ಬದಿಯಡ್ಕ: ಬಡಗು ಶಬರಿಮಲೆ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನ ಉಬ್ರಂಗಳದಲ್ಲಿ ಪಾಟು ಉತ್ಸವ ಭೂತಬಲಿ ಉತ್ಸವದ ಪ್ರಯುಕ್ತ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವು ವೈವಿಧ್ಯಮಯವಾಗಿ ಮೂಡಿ ಬಂತು.
ರಾಜೇಶ್ ಮಾಸ್ಟರ್ ಉಬ್ರಂಗಳ ಸ್ವಾಗತ ಕೋರಿದರು. ಸಾಹಿತ್ಯಾಮೃತ ಕಾರ್ಯಕ್ರಮವು ಡಾ. ವಾಣಿಶ್ರೀ ಅವರ ಸಾಹಿತ್ಯ ಪ್ರಸ್ತುತಿಯೊಂದಿಗೆ ನಡೆಯಿತು. ಮಧುಲತಾ ಪುತ್ತೂರು, ವಿಶ್ವನಾಥ ಪುತ್ತಿಗೆ, ರತ್ನಾಕರ ಒಡಂಗಲ್ಲು, ಮುರಳಿ ನೀರ್ಚಾಲ್, ಈಶ್ವರ ಸೂರಂಬೈಲ್ ಮುಂತಾದ ಕಲಾವಿದರು ಹಾಡಿ ನೆರೆದ ಸಭಾಸದರನ್ನು ರಂಜಿಸಿದರು.
ಮನಸೂರೆಗೊಳಿಸಿದ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಶಾಲು ಹೊದೆಸಿ ಗೌರವ ಸ್ಮರಣಿಕೆ, ಡಾ. ವಾಣಿಶ್ರೀ ಅವರ ಚೊಚ್ಚಲ ಕೃತಿ ಪ್ರಕೃತಿ ಹಾಗೂ ಡಾ. ಲಕ್ಷ್ಮಣಮೂರ್ತಿ ರಚಿತ ರಾಣಿ ಅಬ್ಬಕ್ಕ ಜೊತೆ ಪಯಣ ಎಂಬ ಕೃತಿ ನೀಡಿ ಗೌರವಿಸಲಾಯಿತು. ಡಾ. ವಾಣಿಶ್ರೀ ಅವರಿಗೆ ಫಲ ಪುಷ್ಪ ಶ್ರೀ ದೇವರ ಪ್ರಸಾದ ಕೊಟ್ಟು ಹರಸಲಾಯಿತು.
ವೇದಿಕೆಯಲ್ಲಿ ಗಣ್ಯರಾದ ಜಯರಾಜ್ ಕುಣಿಕುಳ್ಳಾಯ, ಕಿರಣ್ ಕುಣಿಕುಳ್ಳಾಯ, ರಾಜೇಶ್ ಮಾಸ್ಟರ್ ಉಬ್ರoಗಳ, ಸುಬ್ರಹ್ಮಣ್ಯ ಮಾಸ್ಟರ್, ಅಚ್ಯುತ ಭಟ್, ರಾಜೇಶ್, ಸಂಸ್ಥೆಯ ಮಹಿಳಾ ನಾಟ್ಯರತ್ನ ಮಧುಮತಿ ರಾಜೇಶ್ ಶಡ್ರಂಪಾಡಿ ರವಿ ಕುರುಪ್ ಉಬ್ರoಗಳ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


