ಜಗತ್ತಿನ ಸರ್ವ ಶ್ರೇಷ್ಠ ಭಾಷೆ ಕನ್ನಡ: ತ್ರೀನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ

Upayuktha
0
 ಕದಂಬ ಸೈನ್ಯ ರಾಜ್ಯಮಟ್ಟದ ಕವಿಗೋಷ್ಠಿ


ಮಂಡ್ಯ: ಕನ್ನಡ ಜಗತ್ತಿನ ಶ್ರೇಷ್ಠ ಮತ್ತು ಮಧುರವಾದ ಭಾಷೆ ಎಂದು ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರೀನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ತಿಳಿಸಿದರು.

ಕದಂಬ ಸೈನ್ಯ ಕನ್ನಡ ಸಂಘಟನೆ ಮತ್ತು ಕದಂಬವಾಣಿ ದಿನಪತ್ರಿಕೆ ಮಂಡ್ಯ  ವತಿಯಿಂದ  ಬುಧವಾರ ಶ್ರೀರಂಗಪಟ್ಟಣ ಪೂರ್ವವಾಹಿನಿ ಸಮೀಪದ ಶ್ರೀ ಕ್ಷೇತ್ರ ಚಂದ್ರವನ ಆಶ್ರಮದ ರಂಗವೇದಿಕೆಯಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕವಿಗೋಷ್ಟಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಮಾತನಾಡಿದ ಶ್ರೀಗಳು ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿರುವುದು ಕನ್ನಡ ಭಾಷೆಯ ಹಿರಿಮೆಗೆ ಸಾಕ್ಷಿ,  ಭಾಷೆಯ ಅಸ್ಮಿತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕಿದೆ. ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಅವರು ನಿಸ್ವಾರ್ಥವಾಗಿ ಕನ್ನಡ ನಾಡು ನುಡಿ ಸೇವೆ ಸಲ್ಲಿಸುತ್ತಿರುವುದು ಅವರು ನಡೆಸುವ ಕನ್ನಡ ನಾಡು ನುಡಿ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಾವು ಸಂತೋಷದಿಂದ ಭಾಗವಹಿಸುತ್ತಾ ಬಂದಿರುವುದಾಗಿ ತಿಳಿಸಿದರು.  


ಚಲನಚಿತ್ರ ನಿರ್ಮಾಪಕ ಎನ್.ನರಸಿಂಹಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಬಿಜೆಪಿ ಯುವ ಮುಖಂಡ ಸಚ್ಚಿದಾನಂದ ಇಂಡವಾಳು, ಮೈಸೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯರು ಈ. ಸಿ. ನಿಂಗರಾಜ್‍ ಗೌಡ ಮಾತನಾಡಿದರು. ಕದಂಬ ಸೈನ್ಯ ಕನ್ನಡ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ್ ಪ್ರಾಸ್ತಾವಿಕ ಮಾತುಗಳಾಡಿದರು. ಕದಂಬ ಸೈನ್ಯ ಸಂಘಟನೆಯ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್ ರಾಂಪುರ, ಹಾಸನ ಜಿಲ್ಲಾ ಘಟಕದ ಅಧ್ಯಕ್ಷರು ಪ್ರೊ. ಎ.ಹೆಚ್.ಗಣೇಶ್  ಶ್ರೀ ಚನ್ನವೀರಯ್ಯ ಸ್ವಾಮಿಗಳು,  ಪ್ರಕಾಶ್ ಚಿಕ್ಕಪಾಳ್ಯ, ಡಾ.ಶಶಿಧರ್ ಕೆ.ಆರ್. ವೇದಿಕೆಯಲ್ಲಿದ್ದರು.


ಮೊದಲಿಗೆ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಹಾಸನ ಜಿಲ್ಲೆಯ ಜಮುನಾ  ಜಿ.ಆರ್. ಶ್ರೀಕಾಂತ್, ಗೊರೂರು ಅನಂತರಾಜು, ಹಿರಿಬಿಳತಿ ಮಂಜುನಾಥ್, ಸಾವಿತ್ರಮ್ಮ ಓಂಕಾರ್, ಮಧುಮಾಲತಿ,  ರುದ್ರೇಶ್ ಬೇಲೂರು, ಎಸ್.ಎಸ್.ಪುಟ್ಟೇಗೌಡ, ಹಾನಗಲ್ ಚಂದ್ರಶೇಖರ್, ಕುಮಾರ್ ಛಲವಾದಿ ಮೈಸೂರು ಜಿಲ್ಲೆಯ ಉದ್ದೂರು ಪಿ.ರಾಜು, ದೇವರಹಳ್ಳಿ ಕೃಷ್ಣೇಗೌಡ, ಡಾ.ನ ಗಂಗಾಧರಪ್ಪ, ಎಸ್. ಬಸವೇಶ್, ಚೈತನ್ಯ ಸಿ.ಜಿ.  ಮಂಡ್ಯ ಜಿಲ್ಲೆಯ ದಿಶಾ ಕೆ. ಪ್ರಜ್ಞಾ ಜಿ. ದೀಪ್ತಿ ಎಂ,ಎಸ್. ಮಹೇಶ್‍ಗೌಡ ಎಸ್.ಡಿ. ಡಿ.ಕೆ.ರಾಮಯ್ಯ, ಜೆ.ಕೆ.ಬಸವರಾಜು ಜಯಪುರ, ಶೈಲಜಾ ಎಂ ಕೋರಿಶೆಟ್ಟರ್ ಹಾವೇರಿ, ಚೌಡಯ್ಯ ಸಿ. , ಮೌನೇಶ ಜೆ.ಕೆ.ಕಲಬುರಗಿ, ಸು.ಶಿ.ಶಾಂತಕುಮಾರ್ ಹರವೆ,  ರವೀಂದ್ರಕುಮಾರ್ ಜೆ. ಕನ್ನಡ ನಾಡು ನುಡಿ ಕುರಿತಂತೆ ಕವಿತೆ ವಾಚಿಸಿದರು.


ಅಪ್ಪಣ್ಣ ಬಶೆಟ್ಟಪ್ಪ ನೂರಂದಪ್ಪ ಹುಂಡೇಕಾರ ಬಾದಮಿ, ಎಂ.ಪಿ.ಮುಳಗುಂದ ಗದಗ ಡಾ. ಜಿ.ಕೆ.ಪ್ರತಿಮಾ ರಮೇಶ್. ಮಹೇಶ್, ವೈ.ಎನ್, ಬಿ.ಎಲ್.ರವಿಕುಮಾರ್, ಇರ್ಫಾನ್, ಎಸ್.ಬಿಳಗಿ ವಿಜಯಪುರ, ಶಿವಾನಂದ ಮೂಲಿಮನಿ, ಗದಗ, ಪಕ್ಕೀರಯ್ಯ ಕಣವಿ, ಕವಿತಾ ಗಡದೂರ, ವಿಶಾಲಾಕ್ಷಿ ಪದ್ಮನಾಭ, ಸವಿತಾ ನರಸಿಂಹಮೂರ್ತಿ, ಗಾನಶ್ರೀ, ಪೂರ್ಣಶ್ರೀರನ್ನು ಕದಂಬ ಸೈನ್ಯ ಪ್ರಶಸ್ತಿ ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು. 


ಕದಂಬ ಸೈನ್ಯ ಪದಾದಿಕಾರಿಗಳು  ಉಮ್ಮಡಹಳ್ಳಿ ನಾಗೇಶ್, ಬಿ ಶಿವಕುಮಾರ್, ರಾಮು ಚಿಕ್ಕಗೌಡೇನ ದೊಡ್ಡಿ, ಮೋಹನ್ ಚಿಕ್ಕಮಂಡ್ಯ, ರವಿಕುಮಾರ್ ಅರಕಲಗೊಡು, ವೆಂಕಟೇಗೌಡ ಪಟ್ನ, ಪುಟ್ಟಸ್ವಾಮಿಗೌಡ ಹೊಳೆನರಸೀಪುರ, ಸಲ್ಮಾನ್ ಮಂಡ್ಯ, ಆರಾಧ್ಯ ಗುಡೇಗೆನಹಳ್ಳಿ, ಜೀವನ್ ನೀಲನಕೊಪ್ಪಲು ಮೈಸೂರು ಸ್ವಾಮಿ, ನಾ ಮಹದೇವಸ್ವಾಮಿ ಆಟೋ ಪುಟ್ಟಸ್ವಾಮಿ ಕದಂಬವಾಣಿ ದಿನಪತ್ರಿಕೆ ಸಂಪಾದಕರು ಆರ್.ಎಸ್.ಹೇಮಂತ್‍ರಾಜ್ ಇದ್ದರು. 


  

 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top