'ಗಣಿತವೆಂದರೆ ಬಲು ಸುಲಭ' ಕಾರ್ಯಾಗಾರ

Upayuktha
0


ಸುರತ್ಕಲ್‌: ಗಣಿತವೆಂದರೆ ಬಲು ಕಷ್ಟ ಎಂಬ ಭಾವನೆಯನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ತುಂಬಿಸಲಾಗುತ್ತದೆ. ಅದರ ಬದಲು ಗಣಿತವೆಂದರೆ ಬಲು ಸುಲಭ ಎಂಬ ಚಿಂತನೆಯನ್ನು ವಿದ್ಯಾರ್ಥಿಗಳಿಗೆ ತೋರಿಸಿ ಕೊಡಬೇಕು ಎಂದು ಗಣಿತ ತಜ್ಞ ಮತ್ತು ಸಾಹಿತಿ ರಾಜೇಂದ್ರ ಬಿ. ಶೆಟ್ಟಿ ನುಡಿದರು.


ಅವರು ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಮಧ್ಯ ಸುರತ್ಕಲ್‌ನಲ್ಲಿ ಸಿಂಗಾರ ಸುರತ್ಕಲ್‌ನ ವತಿಯಿಂದ ಆಯೋಜಿಸಿದ್ದ 'ಗಣಿತವೆಂದರೆ ಬಲು ಸುಲಭ' ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.


ವಿದ್ಯಾರ್ಥಿಗಳು ಧನಾತ್ಮಕವಾಗಿ  ಆಲೋಚಿಸಿದಾಗ ಯಶಸ್ಸನ್ನು ಕಾಣಲು ಸಾಧ್ಯವಿದೆ. ಕೂಡಿಸುವ, ಕಳೆಯುವವ, ಭಾಗಿಸುವ ಹಾಗೂ ಗುಣಿಸುವ  ಗಣಿತ ವಿಧಾನಗಳನ್ನು ಸರಳವಾದ ಸುಲಭ ವಿಧಾನ ದಲ್ಲಿ ಮಾಡ ಬಹುದು ಎಂಬುದನ್ನು ತೋರಿಸಿಕೊಟ್ಟರು.


ಪ್ರೊ. ಕೃಷ್ಣಮೂರ್ತಿ ಮಾತನಾಡಿ, ನಿವೃತ್ತ ಇಂಜಿನಿಯರ್ ಆಗಿರುವ ರಾಜೇಂದ್ರ ಬಿ ಶೆಟ್ಟಿಯವರು 'ಗಣಿತ ಬಲು ಸುಲಭ' ಎಂಬ ಕನ್ನಡ ಹಾಗೂ 'ಮ್ಯಾತ್ಸ್ ಇಸ್ ಈಜಿ' ಎಂಬ ಆಂಗ್ಲ ಪುಸ್ತಕಗಳ ಮೂಲಕ ಸರಳ ಗಣಿತದ ಪ್ರಸಾರದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಸರಕಾರಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಸುಲಭ ವಿಧಾನದಲ್ಲಿ ಗಣಿತವನ್ನು ಕಲಿಸಿಕೊಡುವ ಮೂಲಕ ಗಣಿತ ವಿಷಯದ ಕುರಿತಾಗಿ ಆಸಕ್ತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಪ್ರಾಮಾಣಿಕ ಮತ್ತು ಬದ್ಧತೆಯ ಮೂಲಕ ವಿದ್ಯಾರ್ಥಿಗಳನ್ನು ತಲುಪುವ ಕಾರ್ಯದಲ್ಲಿ ಅಧ್ಯಾಪಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದರು.


ಚೇಲೈರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಮಾತನಾಡಿ ಗಣಿತದ ಕುರಿತಾಗಿ ಆಸಕ್ತಿ ರೂಪಿಸುವ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ ಎಂದರು. ಸರಿ ಉತ್ತರವನ್ನು ನೀಡಿದ ವಿದ್ಯಾರ್ಥಿಗಳಿಗೆ  ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಶಿಕ್ಷಕಿ ಸುನಂದಾ ಸ್ವಾಗತಿಸಿ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top