ಮಂಗಳೂರು: ಕೆನರಾ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿಕೋಶದ ಉಪಕ್ರಮದಡಿಯಲ್ಲಿ ಕನ್ನಡ,ಹಿಂದಿ, ಸಂಸ್ಕೃತ ವಿಭಾಗ ಹಾಗೂ ಕೊಂಕಣಿ, ತುಳು ಭಾಷಾ ಸಂಘಗಳ ಸಹಯೋಗದಲ್ಲಿ 'ಭಾರತೀಯ ಭಾಷಾ ದಿವಸ'ವನ್ನು ಆಚರಿಸಲಾಯಿತು. ಬಹುಭಾಷಾ ಲೇಖಕಿ ಅಕ್ಷತಾ ರಾಜ್ ಪೆರ್ಲ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದು ಮಾತನಾಡಿದರು.
ಭಾಷೆಗಳನ್ನು ಹೆಚ್ಚು ಹೆಚ್ಚು ಕಲಿಯಬೇಕು. ಆಗ ಅದರ ಪ್ರಯೋಜನದ ಅರಿವಾಗುವುದು. ಯಾವುದೇ ಭಾಷೆ ಬೆಳೆಯಲು ಸಾಹಿತ್ಯ ಕಾರಣ. ಸಾಹಿತ್ಯ ಬಿಟ್ಟು ಭಾಷೆ ಇಲ್ಲ. ವಿದ್ಯಾರ್ಥಿಗಳು ಬೇರೆ ಬೇರೆ ಭಾಷೆಗಳ ಸಾಹಿತ್ಯವನ್ನು ಓದಿ ತಮ್ಮ ಭಾಷಾ ನೈಪುಣ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಅಲ್ಲದೆ ಅನುವಾದ ಕ್ಷೇತ್ರದಲ್ಲಿ ಕೆಲಸ ಮಾಡಲು ಅಭ್ಯಾಸ ಬೇಕು. ಅದಕ್ಕೆ ಸಮಗ್ರ ಶಬ್ದಕೋಶ ಬೇಕು.ಅದುವೇ ಸಾಹಿತ್ಯ ಆಗಬಲ್ಲದು. ಅಲ್ಲಿ ಸಿಗುವಷ್ಟು ಪದಗಳು ಬೇರೆಲ್ಲೂ ಇಲ್ಲ. ಭಾರತೀಯ ಭಾಷೆಗಳೆಂದರೆ ಒಂದು ಕುಟುಂಬವಿದ್ದಂತೆ. ಯಾವುದೇ ಭಾಷೆಗೆ ಗೌರವ ತೋರಿಸುವುದು ಕೀಳರಿಮೆಯಾಗಲಿ ಸರಿಯಲ್ಲ ಎಂದು ಅವರು ಹೇಳಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ. ದೇಜಮ್ಮ ಅಧ್ಯಕ್ಷತೆ ವಹಿಸಿದ್ದು ಚಿಕ್ಕಂದಿನಲ್ಲಿ ಬಹು ಬೇಗನೆ ಭಾಷೆಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಭಾರತದಲ್ಲಿ ಇರುವವರಿಗೆ ಮಾತ್ರ ಮೂರಕ್ಕಿಂತಲೂ ಹೆಚ್ಚು ಭಾಷೆಗಳನ್ನು ಕಲಿಯಲು ಸಾಧ್ಯವಾಗುತ್ತದೆ. ನಮ್ಮ ಯೋಚನೆಗಳು ನಮ್ಮ ಮಾತೃಭಾಷೆ ಮೂಲಕವೇ ಆಗುತ್ತದೆ. ತಂತ್ರಜ್ಞಾನದ ಮೂಲಕ ಈಗ ಭಾಷೆಯನ್ನು ರಕ್ಷಿಸುವ ಕೆಲಸ ಆಗುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಉಪನ್ಯಾಸಕಿ ಶೈಲಜಾ ಪುದುಕೋಳಿ ಪ್ರಸ್ತಾವನೆಗೈದರು. ಶ್ರೀಮತಿ ಸುಜಾತಾ ಜಿ ನಾಯಕ್, ಶ್ರೀಮತಿ ಚೇತನ, ಮನಿಷಾ, ಶ್ರೀಮತಿ ನಮಿತಾ ಉಪಸ್ಥಿತರಿದ್ದರು. ಅಜಯ್ ಸ್ವಾಗತಿಸಿದರು. ಅದಿತಿ ಪ್ರಾರ್ಥಿಸಿದರು. ವೈಷ್ಣು ಅತಿಥಿಗಳನ್ನು ಪರಿಚಯಿಸಿದರು. ಮೇಘನಾ ನಿರೂಪಿಸಿದರು. ಶ್ರೇಯಾ ಕಾಮತ್ ವಂದಿಸಿದರು. ಈ ಸಂದರ್ಭದಲ್ಲಿ ಸಂಸ್ಕೃತ ಶ್ಲೋಕ ಪಠಣ,ಕನ್ನಡ ರಂಗ ಸಂಗೀತ, ಕೊಂಕಣಿ ಭಜನೆ, ಹಿಂದಿ ದೇಶಭಕ್ತಿ ಗೀತೆ ಹಾಗೂ ತುಳು ಪಾಡ್ದನಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

