ಮಂಗಳೂರು ವಿವಿ ಕುಲಸಚಿವ ಕೆ. ರಾಜು ಮೊಗವೀರ ನಿವೃತ್ತಿ

Upayuktha
0


ಮಂಗಳೂರು:  ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿದ್ದ  ಕೆ. ರಾಜು ಮೊಗವೀರ (KAS super time scale) ಅವರು ನ.30 ರಂದು ವೃತ್ತಿಯಿಂದ ನಿವೃತ್ತಿ ಹೊಂದಿದ್ದು, ವಿಶ್ವವಿದ್ಯಾನಿಲಯದ ವತಿಯಿಂದ ರಾಜು ಮೊಗವೀರ ಅವರನ್ನು ಶನಿವಾರ ಗೌರವಿಸಿ ಬೀಳ್ಕೊಡಲಾಯಿತು.


ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ  ಮಾತನಾಡಿ, ಕೋವಿಡ್ 19 ರ ಕಷ್ಟದ ಪರಿಸ್ಥಿತಿಯಲ್ಲಿ ಮಂಗಳೂರು ವಿವಿಗೆ ಕುಲ ಸಚಿವರಾಗಿ ಬಂದ ರಾಜು ಮೊಗವೀರ ಅವರು ಆ ಸಂದರ್ಭವನ್ನು ನಿರ್ವಹಿಸಿದ ರೀತಿ ಮರೆಯಲಾಗದ್ದು. ನಂತರ ವರ್ಗಾವಣೆಗೊಂಡ ಅವರು ಎರಡನೇ ಅವಧಿಗೆ ವಿವಿಗೆ ಕುಲಸಚಿವರಾದರು.  ಆಡಳಿತದಲ್ಲಿ ಅವರು ಕೈಗೊಂಡಿರುವ ಕಟ್ಟುನಿಟ್ಟಿನ ನಿರ್ಧಾರ, ವಿವಿ ಆಡಳಿತ ಸುಧಾರಣೆಗೆ ಪಟ್ಟಿರುವ ಶ್ರಮ ಮರೆಯಲಾಗದು ಎಂದು ಹೇಳಿದರು. ವಿವಿ ಸಿಬ್ಬಂದಿಯ ಕಾರ್ಯಕ್ಷಮತೆ ಹೆಚ್ಚಳ, ಸಾಮಥ್ರ್ಯ ವೃದ್ಧಿಗೆ ಪ್ರಾರಂಭಿಸಿರುವ ಉತ್ತಷ್ಠ ಎಂಬ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದರು.    


ಸಮಾರಂಭದಲ್ಲಿ  ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಎ.ಎಂ. ಖಾನ್, ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ, ಹಿರಿಯ ಕೆಎಎಸ್ ಅಧಿಕಾರಿ ಆರ್.ದೇವರಾಜ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಕೆ.ರಾಜು ಮೊಗವೀರ ಅವರು  ಭಟ್ಕಳ, ಬೈಂದೂರು, ಕುಂದಾಪುರದಲ್ಲಿ ತಹಶೀಲ್ದಾರರಾಗಿ, ಶಿರಸಿ ಉಪವಿಭಾಗದ ಉಪವಿಭಾಗಾಧಿಕಾರಿಯಾಗಿ, ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣದಲ್ಲಿ ಹೆಚ್ಚುವರಿ ನಿರ್ದೇಶಕರಾಗಿ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಅಪರ ಜಿಲ್ಲಾಧಿಕಾರಿಯಾಗಿ,  ಉಡುಪಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top