ಡಿ.14ರಂದು 'ಕರಾವಳಿ ಕವನಗಳು' ಕೃತಿ ಬಿಡಗಡೆ, ಕವಿಗೋಷ್ಠಿ

Chandrashekhara Kulamarva
0



ಮಂಗಳೂರು: ಬಹು ಓದು ಬಳಗ ಮಂಗಳೂರು ಹಾಗೂ ಆಕೃತಿ ಆಶಯ ಪಬ್ಲಿಕೇಷನ್ ಮಂಗಳೂರು ಸಹಯೋಗದಲ್ಲಿ ಡಾ. ಉಷಾ ಪ್ರಕಾಶ್ ಹಾಗೂ ಡಾ. ರಾಘವೇಂದ್ರ ಜಿಗಳೂರ ಸಂಪಾದಕತ್ತದ ಕೃತಿ 'ಕರಾವಳಿ ಕವನಗಳು' ಮಂಗಳೂರಿನ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಭಾನುವಾರ  (ಡಿ.14) ಬಿಡುಗಡೆಗೊಳ್ಳಲಿದೆ.


ಮೈಸೂರು ವಿಶ್ವವಿದ್ಯಾನಿಲಯದ ಶಾಸ್ತ್ರೀಯ ಅಧ್ಯಯನ ಕೇಂದ್ರದ ಸಂಶೋಧಕರಾದ ಡಾ. ಚಲಪತಿ ಆರ್. ಅವರು ಕೃತಿ ಬಿಡುಗಡೆಗೊಳಿಸಲಿದ್ದಾರೆ. ಕಾಸರಗೋಡಿನ ಕವಿ, ಲೇಖಕ ಹಾಗೂ ಹಿರಿಯ ಪತ್ರಕರ್ತ ರಾಧಾಕೃಷ್ಣ ಉಳಿಯತಡ್ಕ ಅವರು ಅಧ್ಯಕ್ಷತೆವಹಿಸಿಲಿದ್ದಾರೆ. ಉಡುಪಿಯ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ನಿಕೇತನ ಪುಸ್ತಕ ವಿಮರ್ಶೆ ಮಾಡಲಿದ್ದಾರೆ. ಸಾಹಿತಿ ಹಾಗೂ ವಿಮರ್ಶಕ ಅರವಿಂದ ಚೊಕ್ಕಾಡಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.


ಅಂದು ಬೆಳಿಗ್ಗೆ ನಡೆಯುವ ಕವಿಗೋಷ್ಠಿಯಲ್ಲಿ ಕೆನರಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ, ಸಾಹಿತಿ ರಘು ಇಡ್ತಿದು ಆಶಯ ಭಾಷಣ ಮಾಡಲಿದ್ದು, ಕಿಲ್ಪಾಡಿಯ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದ ವಿದ್ಯಾರ್ಥಿನಿ ಕುಮಾರಿ ದಿಯಾ ಉದಯ್ ಡಿ. ಆಧ್ಯಕ್ಷತೆವಹಿಸಲಿದ್ದಾರೆ.


ಡಾ. ಮೀನಾಕ್ಷಿ ರಾಮಚಂದ್ರನ್, ಶ್ರೀಮತಿ ಸಿಹಾನಾ ಬಿ.ಎಂ. ಡಾ. ಆಶಾಲತಾ ಚೇವಾರು ಪ್ರತಿಕ್ರಿಯೆ ನೀಡಲಿದ್ದಾರೆ. ಪ್ರಕಾಶಕರಾದ ಕಲ್ಲೂರು ನಾಗೇಶ್ ಉಪಸ್ಥಿತರಿರುತ್ತಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top