ಮಂಗಳೂರು: ಮಹಾತ್ಮಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭವು ನವೆಂಬರ್ 26ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೊಂಡೇರಂಗಡಿ ಕುಕ್ಕುಜೆ ಕಾರ್ಕಳದಲ್ಲಿ ನಡೆಯಿತು ಸಮಾರೋಪ ಸಮಾರಂಭದ ಭಾಷಣಕಾರರಾದ ವಿನಯ್ ಭಟ್ ಕಾರ್ಯಕ್ರಮದಲ್ಲಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆ ಯುವಕರಲ್ಲಿ ಸಾಮಾಜಿಕ ಜಾಗೃತಿ, ಶಿಸ್ತು, ಸೇವಾಭಾವ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ವಿಶಿಷ್ಟ ವೇದಿಕೆ ಎಂದು ಪ್ರಶಂಸಿಸಿದರು. ಜಾಗೃತಿ ಕಾರ್ಯಕ್ರಮಗಳು, ಗ್ರಾಮೀಣ ಸೇವಾ ಚಟುವಟಿಕೆಗಳು, ಪರಿಸರ ಸಂರಕ್ಷಣಾ ಕೆಲಸಗಳಲ್ಲಿ ಎನ್.ಎಸ್.ಎಸ್ ಘಟಕ ತೋರಿದ ಚಟುವಟಿಕೆಗಳನ್ನೂ ಅವರು ಮೆಚ್ಚಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾತ್ಮಗಾಂಧಿ ಸ್ಮಾರಕ ಸಂಘ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯಕ್ ವಹಿಸಿದ್ದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಗೋಪಿನಾಥ್ ಭಟ್, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಅಶೋಕ್ ಕುಮಾರ್ ದೊಂಡೇರಂಗಡಿ , ‘ದುರ್ಗಾಂಬಾ ಕ್ಲಿನಿಕ್’ನ ಪ್ರಮೋದ್ ಕುಮಾರ್ ಹೆಗ್ಡೆ, ಗ್ರಾಮ ಪಂಚಾಯತ್ ಸದಸ್ಯರಾದ ದೀಕ್ಷಿತ್ ಶೆಟ್ಟಿ , ದೊಂಡೇರಂಗಡಿ ಗರಡಿ ಅರ್ಚಕರಾದ ಚೆಲುವಯ್ಯ ಪೂಜಾರಿ , ಬೈರಂಪಳ್ಳಿ ಹೆಗ್ಡೆ ಕನ್ಸ್ಟ್ರಕ್ಷನ್ ನ ಮಾಲಕರಾದ ಗಣೇಶ್ ಹೆಗ್ಡೆ , ದೊಂಡೇರಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ದಯಾನಂದ ನಾಯಕ್,ಕುಕ್ಕುಜೆ ನಿವೃತ್ತ ಮುಖ್ಯೋಪಾಧ್ಯಾಯರಾದ ಡಿ ಲಕ್ಷ್ಮಣ್ ಹಾಗೂ ಎನ್. ಎಸ್ .ಎಸ್ ಶಿಬಿರಾಧಿಕಾರಿ ಸನತ್ ಕೋಟ್ಯಾನ್, ರೆಡ್ ಕ್ರಾಸ್ ಶಿಬಿರಾಧಿಕಾರಿ ಕು ದೀಪಿಕಾ ,ರೇಂಜರ್ಸ್ ಶಿಬಿರಾಧಿಕಾರಿ ಸ್ಟಾಲಿನ್ ಡಿ ಸೋಜಾ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




