ಕುಳಾಯಿ ಶ್ರೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆ- ಶಾಲಾಭಿವೃದ್ಧಿ ಸಮಿತಿಯ ಸಭೆ

Upayuktha
0

ಆಡಳಿತ ಮಂಡಳಿ ನಿರ್ಣಯ ಬೆಂಬಲಿಸಿರಿ: ಶ್ರೀರಂಗ ಹೊಸಬೆಟ್ಟು




ಕುಳಾಯಿ: ಹಿಂದು ವಿದ್ಯಾದಾಯಿನೀ ಸಂಘ ಸುರತ್ಕಲ್ ಇದರ ಆಡಳಿತಕ್ಕೊಳಪಟ್ಟ ಕುಳಾಯಿ ಶ್ರೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಸಭೆಯು ಸಮಿತಿ ಅಧ್ಯಕ್ಷ ಶ್ರೀಧರ್ ಹೆಚ್ ರವರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಹಿಂದು ವಿದ್ಯಾದಾಯಿನೀ ಸಂಘದ ಗೌರವಾನ್ವಿತ ಕಾರ್ಯದರ್ಶಿ ಶ್ರೀರಂಗ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನಯ ಆಚಾರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಂಜುನಾಥ ಉಪಸ್ಥಿತರಿದ್ದರು.


ಸಭೆಯಲ್ಲಿ ಹಿಂದು ವಿದ್ಯಾದಾಯಿನೀ ಸಂಘದ ಉದ್ದೇಶಿತ ಯೋಜನೆಯಾದ ಆಂಗ್ಲಮಾಧ್ಯಮ 1ರಿಂದ 7ನೇ ತರಗತಿ ವಿಸ್ತರಿಸಲು ತರಗತಿ ಕಟ್ಟಡ ನಿರ್ಮಾಣದ ಕುರಿತು ಚಿಂತನಾ ಸಭೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ನಿವೃತ್ತ ಮುಖ್ಯ ಶಿಕ್ಷಕರು, ನಿವೃತ್ತ ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಊರ ಮಹನೀಯರು, ಶಾಲಾಭಿಮಾನಿಗಳು, ಶಿಕ್ಷಕ ವೃಂದದವರು ಕಟ್ಟಡ ನಿರ್ಮಾಣಕ್ಕೆ ಬೆಂಬಲ ಸೂಚಿಸಿದರು.


ಆಡಳಿತ ಮಂಡಳಿಯವರ ತಿರ್ಮಾನ ದೊಂದಿಗೆ ಮುನ್ನಡೆಯುದಾಗಿ ನಿರ್ಣಯಿಸಲಾಯಿತು. ಸಂಚಾಲಕರಾದ ಶ್ರೀಮತಿ ಕೆ. ಕಲಾವತಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀರಂಗರವರು ಆಡಳಿತ ಮಂಡಳಿಯ ನಿರ್ಣಯಕ್ಕೆ ಬೆಂಬಲ ಕೋರಿದರು. ಮುಖ್ಯೋಪಾಧ್ಯಾಯರಾದ ಗೋಪಾಲ್. ವಿ. ಎಲ್ಲರನ್ನು ಸ್ವಾಗತಿಸಿದರು. ಸಹಶಿಕ್ಷಕರಾದ ಭಾಸ್ಕರ್ ರವರು ವರದಿ ವಾಚಿಸಿದರು. ಸಮಿತಿ ಸಂಚಾಲಕರಾದ ಯೋಗೀಶ್ ಸನಿಲ್ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕರಾದ ಮಲಕಪ್ಪ ರವರು ಧನ್ಯವಾದ ಗೈದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top