'ನಕ್ಕುಬಿಡು ಬಾನಕ್ಕಿ' ಗಜಲ್ ಸಂಕಲನ ಬಿಡುಗಡೆ

Chandrashekhara Kulamarva
0


ಉಜಿರೆ: ಎಸ್‌.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯ, ಉಜಿರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಎಸ್‌.ಡಿ.ಎಂ. ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶ್ರೀಮತಿ ವನಜಾ ಜೋಶಿ ಅವರ ನಕ್ಕು ಬಿಡು ಬಾನಕ್ಕಿ ಗಜಲ್ ಸಂಕಲನದ ಬಿಡುಗಡೆ ಹಾಗೂ ಗಜಲ್ ರಚನಾ ಕಾರ್ಯಾಗಾರ ಆಕರ್ಷಕವಾಗಿ ನೆರವೇರಿತು.


ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಅವರು ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸಂತೋಷ್ ಆಲ್ಬರ್ಟ್ ಸಲ್ದಾನಾ ಉದ್ಘಾಟನೆ ನೆರವೇರಿಸಿದರು.


ಎನ್‌.ವಿ. ಡಿಗ್ರಿ ಕಾಲೇಜು, ಕಲಬುರಗಿಯ ಗಜಲ್ ಕವಿ ಹಾಗೂ ಕನ್ನಡ ಪ್ರಾಧ್ಯಾಪಕರಾದ ಡಾ. ಮಲ್ಲಿನಾಥ ಎಸ್. ತಳವಾರ ಅವರು ಗಜಲ್ ರಚನಾ ಕಾರ್ಯಾಗಾರ ನಡೆಸಿ ಗಜಲ್ ಸಾಹಿತ್ಯದ ವಿನ್ಯಾಸ, ಪರಂಪರೆ ಮತ್ತು ತಂತ್ರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಆಳವಾದ ತಿಳಿವಳಿಕೆ ನೀಡಿದರು. ಸಾಹಿತಿ ಸುಮನಾ ಆರ್. ಹೇರ್ಳೆ ಪುಸ್ತಕ ಪರಿಚಯ ನೀಡಿ, ಕೃತಿಯ ಭಾವನಾತ್ಮಕ ವ್ಯಾಪ್ತಿ ಮತ್ತು ಸಂಗತಿಯನ್ನೆತ್ತಿಹಿಡಿದರು. ಕೃತಿಕಾರರಾದ ವನಜಾ ಜೋಶಿ ತಮ್ಮ ಬರವಣಿಗೆಯ ಅನುಭವ ಹಂಚಿಕೊಂಡರು.


ಕಾರ್ಯಕ್ರಮಕ್ಕೆ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಯದುಪತಿ ಗೌಡ ಸ್ವಾಗತ ಭಾಷಣ ಮಾಡಿದರು. ಕಾರ್ಯಕ್ರಮ ನಿರೂಪಣೆ ಅರುನಾ ಶ್ರೀನಿವಾಸ್ ಅವರಿಂದ ನಡೆಯಿತು.


ಸಾಹಿತ್ಯಾಸಕ್ತರು, ಎಸ್‌.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯದ ಬೋಧಕ–ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಕಾರ್ಯಕ್ರಮ ಕೃತಜ್ಞತಾ ಸೂಚನೆಯೊಂದಿಗೆ ಸಮಾರೋಪಗೊಂಡಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top