ಉಡುಪಿ: ವಲಯದ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೆಸಿಐ ಉಡುಪಿ ಸಿಟಿಯ ಜೂನಿಯರ್ ಜೆಸಿ ವಿಭಾಗದ ಪದಗ್ರಹಣ ಸಮಾರಂಭವು ಶಾರದಾ ಇಂಟರ್ನ್ಯಾಷನಲ್ ಹೋಟೆಲಿನಲ್ಲಿ ಡಿ.14ರಂದು ನಡೆಯಿತು. ಜೆಸಿ ವಲಯ 15ರ ಜೂನಿಯರ್ ಜೆಸಿ ವಿಭಾಗದ ವಲಯ ನಿರ್ದೇಶಕ ಸನತ್ ಕುಮಾರ್ ನಾಯ್ಕ್ ರವರು ನೂತನ ಜೂನಿಯರ್ ಜೆಸಿ ಸದಸ್ಯರಿಗೆ ಪ್ರಮಾಣವಚನವನ್ನು ಬೋಧಿಸಿದರು. ಜೂನಿಯರ್ ಜೆಸಿ ವಿಭಾಗದ ನೂತನ ಅಧ್ಯಕ್ಷ ಶ್ರೀರಾಜ್ ಆಚಾರ್ಯರವರ ತಂಡವು ಪ್ರಮಾಣವಚನವನ್ನು ಸ್ವೀಕರಿಸಿತು.
ಸಮಾರಂಭದಲ್ಲಿ ಅತಿಥಿಯಾಗಿ, ಕಾಂತಾರ ಖ್ಯಾತಿಯ ನಟಿ ಪ್ರತಿಮಾ ನಾಯ್ಕ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಘಟಕ ಅಧ್ಯಕ್ಷೆ ಪಲ್ಲವಿ ಕೊಡಗು ಉಪಸ್ಥಿತರಿದ್ದರು. ತನುಶ್ರೀ ಪಾಲನ್ ರವರ ಜೆಸಿವಾಣಿಯೊಂದಿಗೆ ಆರಂಭವಾದ ಸಮಾರಂಭ ನೂತನ ಜೆಜೆಸಿ ಕಾರ್ಯದರ್ಶಿ ಧನ್ಯಶ್ರೀ ರವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


