ಡಾ. ಉಷಾ ಅಗರಖೇಡ ಇವರಿಗೆ ಮೈತ್ರೇಯಿ ಜೀವಮಾನ ಸಾಧನೆ ಪ್ರಶಸ್ತಿ

Upayuktha
0


ಬೆಂಗಳೂರು: ಹರಿದಾಸ ಸಾಹಿತ್ಯದಲ್ಲಿ ಭಕ್ತಿಯ ಕುರಿತಾಗಿ ಆಳವಾದ ಅಧ್ಯಯನ ನಡೆಸಿ, ಪ್ರೌಢ ಪ್ರಬಂಧವನ್ನು ಮಂಡಿಸಿ, ಪಿ.ಹೆಚ್‌.ಡಿ ಪದವಿಯನ್ನು ಪಡೆದು, ಸ್ವತಃ ಹರಿದಾಸರಾಗಿದ್ದು, ಲಕ್ಷ್ಮಿ ಸುತೆ ಅಂಕಿತದಿಂದ ಅನೇಕ ಕೃತಿಗಳನ್ನು ರಚಿಸಿದ, ಡಾ. ಉಷಾ ಅಗರಖೇಡ ಇವರು, ಹರಿದಾಸ ಸಾಹಿತ್ಯಕ್ಕೆ ಸಲ್ಲಿಸಿದ ಅನನ್ಯ ಸೇವೆಯನ್ನು ಗುರುತಿಸಿ, ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ (ರಿ) ವತಿಯಿಂದ, "ಮೈತ್ರೇಯಿ ಜೀವಮಾನ ಸಾಧನೆ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪಡೆದ ಸಾಧಕಿಯು, ಪ್ರಸ್ತುತ ಮಹಿಳಾ ಹರಿದಾಸರಿಗೆ, ಭಗವಂತನಲ್ಲಿಯ ಭಕ್ತಿಯನ್ನು, ಅನುಭವ ದಿಂದಲೇ ಪಡೆಯಬೇಕು, ಅಂದರೆ ಮಾತ್ರ ಭಕ್ತಿಯ ತಾದಾತ್ಮ್ಯ ಸಾಧ್ಯ. ಪ್ರತಿಯೊಬ್ಬ ಮಹಿಳಾ ಹರಿದಾಸರೂ, ತಮ್ಮ ಲೌಕಿಕ ಸಾಧನೆಯ ಜೊತೆ ಜೊತೆಗೆ ಸ್ವಂತ ಅಧ್ಯಾತ್ಮ ಸಾಧನೆಗೆಂದೇ ದಿನದಲ್ಲಿ ಕೆಲ ಸಮಯ ಮೀಸಲಾಗಿಡಬೇಕು ಎಂದು ಹೇಳಿದರು.


ಭಾನುವಾರ (ಡಿ.14) ಡಾ.ಉಷಾ ಅಗರಖೇಡ ಇವರ ಬೆಂಗಳೂರಿನ ಸ್ವಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ (ರಿ) ನ ಪರವಾಗಿ, ಉಪಾಧ್ಯಕ್ಷರಾದ ಡಾ. ಶಾಂತಾ ರಘೂತ್ತಮ ಇವರು, ಸ್ಮರಣಿಕೆ ಹಾಗೂ ವಿಶೇಷ ಗ್ರಂಥಗಳನ್ನು ನೀಡಿ ಗೌರವಿಸಿದರು. ಡಾ. ಉಷಾ ಅಗರಖೇಡ ಇವರ ಅನುಭವಗಳನ್ನು ಹಾಗೂ ಸಾಧನೆಯನ್ನು ಅವರಿಂದಲೇ ಸಂಗ್ರಹಿಸಲಾಯಿತು. ಪ್ರಧಾನ ಕಾರ್ಯದರ್ಶಿ ಡಾ.ವೃಂದಾ ಸಂಗಮ್ ಇವರು ಡಾ. ಉಷಾ ಅಗರಖೇಡ ಇವರ ಸಂದರ್ಶನ ಮಾಡಿದರು. ಟ್ರಸ್ಟ್ ನ ಕೋಶಾಧ್ಯಕ್ಷೆ ಡಾ. ವಿದ್ಯಾಶ್ರೀ ಕುಲಕರ್ಣಿಯವರು ವಂದನಾರ್ಪಣೆ ಮಾಡಿದರು.


ತಮ್ಮ ಸಾಧನೆಯ ಜೊತೆಗೆ ಮಕ್ಕಳು, ಸೊಸೆಯರಿಗೂ ಅಧ್ಯಾತ್ಮದ ಸವಿ ತೋರಿ, ಆ ಮಾರ್ಗದಲ್ಲಿ ನಡೆಯಲು, ಸ್ಫೂರ್ತಿ ತುಂಬಿ, ಸ್ವತಃ ತಾವು ವಿಶೇಷ ಸಾಧನೆ ಮಾಡಿರುವ ಮಹಿಳೆ ಡಾ. ಉಷಾ ಅಗರಖೇಡ ಇವರು ಈಗಾಗಲೇ ನಾಲ್ಕು ಪುಸ್ತಕಗಳನ್ನು ರಚಿಸಿದ್ದು, ಸಮಾಜದಲ್ಲಿ ಎಲೆ ಮರೆಯ ಕಾಯಿಯಂತೆ ಇದ್ದಾರೆ. ಇವರಂತಹ ಅನೇಕ ಸಾಧನಾ ಮಹಿಳೆಯರನ್ನು ಗುರುತಿಸುವ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ (ರಿ) ನ ಕಾರ್ಯ ಅತ್ಯಪೂರ್ವ ವಾದುದು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top