ಸರ್ಕಾರಿ ಕೆಲಸದಲ್ಲಿ ಮಾದರಿ ಸೇವೆಯೇ ಇತರರಿಗೆ ಪ್ರೇರಣೆ : ಡಾ.ಉಮೇಶ್ ಜಾಧವ್
ಕಲಬುರಗಿ: ಸರಕಾರಿ ವೃತ್ತಿಯಲ್ಲಿ ಸೂಕ್ಷ್ಮ ಸವಾಲುಗಳನ್ನು ಎದುರಿಸಿ ನಿಯಮದ ಚೌಕಟ್ಟಿನಲ್ಲಿ ಮಾದರಿಯಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದರೆ ಅದು ಇತರ ನೌಕರರಿಗೆ ಪ್ರೇರಣೆಯಾಗಲಿದೆ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಹೇಳಿದರು.
ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸಂಪರ್ಕ ಮತ್ತು ಕಟ್ಟಡಗಳ ದಕ್ಷಿಣ ವಲಯದ ಇಂಜಿನಿಯರಿಂಗ್ ವಿಭಾಗದಲ್ಲಿ ಮುಖ್ಯ ಇಂಜಿನಿಯರಾಗಿ ಸೇವೆ ಸಲ್ಲಿಸಿದ ಮೂಲತಃ ಚಿಂಚೋಳಿಯ ಕೃಷ್ಣ ಅಗ್ನಿಹೋತ್ರಿ ಇಲಾಖೆಯಲ್ಲಿ 40 ವರ್ಷಗಳ ಸೇವೆಯ ನಂತರ ನವೆಂಬರ್ 30ರಂದು ಸೇವೆಯಿಂದ ನಿವೃತ್ತಿಯಾಗುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನ ಇಂಜಿನಿಯರ್ ಸಭಾಂಗಣದಲ್ಲಿ ನವೆಂಬರ್ 28ರಂದು ಶುಕ್ರವಾರ ನಡೆದ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿ ಅಗ್ನಿಹೋತ್ರಿಯವರು ಅಂತಹ ವಿಶೇಷ ವ್ಯಕ್ತಿತ್ವ ಹೊಂದಿದ ಜನಸ್ನೇಹಿ ಇಂಜಿನಿಯರ್ ಆಗಿದ್ದರು. ಬದ್ಧತೆಯೊಂದಿಗೆ ಕಾನೂನಿನಡಿಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಕೆಲಸ ಮಾಡಿ ಮಾದರಿಯಾಗಿ, ಯಾವುದೇ ಪಕ್ಷಪಾತವಿಲ್ಲದೆ ಹಾಗೂ ಕಪ್ಪು ಚುಕ್ಕೆ ಹೊಂದದೆ ನಿವೃತ್ತಿಯಾಗುತ್ತಿರುವ ಸರಳ ವ್ಯಕ್ತಿತ್ವದವರು. ಚಿಂಚೋಳಿಯಂತಹ ಪ್ರದೇಶಗಳಲ್ಲಿ ಭೂಕಂಪದ ವೇಳೆ ಮನೆ ನಿರ್ಮಾಣ ,ನೀರಾವರಿ ಯೋಜನೆಗಳಲ್ಲಿ ಕೆಲಸ ಮಾಡಿ ಜನ ಮೆಚ್ಚುಗೆ ಪಡೆದವರು. ಇಂತಹ ಅಭಿವೃದ್ಧಿ ಚಿಂತಕರು ನಿವೃತ್ತಿಯ ನಂತರ ಕೂಡ ತಮ್ಮನ್ನು ಸಮಾಜ ಸೇವೆಗೆ ಅವರು ತೊಡಗಿಸಿಕೊಳ್ಳಬೇಕು ಎಂದು ಡಾ.ಜಾಧವ್ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಇಂಜಿನಿಯರ್ ಸಿ. ಮಂಜಪ್ಪ, ಜಂಟಿ ಕಾರ್ಯದರ್ಶಿ ನಾಗರಾಜ್,ನಿವೃತ್ತ ಕಾರ್ಯದರ್ಶಿಗಳಾದ ಸದಾಶಿವ ರೆಡ್ಡಿ, ನಿವೃತ್ತ ಮುಖ್ಯ ಇಂಜಿನಿಯರ್ ಶ್ರೀನಿವಾಸ್, ಶ್ರೀಮತಿ ಜ್ಯೋತಿ ಕೃಷ್ಣ ಅಗ್ನಿಹೋತ್ರಿ, ಪೂಜಾ ಕುಲಕರ್ಣಿ ,ರಾಘವೇಂದ್ರ ಅಗ್ನಿಹೋತ್ರಿ, ರಾಘವೇಂದ್ರ ಕುಲಕರ್ಣಿ, ಹೀರಾಬಾಯಿ ಕುಲಕರ್ಣಿ, ಶಾಸಕರಾಪ್ತ ಕಾರ್ಯದರ್ಶಿ ರಾಮಕೃಷ್ಣ, ವೆಂಕಟೇಶ್ ಹಾಗೂ ಸಿಬ್ಬಂದಿಗಳು ಆತ್ಮೀಯರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




