ಕೋಟ: ಡಾ ಕೋಟ ಶಿವರಾಮ ಕಾರಂತರ 28 ನೇ ಸ್ಮೃತಿ ದಿನಾಚರಣೆಯನ್ನು ಡಾ. ಕೋಟ ಶಿವರಾಮ ಕಾರಂತ ರಿಸರ್ಚ್ ಮತ್ತು ಸ್ಟಡಿ ಸೆಂಟರ್ ಟ್ರಸ್ಟ್ ಹಾಗೂ ಗೆಳೆಯರ ಬಳಗ ಕಾರ್ಕಡ, ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಕಾರಂತ ಸ್ಮೃತಿ ಚಿತ್ರಶಾಲೆಯಲ್ಲಿ ಮಂಗಳವಾರ ಆಚರಿಸಲಾಯಿತು. ಎಲ್ಲಾ ಗಣ್ಯರು ಕಾರಂತರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪುಷ್ಪ ನಮನ ಸಲ್ಲಿಸಿದರು.
ಸಂಸ್ಥೆಯ ಅಧ್ಯಕ್ಷ ಬಿ.ಎಂ. ಗುರುರಾಜ ರಾವ್ ಎಲ್ಲರನ್ನು ಸ್ವಾಗತಿಸಿ, ಶಿವರಾಮ ಕಾರಂತರ ನೆನಪುಗಳು ಮುಂದಿನ ತಲೆಮಾರಿಗೆ ತೆಗೆದುಕೊಂಡು ಹೋಗುವ ಬಗ್ಗೆಎಲ್ಲರೂ ಶ್ರಮ ವಹಿಸಬೇಕು. ಕಾರ್ಯನಿರ್ವಹಕ ವಿಶ್ವಸ್ಥ ಗುಜ್ಜಾಡಿ ಪ್ರಭಾಕರ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಾವರ ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷರಾದ ಜಿ. ರಾಮಚಂದ್ರ ಐತಾಳರು ಕಾರಂತರ ಸಂಸ್ಮರಣೆ ಮಾಡಿ ಜೀವನ ಎನ್ನುವದು ಕರ್ತವ್ಯ. ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವುದು ಕಾರಂತರ ಆಶಯ ಎಂದರು.
ಸಭಿಕರಾದ ಗಣಪ್ಪಯ್ಯ ನಾವುಡರು ಕಾರಂತರ ಸಾಮಾಜಿಕ ಕಾಳಜಿಯ ಬಗ್ಗೆ ಮಾತಾಡಿದರು. ಸಮಾರಂಭದ ಮುಖ್ಯ ಅತಿಥಿಯಾದ ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷರಾದ ಕೆ. ತಾರಾನಾಥ ಹೊಳ್ಳ, ಹಂಗಾರಕಟ್ಟೆ ಯಕ್ಷಕಲಾರಂಗದ ರಾಜಶೇಖರ ಹೆಬ್ಬಾರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ನಾರಾಯಣ ಆಚಾರ್ಯ ವಂದಿಸಿದರು.
ಟ್ರಸ್ಟಿನ ವಿಶ್ವಸ್ಥರಾದ ಸಂದೀಪ್ ಶೆಟ್ಟಿ, ಕೆ. ಪಂಜು ಪೂಜಾರಿ, ಉದ್ಯಮಿ ಮಾಧವ ಪೈ, ಪ್ರಸನ್ನ ಉರಾಳ ಹಾಗೂ ಚಂದ್ರಶೇಖರ ನಾವುಡ, ಪಿ. ಶ್ರೀನಿವಾಸ ಉಪಾಧ್ಯ, ಕೆ. ಜಗದೀಶ ಆಚಾರ್ಯ, ಸಂಗೀತಾ, ರಂಜನಿ ಉಪಸ್ಥಿತರಿದ್ದರು. ನಂತರ ಯಕ್ಷಗಾನ ಕಲಾ ಕೇಂದ್ರದ ಸಾರಥ್ಯದಲ್ಲಿ ಯಕ್ಷ- ಗಾನವೈಭವ ಜರಗಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


