ದ
ಕುಳಾಯಿ: ಎಂ. ಶಂಕರನಾರಾಯಣಯ್ಯ ಚಾರಿಟೇಬಲ್ ಟ್ರಸ್ಟ್ (ರಿ) ಕುಳಾಯಿ ಮತ್ತು ಶ್ರೀಮತಿ ಎಂ ಸುಮತಿ ಪೌಂಡೇಶನ್ ಕುಳಾಯಿ ಇದರ ರಜತ ವರ್ಷಚಾರಣೆಯ ಪ್ರಯುಕ್ತ ರಜತಾಂಜಲಿ ಪುಸ್ತಕ ಬಿಡುಗಡೆ ಸಮಾರಂಭವು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ರಮೇಶ್ ಎಂ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಶ್ರೀಮತಿ ಕುಮುದ ಪ್ರದೀಪ್ ರವರು ಪ್ರಾರ್ಥನೆಗೈದು, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನ ನಿವೃತ್ತ ಚಯರ್ಮೆನ್ ನರೇಂದ್ರ ಎಂ ರವರು ಸ್ವಾಗತಿಸಿದ್ದು ಟ್ರಸ್ಟ್ ನ ಅಧ್ಯಕ್ಷ ರಮೇಶ್ ಎಂ ರವರನ್ನು ಗೌರವಿಸಿ ಅಭಿನಂದಿಸಿದರು.
ಹಿಂದು ವಿದ್ಯಾದಾಯಿನೀ ಸಂಘದ ನಿಕಟ ಪೂರ್ವ ಕಾರ್ಯದರ್ಶಿ ಎಂ. ವೆಂಕಟ್ರಾವ್ ರವರು ಪ್ರಾಸ್ತಾವಿಕ ಭಾಷಣ ಮಾಡಿ ಎಂ. ಶಂಕರನಾರಾಯಣಯ್ಯ ಮತ್ತು ಶ್ರೀಮತಿ ಎಂ ಸುಮತಿ ದಂಪತಿಗಳು ಶ್ರಮ ಜೀವಿಗಳು ಮತ್ತು ಆದರ್ಶ ಜೀವನ ನಡೆಸಿ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಿದ್ದರು, ಅವರ ಹೆಸರಿನಲ್ಲಿ ಟ್ರಸ್ಟ್ ಮೂಲಕ ನಿರಂತರ 25 ವರ್ಷ ಸಮಾಜ ಸೇವೆ ಸಲ್ಲಿಸಿರುವುದು ಸ್ತುತ್ಯರ್ಹ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಸುರತ್ಕಲ್ ಗೋವಿಂದ ದಾಸ ಪ್ರಥಮ ದರ್ಜೆ ಕಾಲೇಜು ನಿವೃತ್ತ ಗ್ರಂಥಪಾಲಕ ಬಾಲಕೃಷ್ಣ ರವರು ಸತತವಾಗಿ ರಚಿಸಿದ್ದ ಮೂರನೇ ಪುಸ್ತಕ ರಜತಾಂಜಲಿ ಬಗ್ಗೆ ವಿವರ ನೀಡಿ್ದರು. ನಿವೃತ್ತ ಶಿಕ್ಷಕ ಬಿ ರಘುರಾಮ ರಾವ್ ರವರು ರಜತಾಂಜಲಿ ಪುಸ್ತಕ ಬಿಡುಗಡೆಗೊಳಿಸಿ ಎಂ ಶಂಕರನಾರಾಯಣಯ್ಯ ಮತ್ತು ಶ್ರೀಮತಿ ಎಂ ಸುಮತಿ ರವರ ಆದರ್ಶ ಇಂದಿನ ಸಮಾಜಕ್ಕೆ ದಾರಿದೀಪ ಎಂದರು.
ಟ್ರಸ್ಟ್ ನ ಆರಂಭದಿಂದಲೂ ಟ್ರಸ್ಟಿ, ಕಾರ್ಯದರ್ಶಿ, ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾಗಿರುವ ದಿವಂಗತ ರಾಮಕೃಷ್ಣ ಎಚ್ ರವರಿಗೆ ದಿವಾಕರ್ ಎಂ ಮತ್ತು ಆನಂದ ಎಂ ಎ ಗೌರವಾಂಜಲಿ ಸಲ್ಲಿಸಿ ಮಂಗಳೂರಿನ ಹಿರಿಯ ನ್ಯಾಯವಾದಿ ರಂಜನ್ ರಾವ್ ರವರು ಗೌರವ ಪತ್ರವನ್ನು ಶ್ರೀಮತಿ ಶ್ರೀದೇವಿ ಮತ್ತು ಮಕ್ಕಳಿಗೆ ಹಸ್ತಾಂತರಿಸಿದರು.
ಟ್ರಸ್ಟ್ ನ ಹಿರಿಯ ಸದಸ್ಯರು ರಾಜೇಂದ್ರ ಪದಕಣ್ಣಾಯ ಮತ್ತು ಶ್ರೀಮತಿ ಜಯಲಕ್ಷ್ಮಿ ದಂಪತಿಗಳನ್ನು ಅಭಿನಂದಿಸಲಾಯಿತು. ಸಮಾರಂಭದ ಅಧ್ಯಕ್ಷ ರಮೇಶ್ ಎಂ ರವರು ಟ್ರಸ್ಟಿನ ಕೆಲಸಕ್ಕೆ ಸಹಕರಿಸಿದವರಿಗೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಟ್ರಸ್ಟಿನ ಬೆಳವಣಿಗೆಗೆ ಸರ್ವರ ಸಹಕಾರವನ್ನು ಅಪೇಕ್ಷಿಸಿದರು. ಶ್ರೀಪತಿ ಭಟ್ ರವರು ಧನ್ಯವಾದ ನೀಡಿದರು. ಪ್ರದೀಪ್ ಎಂ ರವರು ಕಾರ್ಯಕ್ರಮ ಸಂಯೋಜನೆ ಮಾಡಿ ಶ್ರೀನಿವಾಸ ಕುಳಾಯಿ ನಿರೂಪಣೆ ಮಾಡಿದರು. ಟ್ರಸ್ಟ್ ನ ಸದಸ್ಯರು, ಮನೆಯವರು, ಅಭಿಮಾನಿಗಳು, ಸಾರ್ವಜನಿಕ ಬಂಧುಗಳು ಉಪಸ್ಥಿತರಿದ್ದರು.


