ಪರಸೇವೆ- ಧರ್ಮ ನಡತೆಗೆ ಹಿರಿಯರು ಪಥ ದರ್ಶಿಸಿದ್ದಾರೆ: ಶರಣ್ ಪಂಪ್‌ವೆಲ್

Upayuktha
0


ಮಂಗಳೂರು: "ನಮ್ಮದು ಬಲು ಸನಾತನವಾದ ಸಂಸ್ಕೃತಿ. ಇದನ್ನು ಆಧರಿಸಿ ಹಿರಿಯರು ರಾಷ್ಟ್ರ ಕಟ್ಟಿದರು, ನಮಗೆ ಉತ್ತಮ ಪಥ ದರ್ಶಿಸಿದರು. ಹಾಗಾಗಿ ನಾವು ಹಿರಿಯರನ್ನು ಮರೆಯಲಾಗದು. ಅಂತೆಯೇ, ತುಳುಭಾಷೆಯ ಏಳ್ಗೆಗಾಗಿ ತನ್ನ ಕೊನೆ ಉಸಿರಿನ ತನಕವೂ ಸೇವೆ ಮಾಡುತ್ತಾ ಬಂದು, ತಾನು ಅಧ್ಯಕ್ಷ ಪದವಿಯಲ್ಲಿರುತ್ತಾ ಆ ಲೋಕವನ್ನು ಕಂಡ ಮಹಾನ್ ಚೇತನ ನಿಸರ್ಗರು. ಸಂಘದ ಮಾನ್ಯ ಸಂಘಚಾಲಕರಾಗಿಯೂ ಜವಾಬ್ದಾರಿ  ನಿರ್ವಹಿಸಿದವರು. ಗರಡಿಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ದುಡಿದವರ ಸಂಸ್ಮರಣೆ ಆಗುತ್ತಿರುವುದು ಅತ್ಯಂತ ಶ್ಲಾಘನೀಯು" ಎಂದು ವಿಹಿಂಪ ನಾಯಕ ಶರಣ್ ಪಂಪ್‌ವೆಲ್ ಹೇಳಿದರು.


ಅವರು ಸರಯೂ ಬಾಲ ಯಕ್ಷ ವೃಂದ ಮತ್ತು ತುಳುಕೂಟ ನಡೆಸುತ್ತಿರುವ ತುಳು ತಾಳಮದ್ದಳೆ ಸಪ್ತಾಹದಲ್ಲಿ ಮಾತನಾಡಿದರು.


ಯಕ್ಷಗಾನ ಭಾಗವತ- ಅರ್ಥಧಾರಿ- ಲ. ಯೋಗೀಶ್ ಕುಮಾರ್ ಜೆಪ್ಪು ರವರನ್ನು ಪಾಂಡೇಶ್ವರ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯ ಪರವಾಗಿ ಗೌರವಿಸಲಾಯಿತು. ಖ್ಯಾತ ಯಕ್ಷ ಕಲಾವಿದ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಉದಯ ಕುಂಜತ್ತೂರು ಹಿರಿಯರಾದ ಬೋಳಾರ ಸುಬ್ಬಯ್ಯ ಶೆಟ್ಟಿ, ಹೇಮಾ ದಾಮೋದರ ನಿಸರ್ಗ, ರವಿ ಅಲೆವೂರಾಯ, ನಾಗೇಶ್ ದೇವಾಡಿಗ ಕದ್ರಿ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top