ಬೆಂಗಳೂರು: ವಿಕಸನ ಟ್ರಸ್ಟ್ ವತಿಯಿಂದ ಡಿಸೆಂಬರ್ 7, ಭಾನುವಾರ ಸಂಜೆ 4-30ಕ್ಕೆ ಮೇರು ಕವಿ ಡಾ|| ಎಚ್.ಎಸ್. ವೆಂಕಟೇಶ ಮೂರ್ತಿ ಮತ್ತು 'ರಿದಮ್ ಕಿಂಗ್' ಶ್ರೀ ಎಸ್. ಬಾಲಿ, ಇವರ ನೆನಪಿನಲ್ಲಿ "ಗಾನ ನಮನ" ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸುಗಮಸಂಗೀತ ಗಾಯಕರಾದ ಶ್ರೀನಿವಾಸ ಉಡುಪ ವಹಿಸುವರು. ಅಪರ್ಣಾ ನರೇಂದ್ರ, ನಿತಿನ್ ರಾಜಾರಾಂ ಶಾಸ್ತ್ರಿ, ವಿಕಸನ ಹಾಗೂ ಗುರುಕುಲಂ ಮಕ್ಕಳು"ಗಾನ ನಮನ" ಸಲ್ಲಿಸುವರು. ವಾದ್ಯ ಸಹಕಾರದಲ್ಲಿ ಕೃಷ್ಣ ಉಡುಪ, ಜಿ. ಎಲ್. ರಮೇಶ್ ಕುಮಾರ್, ಆರ್. ಲೋಕಿ ಮತ್ತು ಎನ್. ಗುರುರಾಜ್. ನಿರೂಪಣೆ- ದಿವಾಕರ ಕಶ್ಯಪ್. ಸ್ಥಳ : ಶ್ರೀ "ಶಂಕರ ಕೃಪ" ಸಭಾಂಗಣ, ಶ್ರೀ ಶೃಂಗೇರಿ ಶಾರದಾಂಬಾ ದೇವಾಲಯ, ಗಿರಿನಗರ, ಬೆಂಗಳೂರು-85.
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಸ್ಥೆಯ ಅಧ್ಯಕ್ಷೆ ಅಪರ್ಣಾ ನರೇಂದ್ರ ವಿನಂತಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


