ್ನರ್-ಅಪ್:
ರಕ್ಷಿತ್ ಕೆಆರ್ / ರಾಜಕುಮಾರ್
ದೇವಿನೇನಿ ಶ್ರೀ ವೆಂಕಟ್ / ರಾಕೇಶ್ ಬುರಾ
ಪೆನಾಲ್ಟಿ: 05:18:18
ದ್ವಿತೀಯ ರನ್ನರ್-ಅಪ್:
ಕ್ರಾಂತಿ ಕುಮಾರ್ ವೆಂಗಲ / ಕೆ.ಎಂ. ಮಯೂರ್ ಬೋಪಯ್ಯ
ರಾಂಬಾಬು ಮರೀಡು / ತಾಳಂ ಕುಮಾರಸ್ವಾಮಿ
ಪೆನಾಲ್ಟಿ: 06:11:23
ಸ್ಟಾಕ್ ವಿಭಾಗ
ವಿಜೇತರು:
ಕೃಷ್ಣ ಫಣಿ ಧನೆಕುಲ / ಪೃಥ್ವಿ ಸಿಸ್ತ್ಲಾ
ಭಾಸ್ಕರ್ ರಾಜು / ಮುತ್ತು ಕುಮುರನ್
ಪೆನಾಲ್ಟಿ: 03:34:21
ಪ್ರಥಮ ರನ್ನರ್-ಅಪ್:
ಜಾಂಗ್ ಗಮ್ ಮಿರಿಪ್ ಸಿಂಗ್ಫೋ / ಜಾವ್ಜುನ್ ಮಿರಿಪ್
ಹಗೆಚಡಾ / ಪ್ರರಿತೋಷ್ ಬರ್ಮನ್
ಪೆನಾಲ್ಟಿ: 03:57:24
ದ್ವಿತೀಯ ರನ್ನರ್-ಅಪ್:
ರವಿಚಂದ್ರ ಅರ್ರಾ / ವಿಕಾಸ್ ಕುಮಾರ್ ಗೋಪು
ಸುಮಂತ್ ಪೊಟ್ಲುರಿ / ಭಾರ್ಗವ್ ಚೌಧರಿ
ಪೆನಾಲ್ಟಿ: 03:58:32
ಮಹಿಳಾ ವಿಭಾಗ: ಜೊಯ್ ಬಸರ / ರಿಂಗಮ್ ದೊನಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


