ಕಲಾಕುಂಚ ಕೇರಳ ಗಡಿನಾಡಿನ ಶಾಖೆಯ ಸಹಯೋಗದೊಂದಿಗೆ ಗೀತಾ ಸಪ್ತಾಹ ಸಂಪನ್ನ

Upayuktha
0


ಕಾಸರಗೋಡು: ಕೊಂಡೆವೂರು  ಎಸ್ ಎಸ್ ಏನ್ ವಿ ಪಿ ಶಾಲೆ ಕೊಂಡೆವೂರಲ್ಲಿ ಕಲಾ ಕುಂಚ ಕೇರಳ ಗಡಿನಾಡ ಘಟಕದ  ಸಹಯೋಗದೊಂದಿಗೆ ಡಿಸೆಂಬರ್ ಒಂದರಿಂದ 7ನೇ ತಾರೀಖಿನವರೆಗೆ ಗೀತಾ ಜಯಂತಿಯ ಅಂಗವಾಗಿ ಗೀತಾ ಸಪ್ತಾಹ ಜರಗಿತು.


ಡಿಸೆಂಬರ 1 ನೇ ತಾರೀಕಿಗೆ ಗೀತಾ ಜ್ಞಾನ ಯಜ್ಞದ ಪ್ರಧಾನ ಗುರುಗಳಾದ ಶ್ರೀಯುತ ಸುಬ್ರಾಯ ನಂದೋಡಿ ಅವರಿಂದ ಗೀತಾಸಪ್ತಾಹದ ಉದ್ಘಾಟನೆ ಶಾಲೆಯ ಪ್ರಧಾನ ವೇದಿಕೆಯಲ್ಲಿ ಜರಗಿತು. ನಂತರ ಪ್ರತಿದಿನ ಗೀತಾ ಮಹಾತ್ಮೆಯನ್ನು ಮಕ್ಕಳಿಂದ ಹೇಳಿಸಿ ಶ್ರೀಯುತರಾದ ಮನೋಜ್ ಮತ್ತು ಚಂದ್ರಶೇಖರ್ ಶ್ರೀಮತಿಯರಾದ ತಾರಾಲತಾ, ಸುಮಾ ಹಾಗು ಸ್ವಾತಿಯವರು ಶ್ಲೋಕ ಅರ್ಥಕ್ಕೆ ಸಂಬಂಧಪಟ್ಟ ಕಥೆ ಹೇಳಿ ಮಕ್ಕಳನ್ನು ಗೀತಾ ಅಧ್ಯಯನಕ್ಕೆ ಪ್ರೋತ್ಸಾಹಿಸಿದರು.


ಏಳನೇ ದಿನ ಬೆಳಗ್ಗೆ 9 ಗಂಟೆಗೆ ಕೊಂಡೆವೂರು ಗಾಯತ್ರಿ ಮಂದಿರದಲ್ಲಿ ಪೂಜಿಸಲ್ಪಟ್ಟ ಶ್ರೀಮದ್ ಭಗವದ್ಗೀತಾ ಪುಸ್ತಕವನ್ನು ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ಜೊತೆಗೆ ಗೀತಾಮಾತೆಯನ್ನು ಬ್ರಹ್ಮವಾಹಕರ ವೇಷ ಧರಿಸಿದ ವಿದ್ಯಾರ್ಥಿ ವೇದಾಂತ ಕಾರಂತ್ ಹೊತ್ತುಕೊಂಡು ಗೀತಾ ಪಠಣ ಹಾಗೂ ಚಂಡೆ ವಾದ್ಯ ಘೋಷದೊಂದಿಗೆ ಮೆರವಣಿಗೆ ಮಾಡಲಾಯಿತು.


ಸಭೆಯಲ್ಲಿ ಗೀತಾ ಆರತಿಯನ್ನು ಮಾಡಿ ಪರಮಪೂಜ್ಯ ಸ್ವಾಮೀಜಿಯವರು ಆಶೀರ್ವಚನವಿತ್ತರು ನಂತರ ಮಕ್ಕಳು ಫಲಹಾರ ಮುಗಿಸಿ ಸ್ಪರ್ಧೆಗೆ ಅಣಿಯಾದರು. ನಾಲ್ಕು ಹಂತಗಳಲ್ಲಿ ಸ್ಪರ್ಧೆ ಏಕಕಾಲದಲ್ಲಿ ನಡೆಯಿತು, ನಂತರ ಗೀತಾ ಪಠಣ ಮಕ್ಕಳಿಂದ ಸಾಮೂಹಿಕವಾಗಿ ನೆರವೇರಿತು.


ಕೊನೆಗೆ ಸಮರೋಪ ಸಮಾರಂಭವು ಶಾಲಾ ಆಡಳಿತ ಅಧಿಕಾರಿಯಾಗಿ ಗಿರಿಧರ್ ರಾವ್ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಬಿ ವಿದ್ಯಾ ರಾವ್ ನಿವೃತ್ತ ಅಧಿಕಾರಿ ಕುದುರೆಮುಖ ಕಬ್ಬಿಣ ಅದಿರು ಕಾರ್ಖಾನೆ, ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಕೇರಳ ಗಡಿನಾಡ ಘಟಕ ಜಯಪ್ರಕಾಶ್ ತೊಟ್ಟೆತೋಡಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬಹುಮಾನ ವಿತರಣೆ ಮಾಡಿದರು. ಕೇರಳ ಗಡಿನಾಡ ಘಟಕದ ಅಧ್ಯಕ್ಷರು ಜಯಲಕ್ಷ್ಮಿ ಕಾರಂತರು ಕಾರ್ಯಕ್ರಮದ ನಿರ್ವಹಣೆ ಮಾಡಿದರು,  ರೇಖಾ ಪ್ರದೀಪ್, ಇಡೀ ಕಾರ್ಯಕ್ರಮದ ಮುಖ್ಯ ಸಂಘಟನೆಯನ್ನು ಮಾಡಿದರು, ಚಂದ್ರಶೇಖರ್ ಮತ್ತು  ಗಾಯತ್ರಿ ಅವರು ಕಾರ್ಯಕ್ರಮದ ಸಂಪೂರ್ಣ ಹೊಣೆಗಾರಿಕೆಯನ್ನು ವಹಿಸಿದರು,  ಚಂದ್ರಶೇಖರ್‌ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top