“ತುಳುನಾಡು” ಸಂಸ್ಕೃತಿ, ಸಂಪ್ರದಾಯ ಮತ್ತು ಭಕ್ತಿಯ ನಾಡಗಿದೆ. ತುಳುನಾಡು ಈ ಪದಕ್ಕೆ ಇರುವ ಬಹುತೇಕ ಶಕ್ತಿ ನಮಗೆ ಇರುವ ಹೆಮ್ಮೆ.ನಮ್ಮ ತುಳುನಾಡು ನಮ್ಮ ಹೆಮ್ಮೆ ಎಂದರೆ ಅದು ಯಾವತ್ತಿಗೂ ಸಹ ತಪ್ಪಾಗಲಾರದು. ಈ ನಾಡನ್ನು ಒಂದು ಪದದಲ್ಲಿ ವರ್ಣಿಸಿದರೆ ಅಥವಾ ಹೊಗಳಿದರೆ ಸಾಲದು, ಏಕೆಂದರೆ ಒಂದು ದಿನವಲ್ಲ, ಒಂದು ವರ್ಷವೂ ಸಾಲದು ನಮ್ಮ ತುಳುನಾಡನ್ನು ಹೊಗಳಲು. ಈ ತುಳುನಾಡಿಗೆ ಮೊದಲ ಶಕ್ತಿ ಮೊದಲ ನೆನೆನಪು ಎಂದರೆ ಅದು ದೈವ ದೇವರುಗಳು. ಅವರ ಅನುಗ್ರಹ, ಅವರ ಆಶೀರ್ವಾದವೇ ನಮ್ಮ ತುಳುನಾಡಿಗೆ ಶ್ರೀರಕ್ಷೆ.
ತುಳುನಾಡಿನ ಜನರು ಮಾತನಾಡುವ ತುಳು ಭಾಷೆ ದ್ರಾವಿಡ ಭಾಷಾಗೆ ಸೇರಿದೆ. ಇದು ಸಾವಿರಾರು ವರ್ಷಗಳ ಇತಿಹಾಸವನ್ನು ಸಹ ಹೊಂದಿದೇ. ತುಳುನಾಡಿನ ಸಂಸ್ಕೃತಿ ಅತ್ಯಂತ ವೈವಿಧ್ಯಮಯವಾಗಿದೆ. ಇಲ್ಲಿ ನಡೆಯುವ ಭೂತ ಕೊಲ, ನಾಗಮಂಡಲ,ಕಂಬಳ, ಆಟಿ ಅಮಾವಾಸ್ಯೆ, ಕೇಡ್ಡಸ ಮುಂತಾದ ಆಚರಣೆಗಳು ಜನರಲ್ಲಿ ಭಕ್ತಿ, ಸಮಾನತೆ ಹಾಗೂ ಉತ್ಸಾಹವನ್ನು ಮೂಡಿಸುತ್ತವೆ. ವಿಶೇಷವಾಗಿ ಭೂತ ಕೊಲವು ತುಳುನಾಡಿನ ಆತ್ಮೀಯತೆ ಮತ್ತು ದೇವರ ನಂಬಿಕೆಯನ್ನು ತೋರಿಸುತ್ತದೆ. ಪತ್ನಜೆ ಎಂಬ ತಿಂಗಳು ಇದು ಕರಾವಳಿ ಯವರ ತಿಂಗಳು. ಭೂತ ಕೋಲ ವು ಈ ತಿಂಗಳ ಒಳಗೆ ಮಾಡಿ ಮುಗಿಸಬೇಕು. ಹಾಗೂ ದೈವಕ್ಕೆ ತಂಬಿಲ ಅಥವಾ ಪರ್ವ ಕೊಡುವ ತಿಂಗಳು. ತುಳುನಾಡು ತನ್ನದೇ ಆದ ಭಾಷೆ, ಕಲೆ, ಸಂಸ್ಕೃತಿ, ಧರ್ಮ, ಆಚಾರ-ವಿಚಾರಗಳು ಹಾಗೂ ಪ್ರಾಕೃತಿಕ ಸೌಂದರ್ಯಗಳಿಂದ ತುಳುನಾಡಿನ ಆಭರಣವಾಗಿದೆ.
ತುಳುನಾಡು ತಿಂಡಿ ತಿನಿಸುಗಳಲ್ಲಿ ಸಹ ವಿವಿಧ ರೀತಿಯ ಬಗೆಗಳಿವೆ. ಮುಗಿಯದಷ್ಟು ತಿಂಡಿ ತಿನಿಸುಗಳ ಪಟ್ಟಿಗಳಿವೆ ಅವು ನಮ್ಮ ಆರೋಗ್ಯಕ್ಕೂ ಸಹ ಅಷ್ಟೇ ಒಳ್ಳೆಯ ರೀತಿಯ ಪರಿಣಾಮ ಬೀರುತ್ತದೆ. ತುಳುನಾಡಿನ ಪ್ರಪ್ರಥಮ ಹೆಸರಾಂತ ತಿಂಡಿ ಎಂದರೆ ಅದು ನೀರು ದೋಸೆ, ಬೆಳಗ್ಗೆ ಎದ್ದರೆ ಒಲೆಯ ಮೇಲೆ ಕಾವಲಿ ಇಟ್ಟು ಮೊದಲ ಚುಂಯ್ ಚುಂಯ್ ಶಬ್ದವೇ ತುಡುನಾಡಿನ ಮಕ್ಕಳಿಗೆ ಅಲಾರಾಂ ಇದ್ದಂತೆ.ನಂತರ ಕೋಳಿ, ಮೀನು, ಹಾಗೂ ಕೇಸುವಿನ ಎಳೆಯ ಪತ್ರೊಡೆ ಹಲಸು, ಕಾಣಿಲೆ, ರೊಟ್ಟಿ, ಪುಂಡಿ, ಕೊಟ್ಟಿಗೆ ಹೀಗೆ ಹೇಳುತ್ತಾ ಹೋದರೆ ಮುಗಿಯದಷ್ಟು ತಿಂಡಿ ತಿನಿಸುಗಳು ಇವೆ.
ಹೀಗೆ ಒಂದಲ್ಲ ಒಂದು ವಿಷಯದಲ್ಲಿ ತುಳುನಾಡು ಎಲ್ಲಕ್ಕಿಂತ ಪ್ರಸಿದ್ಧ ಸ್ಥಾನವನ್ನು ಪಡೆದಿದೆ. ಸಂಸ್ಕೃತಿ,ವೈಭವಕ್ಕೆ ಇನ್ನೊಂದು ಹೆಸರೇ ನಮ್ಮ ತುಳುನಾಡು.ತುಳುನಾಡು ಶಿಕ್ಷಣ, ವೈದ್ಯಕೀಯ ಹಾಗೂ ಪ್ರವಾಸೋದ್ಯಮದ ಕ್ಷೇತ್ರಗಳಲ್ಲಿ ಕೂಡ ಉನ್ನತ ಸ್ಥಾನದಲ್ಲಿದೆ. ಉಡುಪಿ ಶ್ರೀಕೃಷ್ಣ ದೇವಸ್ಥಾನ, ಧರ್ಮಸ್ಥಳ, ಮೂಡಬಿದ್ರೆಯ ಬಸದಿಗಳು, ಮಲ್ಪೆ, ಪಣಂಬೂರು, ಕಾಪು ಕಡಲತೀರಗಳು ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತವೆ. ನಿಜವಾಗಲು ತುಳುನಾಡನ್ನು ವರ್ಣಿಸಲು ಪದಗಳೇ ಸಾಲದು.ತುಳುನಾಡು ದೇಶ–ವಿದೇಶಗಳಲ್ಲಿ ಸಹ ಹೆಸರು ಮಾಡಿದೆ. ಆದ್ದರಿಂದ ಈ ಅಪರೂಪದ ಪರಂಪರೆ, ಸಂಸ್ಕೃತಿ ಮತ್ತು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ.
🚩ಜೈ ತುಳುನಾಡು 🚩
ಅಂಜಲಿ ಮುಂಡಾಜೆ
ಎಸ್ ಡಿ ಯಂ ಕಾಲೇಜು ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



