ಜಯಂಟ್ಸ್ ವೆಲ್ಫೇರ್ ಫೌಂಡೇಶನ್: ಫೆಡರೇಶನ್ ಪ್ರಶಸ್ತಿ ಪ್ರದಾನ ಸಮಾರಂಭ

Upayuktha
0


ಉಡುಪಿ: ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಫೆಡರೇಶನ್ ಇದರ ವತಿಯಿಂದ ಜಯಂಟ್ಸ್ ಗ್ರೂಪ್ ಆಫ್ ಉಡುಪಿ ಇದರ ಅತಿಥ್ಯದಲ್ಲಿ ಜಯಂಟ್ಸ್ ಫೆಡರೇಶನ್ ಪ್ರಶಸ್ತಿ ಪ್ರಧಾನ ಸಮಾರಂಭ ಲಯನ್ಸ್ ಭವನದಲ್ಲಿ ನ.6ರಂದು ನಡೆಯಿತು.


ಕಾರ್ಯಕ್ರಮದ ಮುಖ್ಯ ಅತಿಥಿ ಶಿವ೯ ಮಹಾಲಸಾ ನಾರಾಯಣಿ ದೇವಸ್ಥಾನದ ಪ್ರಧಾನ ಅರ್ಚಕ ರಘುರಾಮ್ ಭಟ್ ಮಾತನಾಡಿ, ಜಯಂಟ್ಸ್  ಸಂಸ್ಥೆಯು ಬಹಳ ಪ್ರಭಾವಿಯಾಗಿ ಸಮಾಜದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನೀಯ ಎಂದರು.


ಜಯಂಟ್ಸ್ ಫೆಡರೇಶನ್ ಸೆಂಟ್ರಲ್ ಕಮಿಟಿ ಮೆಂಬರ್ ದಿನಕರ ಅಮೀನ್ ಮಾತನಾಡಿ, ಜಯಂಟ್ಸ್ ಸಂಸ್ಥೆಯು ಭಾರತೀಯ ಮೂಲದ ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು ಕಳೆದ ಐದು ದಶಕಗಳಿಂದ ಮಾನವೀಯ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಸಮಾಜದಲ್ಲಿ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಅಪೂರ್ವ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಕಾರ್ಯ ಎರಡು ದಶಕಗಳಿಂದ ನಿರಂತರವಾಗಿ ನಡೆಯುತ್ತಿದೆ ಎಂದರು.


ಈ ಸಂದರ್ಭದಲ್ಲಿ ಡಾ ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಶಶಿಕಿರಣ್ ಯು, ಸಮುದಾಯ ವಿಭಾಗದಲ್ಲಿ ಡಾ. ಸಿ ಎಚ್ ವಿ ಎಸ್ ವಿ ಪ್ರಸಾದ್, ಸೇವಾ ವಿಭಾಗದಲ್ಲಿ ಡಾ. ಸ್ಪೂರ್ತಿ ಮಸ್ತಿ ಹೊಳಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಣೇಶ್ ಕಲ್ಯಾಣಪುರ ಚಲನಚಿತ್ರ ರಂಗದಲ್ಲಿ ರಾಜಿ ಎಂ ರಾವ್, ಶಿಕ್ಷಣ ಕ್ಷೇತ್ರದಲ್ಲಿ ರಾಜೇಂದ್ರ ಭಟ್, ಕೃಷಿ ವಿಭಾಗದಲ್ಲಿ ಮಂಜುನಾಥ ಸಾನು, ಕ್ರೀಡಾ ಕ್ಷೇತ್ರದ ಸಾಧಕ ಅವಿನಾಶ್ ಶೆಟ್ಟಿ, ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಮಲಾಕ್ಷ ಸುವರ್ಣ ಅವರನ್ನು ಜಯಂಟ್ಸ್ ಫೆಡರೇಶನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಂಟ್ಸ್ ಫೆಡರೇಶನ್ ಅಧ್ಯಕ್ಷ ತೇಜಶ್ವರ್ ರಾವ್ ವಹಿಸಿ ಶುಭ ಹಾರೈಸಿದರು.ವೇದಿಕೆಯಲ್ಲಿ ಜಯಂಟ್ಸ್ ಫೆಡರೇಶನ್ ಪದಾಧಿಕಾರಿಗಳಾದ ವೆಂಕಟೇಶ್, ದೀಪಕ್ ಭೋಜ್, ಗಜಾನನ ನೀಲಕರಿ, ಜಯಂಟ್ಸ್ ಗ್ರೂಪ್ ಆಫ್ ಉಡುಪಿ ಅಧ್ಯಕ್ಷ ವಿನಯ್ ಕುಮಾರ್ ಪೂಜಾರಿ, ಕಾರ್ಯದರ್ಶಿ ದಿವಾಕರ್ ಪೂಜಾರಿ, ವಾದಿರಾಜ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರ ಮಾಹಿತಿ ಒಳಗೊಂಡ ವಿಶೇಷ ಪುಸ್ತಕವನ್ನು ಬಿಡುಗಡೆಗೊಳಿಸ ಲಾಯಿತು. ರೇಖಾ ಪೈ, ಜಗದೀಶ್ ಅಮೀನ್, ರೋಷನ್ ಬಳ್ಳಾಲ್, ಸಮೀತ್ ಶೆಟ್ಟಿ, ಇಕ್ಬಲ್ ಮನ್ನಾ, ನವೀನಚಂದ್ರ ಸನ್ಮಾನಿತರ ಪರಿಚಯ ಮಾಡಿದರು ದಿವಾಕರ್ ಪೂಜಾರಿ ವಂದಿಸಿದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top