ಎಂಜಿಎಂ ಸಂಧ್ಯಾ ಕಾಲೇಜಿನಲ್ಲಿ ‘Know Your World’ ಅಂತರ್‌ಕಾಲೇಜು ಕ್ವಿಜ್ ಸ್ಪರ್ಧೆ

Upayuktha
0


ಉಡುಪಿ: ಮಹಾತ್ಮ ಗಾಂಧಿ ಮೆಮೊರಿಯಲ್ ಸಂಧ್ಯಾ ಕಾಲೇಜು, ಉಡುಪಿ ಇವರ ವತಿಯಿಂದ 10 ಡಿಸೆಂಬರ್ 2025ರಂದು ‘Know Your World’ ಅಂತರ್‌ಕಾಲೇಜು ಕ್ವಿಜ್ ಸ್ಪರ್ಧೆ ಯಶಸ್ವಿಯಾಗಿ ಕಾಲೇಜಿನ ಟಿ. ಮೋಹನದಾಸ್ ಪೈ ಪ್ಲಾಟಿನಂ ಜೂಬಿಲಿ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆ ಡಾ. ಪ್ರಭಾಕರ ಶಾಸ್ತ್ರಿ, ISA ಫೌಂಡೇಶನ್ ಮಣಿಪಾಲ ಇವರಿಂದ ನಡೆಯಿತು.


ಸ್ಪರ್ಧೆಯ ಪ್ರಾಥಮಿಕ ಸುತ್ತಿನಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಲ್ಲಿಂದ 6 ತಂಡಗಳು ಸೆಮಿಫೈನಲ್‌ಗೆ ಆಯ್ಕೆಯಾದವು. ನಂತರ ನಡೆದ ರೋಚಕ ಸೆಮಿಫೈನಲ್ ಸುತ್ತಿನಲ್ಲಿ 4 ತಂಡಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಾ ಫೈನಲ್ ಸುತ್ತಿಗೆ ಅರ್ಹತೆ ಪಡೆದವು. ಈ ಸ್ಪರ್ಧೆಯಲ್ಲಿ ಉಡುಪಿ ಎಂ.ಜಿ.ಎಂ. ಪಿಯು ಕಾಲೇಜಿನ ಮನೀಷ್ ಭಾಗವತ್ ಮತ್ತು ಪ್ರೇರಣ್ ಅವರು ಅತ್ಯುತ್ತಮ ಸಾಧನೆ ತೋರಿಸಿ ರೂ. 5,000 ನಗದು ಬಹುಮಾನ ಹೊಂದಿದ ಪ್ರಥಮ ಸ್ಥಾನ ಪಡೆದರು.


ಉಡುಪಿ ಜ್ಞಾನಸುದಾ ಕಾಲೇಜಿನ ಸುಮುಖ ರಾವ್ ಬಿ.ಎಸ್ ಮತ್ತು ವಂಶೀ ಕೃಷ್ಣ ಅವರು ತಮ್ಮ ಶ್ರೇಷ್ಟ ಪ್ರದರ್ಶನದಿಂದ ರೂ. 3,000 ನಗದು ಬಹುಮಾನ ಹೊಂದಿದ ದ್ವಿತೀಯ ಸ್ಥಾನ ಪಡೆದುಕೊಂಡರು. ಅದೇ ಕಾಲೇಜಿನ ಮನೀಷ್ ಬಿಲ್ಲವ ಮತ್ತು ರಿತಿಕ್ ಎನ್. ಶೆಟ್ಟಿ ಅವರು ರೂ. 2,000 ನಗದು ಬಹುಮಾನ ಹೊಂದಿದ ತೃತೀಯ ಸ್ಥಾನ ಗಳಿಸಿದರು. ಜೊತೆಗೆ ರೂ. 1,000 ನಗದು ಮೊತ್ತದ ಮೂರು ಸಮಾಧಾನ ಬಹುಮಾನಗಳು ಕ್ರಮವಾಗಿ ಕ್ರಿಯೇಟಿವ್ ಪಿಯು ಕಾಲೇಜು, ಕಾರ್ಕಳ ಚಿಂತನ್ ಮನು ಹೆಗ್ಡೆ ಮತ್ತು ಮಿಹಿರ್ ಹೆಗ್ಡೆ, ಸೇಂಟ್ ಮೇರಿಸ್ ಪಿಯು ಕಾಲೇಜು, ಕುಂದಾಪುರದ ಅಲೀಸ್ಟನ್ ಮತ್ತು ಪೃಥ್ವಿರಾಜ್ ಗಾಣಿಗ, ಹಾಗೂ ಜ್ಞಾನಸುದಾ ಕಾಲೇಜು, ಕಾರ್ಕಳದ ಅನುಷ್ಕಾ ಹೆಗ್ಡೆ ಮತ್ತು ಪ್ರಥುಲ್ ಡಿಸೋಝಾ ಅವರಿಗೆ ವಿತರಿಸಲಾಯಿತು.


ಸಮಾರೋಪ ಸಮಾರಂಭದಲ್ಲಿ ಡಾ. ವಿಷ್ವನಾಥ್ ಪೈ, ಬಿ.ಸಿ.ಎ ಸಂಯೋಜಕರು, ಕ್ವಿಜ್‌ನ ಮಹತ್ವ ಮತ್ತು ವಿದ್ಯಾರ್ಥಿಗಳಿಗೆ ಇದು ನೀಡುವ ಜ್ಞಾನ ವಿಸ್ತಾರ ಕುರಿತು ತಮ್ಮ ಅಮೂಲ್ಯವಾದ ಒಳನೋಟಗಳನ್ನು ಹಂಚಿಕೊಂಡರು. ನಂತರ ಡಾ. ಪ್ರಭಾಕರ ಶಾಸ್ತ್ರಿ, ISA ಫೌಂಡೇಶನ್, ಮಣಿಪಾಲ ಇವರು ಕ್ವಿಜ್‌ ಕಾರ್ಯಕ್ರಮದ ಅಗತ್ಯತೆ ಮತ್ತು ಸಮಾಜದಲ್ಲಿ ಜ್ಞಾನಾಧಾರಿತ ಚಿಂತನೆಯ ಮಹತ್ವದ ಬಗ್ಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವೀದಾಸ್ ಎಸ್. ನಾಯಕ್ ಅವರು ನೀಡಿ ಕಾರ್ಯಕ್ರಮಕ್ಕೆ ಅಧಿಕೃತ ಸ್ಪೂರ್ತಿ ತುಂಬಿದರು.


ಈ ಸಂದರ್ಭದಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಸಮಿತಿಯ ಅಧ್ಯಕ್ಷರಾದ ಧೀರಜ್, ಎಂ.ಜಿ.ಎಂ ಸಂಧ್ಯಾ ಕಾಲೇಜು ಮತ್ತು ನಂದನ್, ಎಂ.ಜಿ.ಎಂ ಕಾಲೇಜು ಉಪಸ್ಥಿತರಿದ್ದರು. ಬಹುಮಾನಗಳ ಪಟ್ಟಿಯನ್ನು ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರಾದ ಕು.ವರ್ಷಿಣಿ ಕೋಟ್ಯಾನ್ ಅವರು ಪ್ರಕಟಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ವಿಗ್ನೇಶ್ ಭಟ್ ಅವರು ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೋಗ್ರಾಮರ್ ಕು.ಚೇತನಾ ಮತ್ತು ಇಂಗ್ಲಿಷ್ ವಿಭಾಗದ ಉಪನ್ಯಾಸಕರಾದ ಸ್ಟಾಲಿನ್ ಡಾನ್ಸನ್ ಡಿಸೋಝಾ ಸಮರ್ಪಕವಾಗಿ ನಿರ್ವಹಿಸಿದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top